

ಮೇಷ: ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಬಹುದು. ವ್ಯಾಪಾರದಲ್ಲಿ ಎಚ್ಚರಿಕೆಯಿಂದ ಇರಿ. ಭಾವನೆಗಳನ್ನು ನಿಯಂತ್ರಿಸಿಕೊಂಡರೆ ಶುಭವಿದೆ. ಶುಭಸಂಖ್ಯೆ: 9
ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ. ಬಂಧುಗಳೊಂದಿಗೆ ವೈಮನಸ್ಸು ಉಂಟಾಗದಂತೆ ನೋಡಿಕೊಳ್ಳಿ. ಒಳ್ಳೆಯ ಫಲಿತಾಂಶಗಳನ್ನು ನೋಡಬಹುದು. ಶುಭಸಂಖ್ಯೆ: 5
ಮಿಥುನ: ವ್ಯವಹಾರದಲ್ಲಿ ಎಚ್ಚರಿಕೆಯಿಂದಿದ್ದರೆ ಉತ್ತಮ ಆದಾಯ. ವಿದ್ಯಾರ್ಥಿಗಳು ಓದಿನತ್ತ ಗಮನಕೊಡಿ. ಸಮಾರಂಭಗಳಲ್ಲಿ ಎಚ್ಚರಿಕೆ. ಶುಭಸಂಖ್ಯೆ: 3
ಕಟಕ: ದೂರ ಪ್ರಯಾಣ ಮಾಡುವಿರಿ. ಜಲ ಸಂಬಂಧಿ ವಿಚಾರದಲ್ಲಿ ಎಚ್ಚರದಿಂದಿರಿ. ಕೃಷಿ ಚಟುವಟಿಕೆಯಲ್ಲಿ ಸಮಸ್ಯೆ ಆಗಬಹುದು. ಶುಭಸಂಖ್ಯೆ: 3
ಸಿಂಹ: ವಿನಾಕಾರಣ ಅಧಿಕ ಭಯದಿಂದ ಆತಂಕ. ಸೇವಕ ರಿಂದ ತೊಡಕು ಉಂಟಾದೀತು. ಸಹೋದರರ ಜತೆ ವಾದ-ವಿವಾದ ಬೇಡ. ಶುಭಸಂಖ್ಯೆ: 4
ಕನ್ಯಾ: ಆಹಾರದಲ್ಲಿ ಎಚ್ಚರಿಕೆ ವಹಿಸಿ, ಆರೋಗ್ಯ ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಅಶುಭ. ಹಣಕಾಸಿನ ವಿಷಯದಲ್ಲಿ ಹುಷಾರಾಗಿರಿ. ಶುಭಸಂಖ್ಯೆ: 7
ತುಲಾ: ಮಾನಸಿಕ ಚಾಂಚಲ್ಯ ಕಾಡಲಿದೆ. ವ್ಯಾಪಾರಸ್ಥಳದಲ್ಲಿ ಮೈಮರೆಯದೇ ವ್ಯವಹರಿಸಿ. ಆರೋಗ್ಯದತ್ತ ನಿರ್ಲಕ್ಷ್ಯ ಮಾಡಲು ಹೋಗದಿರಿ. ಶುಭಸಂಖ್ಯೆ: 2
ವೃಶ್ಚಿಕ: ಕಾಲು ನೋವು ತೊಂದರೆ ಕೊಡುವುದು. ವೃತ್ತಿಯಲ್ಲಿ ಏರುಪೇರು ಉಂಟಾಗಿ ಗೊಂದಲ. ಓದಿನಲ್ಲಿ ಏಕಾಗ್ರತೆ ಅತಿ ಅಗತ್ಯವಾಗಿದೆ. ಶುಭಸಂಖ್ಯೆ: 4
ಧನುಸ್ಸು: ಹಿರಿಯರೊಂದಿಗೆ ವಾದ ಒಂದು ಮಿತಿಯಲ್ಲಿರಲಿ. ವ್ಯವಹಾರದಲ್ಲಿ ಲಾಭವಾಗಲಿದೆ. ಕಚೇರಿಯಲ್ಲಿ ಸಮಾಧಾನದಿಂದ ವ್ಯವಹರಿಸಿ. ಶುಭಸಂಖ್ಯೆ: 3
ಮಕರ: ಅಧಿಕ ಧೈರ್ಯ, ನಂಬಿಕೆಗಳು ನಿಮ್ಮನ್ನು ಕಾಪಾಡಲಿವೆೆ. ವೃತ್ತಿಯಲ್ಲಿ ಶ್ರಮ ವಹಿಸುವುದರಿಂದ ಕೆಲಸಕ್ಕೆ ವಿಘ್ನವಾದರೂ ಚಿಂತೆ ಬೇಡ. ಶುಭಸಂಖ್ಯೆ: 1
ಕುಂಭ: ಪರಿಶ್ರಮ ಪಟ್ಟರೂ ಉದ್ದೇಶಿತ ಕಾರ್ಯ ವಿಫಲ. ಕುಟುಂಬದಲ್ಲಿ ಅನಿರೀಕ್ಷಿತ ತಿರುವು. ಕೆಲ ಕಾರ್ಯಗಳಲ್ಲಿ ಅನುಕೂಲವಿದೆ. ಶುಭಸಂಖ್ಯೆ: 8
ಮೀನ: ಮುಖಭಂಗವಾಗುವಂಥ ಮಾತುಗಳ ಬಳಕೆ ಈ ದಿನ ಬೇಡ. ವ್ಯವಹಾರದಲ್ಲಿ ತೊಂದರೆ. ಪರರ ವಿಷಯದಲ್ಲಿ ಜಾಗ್ರತೆ. ಶುಭಸಂಖ್ಯೆ: 5