

ಮೇಷ: ನಟರಿಗೆ ಅವಕಾಶಗಳು ಸಿಗಲಿವೆ. ತೋಟ ಮತ್ತು ಎಸ್ಟೇಟ್ ಕೆಲಸಗಾರರಿಗೆ ಸಂಪಾದನೆ ಹೆಚ್ಚಲಿದೆ. ಅನಾರೋಗ್ಯದ ಭೀತಿ. ಶುಭಸಂಖ್ಯೆ: 9
ವೃಷಭ: ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಲು ಈ ದಿನ ಸೂಕ್ತ. ಬಂಧುಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲಿದ್ದೀರಿ. ಶುಭಸಂಖ್ಯೆ:1
ಮಿಥುನ: ಪ್ರಿಯ ವ್ಯಕ್ತಿಯೊಂದಿಗೆ ಸೂಕ್ತ ರೀತಿಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವಿರಿ. ಪ್ರಭಾವಶಾಲಿ ವ್ಯಕ್ತಿಯೊಂದಿಗೆ ಭೇಟಿ. ಶುಭಸಂಖ್ಯೆ: 8
ಕಟಕ: ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಂಭವ. ರಾಜಕೀಯದ ಪ್ರಬಲ ಆಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ. ಶುಭಸಂಖ್ಯೆ:6
ಸಿಂಹ: ಅನಿರೀಕ್ಷಿತ ಪ್ರಯಾಣದಿಂದಾಗಿ ಖರ್ಚು-ವೆಚ್ಚಗಳು ಅಧಿಕವಾಗಲಿವೆ. ಕನಸಿನಂತೆ ಶೀಘ್ರವಾಗಿ ಕಾರ್ಯ ಪೂರೈಸಲು ಆಗದು. ಶುಭಸಂಖ್ಯೆ: 3
ಕನ್ಯಾ: ನಾಜೂಕಿನ ಕೆಲಸದಿಂದಾಗಿ ವಿಶೇಷ ಮನ್ನಣೆ. ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ಹೋಗುವುದು ಒಳ್ಳೆಯದು. ಶುಭಸಂಖ್ಯೆ: 7
ತುಲಾ: ಮಕ್ಕಳ ಹೆಸರಿನಲ್ಲಿ ಧರ್ಮ ಕಾರ್ಯಗಳನ್ನು ಶ್ರದ್ಧೆಯಿಂದ ಆಚರಿಸುವಿರಿ. ಉದ್ದಿಮೆದಾರರಿಗೆ ಸರ್ಕಾರದಿಂದ ಪ್ರತಿಕೂಲ. ಶುಭಸಂಖ್ಯೆ: 1
ವೃಶ್ಚಿಕ: ವ್ಯಾಪಾರ, ವೃತ್ತಿಯಲ್ಲಿ ಆರೋಗ್ಯಕರ ಪೈಪೋಟಿ. ಮಗನ ಕೆಲಸದ ವಿಚಾರದಲ್ಲಿ ವಿದೇಶದಲ್ಲಿರುವ ಸ್ನೇಹಿತ ನೆರವಿಗೆ ಬರಲಿದ್ದಾರೆ. ಶುಭಸಂಖ್ಯೆ:4
ಧನುಸ್ಸು: ವಿವಾದದ ವಿಷಯಗಳು ಇತ್ಯರ್ಥಗೊಂಡು ಮನಸ್ಸಿಗೆ ಹಿತ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಶುಭಸಂಖ್ಯೆ: 6
ಮಕರ: ಬಹು ವಿಧದ ಉದ್ಯೋಗಾವಕಾಶಗಳು ಬರಲಿವೆ. ಕೆಲವು ನಿಗೂಢ ಸಂಗತಿಗಳನ್ನು ಬಯಲಿಗೆ ತರುವ ಪ್ರಯತ್ನ ನಡೆಯಲಿದೆ. ಶುಭಸಂಖ್ಯೆ: 6
ಕುಂಭ: ಮನೆಯಲ್ಲಿ ಶುಭಕಾರ್ಯ. ನಿಮ್ಮ ಜವಾಬ್ದಾರಿ ಹೆಚ್ಚಿದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿ. ವಿಘ್ನೕಶ್ವರನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 9
ಮೀನ: ಅನಿರೀಕ್ಷಿತ ಬಂಧುಗಳ ಆಗಮನ. ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿವಾದಗಳು ತಾರಕಕ್ಕೆ. ಅನಾರೋಗ್ಯ ಭೀತಿ ಕಾಡಬಹುದು. ಶುಭಸಂಖ್ಯೆ: 1