ಈ ರಾಶಿಯವರಿಗೆ ಇಂದು ನಾನಾ ವಿಚಾರಗಳಲ್ಲಿ ಆಸಕ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ತ್ರೀಯರಿಗೆ ಶುಭ ದಿನ. ಮಾತೃ ಸೌಖ್ಯ. ಆಪ್ತ ಸ್ನೇಹಿತರ ಭೇಟಿ ಮಾಡುವಿರಿ. ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ. ಶುಭಸಂಖ್ಯೆ: 9

ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಚಂಚಲ ಮನಸ್ಸು. ಥಳುಕಿನ ಮಾತಿಗೆ ಮರುಳಾಗದಿರಿ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 8

ಮಿಥುನ: ಮಾನಸಿಕ ಒತ್ತಡ ತುಂಬ ಕಾಡಲಿದೆ. ಕಾರ್ಯಕ್ಷೇತ್ರ ದಲ್ಲಿಯೂ ತೀವ್ರ ಒತ್ತಡ. ದ್ರವ್ಯ ಲಾಭವಿದೆ. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ: 4

ಕಟಕ: ಅಲ್ಪ ಕಾರ್ಯಸಿದ್ಧಿ. ವಿನಾಕಾರಣ ದ್ವೇಷ. ಹಣಕಾಸಿನ ತೊಂದರೆ. ಮನಃಶಾಂತಿ. ವಿದೇಶ ವಿನಿಮಯಗಳಿಂದ ಲಾಭ. ಶುಭಸಂಖ್ಯೆ: 7

ಸಿಂಹ: ಪರಿಶ್ರಮದಿಂದ ಅಭಿವೃದ್ಧಿ. ಆರೋಗ್ಯದಲ್ಲಿ ಸಮಸ್ಯೆ. ಅಕಾಲ ಭೋಜನ ಸಾಧ್ಯತೆ. ಅತಿಯಾದ ನೋವು, ದೂರ ಪ್ರಯಾಣ. ಶುಭಸಂಖ್ಯೆ: 3

ಕನ್ಯಾ: ಮಕ್ಕಳಿಂದ ಪ್ರೀತಿ. ಆದಾಯಕ್ಕಿಂತ ಖರ್ಚು ಜಾಸ್ತಿ. ನಿವೇಶನ ಖರೀದಿ ಯೋಗ. ನಗದು ವ್ಯವಹಾರಗಳಲ್ಲಿ ಎಚ್ಚರದಿಂದಿರಿ. ಶುಭಸಂಖ್ಯೆ: 7

ತುಲಾ: ಉನ್ನತ ಶಿಕ್ಷಣದಲ್ಲಿ ಯಶಸ್ಸು. ಧಾರ್ವಿುಕ ಕ್ಷೇತ್ರಗಳ ದರ್ಶನ. ಶತ್ರುಬಾಧೆ ಕಾಡಬಹುದು. ಇಷ್ಟ ದೇವರ ಪೂಜೆ ಧ್ಯಾನ ಮಾಡಿ. ಶುಭಸಂಖ್ಯೆ: 2

ವೃಶ್ಚಿಕ: ಗಣ್ಯವ್ಯಕ್ತಿಗಳ ಭೇಟಿ. ಪಾಪ ಕಾರ್ಯಾಸಕ್ತಿ ನಿಯಂತ್ರಿಸಿ. ರಿಯಲ್ ಎಸ್ಟೇಟ್​ನವರಿಗೆ ಲಾಭ. ನಿಂದನೆ ಎದುರಿಸಬೇಕಾದೀತು. ಶುಭಸಂಖ್ಯೆ: 7

ಧನುಸ್ಸು: ವಿನಾಕಾರಣ ದ್ವೇಷ. ಅತಿಯಾದ ನಿದ್ರೆ ಕಾಡಬಹುದು. ದುಷ್ಟ ಚಿಂತನೆ ಒಳ್ಳೆಯದಲ್ಲ. ಶರೀರದಲ್ಲಿ ತಳಮಳ. ನಂಬಿಕೆ ದ್ರೋಹ. ಶುಭಸಂಖ್ಯೆ: 8

ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬವಾದೀತು. ಶ್ರಮಕ್ಕೆ ತಕ್ಕ ಫಲ. ಶುಭ ಕಾರ್ಯಕ್ಕೆ ಅಡೆತಡೆ. ಕುಟುಂಬದಲ್ಲಿ ಕಲಹ. ಶುಭಸಂಖ್ಯೆ: 1

ಕುಂಭ: ಯತ್ನ ಕಾರ್ಯಾನುಕೂಲ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಅಲ್ಪ ಪ್ರಗತಿ. ವಿದೇಶ ಪ್ರಯಾಣ ಸಾಧ್ಯತೆ ಇದೆ. ಶುಭಸಂಖ್ಯೆ: 5

ಮೀನ: ಮಹಿಳೆಯರಿಗೆ ಶುಭ, ಬಂಧುಗಳಿಂದ ಸಹಾಯ, ಧಾರ್ವಿುಕ ಕ್ಷೇತ್ರಕ್ಕೆ ಭೇಟಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸೇವಕರಿಂದ ಕಷ್ಟ. ಶುಭ ಸಂಖ್ಯೆ 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net