

ಮೇಷ: ಅಷ್ಟಮದ ಕೇತು ಖಿನ್ನತೆಗೆ ಕಾರಣ ಆಗಬಹುದು. ತಾಳ್ಮೆಯಿಂದ ವರ್ತಿಸಿ. ವ್ಯಾಪಾರಸ್ಥರಿಗೆ ಲಾಭ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 9
ವೃಷಭ: ಪ್ರತಿಸ್ಪರ್ಧಿಗಳಿಂದ ಆಸ್ತಿ ವಿಚಾರದಲ್ಲಿ ತೊಂದರೆ ಸಾಧ್ಯತೆ. ಕುಟುಂಬದಲ್ಲಿ ಪ್ರಮುಖ ವಿಷಯದ ತೀರ್ವನ. ಮನೋವ್ಯಥೆ. ಶುಭಸಂಖ್ಯೆ: 4
ಮಿಥುನ: ಮನೆಯಲ್ಲಿ ಅಸಮಾಧಾನ. ಬಂಧು-ಮಿತ್ರರಿಂದ ಸಹಾಯ. ಖಾಸಗಿ ಉದ್ಯೋಗಿಗಳಿಗೆ ಪ್ರಗತಿ. ದುರ್ಗೆಯ ಆರಾಧನೆ ಮಾಡಿ. ಶುಭಸಂಖ್ಯೆ: 7
ಕಟಕ: ವ್ಯಾಪಾರ ಉದ್ಯೋಗಗಳು ಪ್ರಗತಿಯಲ್ಲಿ ಸಾಗುತ್ತವೆ. ನಿಮ್ಮ ಹಲವು ದಿನಗಳ ಕಾರ್ಯಯೋಜನೆಯ ಸಾಕಾರ. ಶುಭಸಂಖ್ಯೆ: 8
ಸಿಂಹ: ಹೆಂಡತಿ-ಮಕ್ಕಳೊಂದಿಗೆ ಮನಸ್ತಾಪ. ದುರ್ಬಲರಿಗೆ ಸಹಾಯ ಮಾಡಿ. ಭೂಮಿ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 6
ಕನ್ಯಾ: ಆಸ್ತಿ ವಿಚಾರಕ್ಕಾಗಿ ನ್ಯಾಯಾಲಯದಿಂದ ತೀರ್ಪ. ದಿನಸಿ ವ್ಯಾಪಾರಿಗಳಿಗೆ ಧನ ನಷ್ಟ. ಮಗಳ ವಿವಾಹ ಪ್ರಯತ್ನಕ್ಕೆ ವಿಘ್ನ. ಶುಭಸಂಖ್ಯೆ: 1
ತುಲಾ: ಜೀವನದಲ್ಲಿ ನಿರೀಕ್ಷಿಸಿದಂತೆ ಯಶಸ್ಸು ಇಲ್ಲ. ಮಕ್ಕಳಿಂದ ಧನಹಾನಿ. ಸಾರ್ವಜನಿಕ ಜೀವನದಲ್ಲಿ ಅವಮಾನ ಸಾಧ್ಯ. ಶುಭಸಂಖ್ಯೆ: 1
ವೃಶ್ಚಿಕ: ತಂದೆಯ ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು. ವಿಶೇಷ ಕಾಳಜಿ ವಹಿಸಿ. ಆಸ್ತಿ ಮಾರಾಟಕ್ಕೆ ನಿರ್ಧಾರ ಕೈಗೊಳ್ಳುವಿರಿ. ಶುಭಸಂಖ್ಯೆ: 7
ಧನುಸ್ಸು: ಬಂಧುಗಳ ನೆರವಿನಿಂದ ಮನೆಯಲ್ಲಿ ಸಂಭ್ರಮ. ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು. ಉದ್ಯೋಗದಲ್ಲಿ ಸಮಸ್ಯೆ. ಶುಭಸಂಖ್ಯೆ: 7
ಮಕರ: ಸೇವಕರಿಂದ ಕಿರುಕುಳ. ಕೆಲಸದಲ್ಲಿ ವೈಫಲ್ಯ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಹೃದಯ ಸಂಬಂಧಿ ವ್ಯಾಧಿ ಉಲ್ಬಣ. ಶುಭಸಂಖ್ಯೆ: 4
ಕುಂಭ: ಪೋಷಕರ ಮಾತನ್ನು ಕೇಳಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ. ಶುಭಸಂಖ್ಯೆ: 7
ಮೀನ: ಸಂಗಾತಿಯಿಂದ ಸೂಕ್ತ ಸಲಹೆ, ಮಾರ್ಗದರ್ಶನ. ಬಂಧುಗಳೊಂದಿಗೆ ವಿರಸ. ಕುಟುಂಬದಲ್ಲಿ ಹೊಂದಾಣಿಕೆಯ ಸಮಸ್ಯೆ. ಶುಭಸಂಖ್ಯೆ: 9