

ಮೇಷ: ವೃತ್ತಿಜೀವನದಲ್ಲಿ ಸ್ಪರ್ಧೆ ಏರ್ಪಡಬಹುದು. ನಿಮ್ಮ ಸಮಸ್ಯೆಗೆ ಭಾಗ್ಯದ ಸಹಾಯವಾಗಲಿದೆ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 9
ವೃಷಭ: ನಿರೀಕ್ಷಿಸಿದ್ದಕ್ಕಿಂತ ಅಧಿಕ ಲಾಭ ಸಿಗಲಿದೆ. ಉದ್ಯೋಗದಲ್ಲಿ ಸ್ಪರ್ಧೆಯ ಭೀತಿ. ಅಧಿಕ ಖರ್ಚು. ಭಾಗ್ಯೋದಯದ ಅನುಭವ. ಶುಭಸಂಖ್ಯೆ: 8
ಮಿಥುನ: ಹಿರಿಯರ ಮಾರ್ಗದರ್ಶನ ಪಡೆಯಿರಿ. ಆರೋಗ್ಯದ ವಿಚಾರದಲ್ಲಿ ದೊಡ್ಡ ಖರ್ಚು ಎದುರಾದೀತು. ಮಿತ್ರರಿಂದ ಸಮಸ್ಯೆ ಸೃಷ್ಟಿ. ಶುಭಸಂಖ್ಯೆ: 5
ಕಟಕ: ನಿಮ್ಮ ಪ್ರಗತಿ ಮತ್ತು ಉತ್ಕರ್ಷಕ್ಕೆ ಈ ದಿನ ಸಾಕ್ಷಿಯಾಗಲಿದೆ. ಆರೋಗ್ಯದತ್ತ ನಿರ್ಲಕ್ಷ್ಯ ಬೇಡ. ಶ್ರದ್ಧೆಯಿಂದ ಕೆಲಸ ನಿರ್ವಹಿಸಿ. ಶುಭಸಂಖ್ಯೆ: 2
ಸಿಂಹ: ಆರ್ಥಿಕ ಸಮಸ್ಯೆ ಕಾಡುತ್ತದೆ. ಆರೋಗ್ಯ ತೊಂದರೆಯೂ ಕಾಡುವ ಸಾಧ್ಯತೆ ಇದೆ. ಅದೃಷ್ಟದಿಂದ ಅವಕಾಶ ದೊರೆಯುವುದು. ಶುಭಸಂಖ್ಯೆ: 3
ಕನ್ಯಾ: ಕಾರ್ಯನಿಮಿತ್ತ ಪ್ರಯಾಣ ಸಾಧ್ಯತೆ. ಲಾಭದ ಪ್ರಯೋಜನ ತಕ್ಷಣಕ್ಕಿಲ್ಲ. ಸತತ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ: 2
ತುಲಾ: ಕಡಿಮೆ ಪರಿಶ್ರಮದಲ್ಲಿ ಅಧಿಕ ಲಾಭ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ. ಅನಿರೀಕ್ಷಿತ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8
ವೃಶ್ಚಿಕ: ಪಡೆದ ಶಿಕ್ಷಣ ನೆರವಿಗೆ ಬರಲಿದೆ. ಅರ್ಹತೆ ಇಲ್ಲದಿದ್ದರೂ ಅವಕಾಶಗಳ ಪ್ರಾಪ್ತಿ. ಭೂಮಿ ಖರೀದಿ ಯಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 2
ಧನುಸ್ಸು: ಆಸ್ತಿ ಲಾಭ. ಅಣ್ಣ-ತಮ್ಮಂದಿರ ಮೇಲೆ ಪ್ರೇಮ ಮೂಡಲಿದೆ. ನಿರೀಕ್ಷಿಸಿದಷ್ಟು ಲಾಭವಾಗುವುದಿಲ್ಲ. ಅಡಚಣೆಯಿದ ವಿಳಂಬ. ಶುಭಸಂಖ್ಯೆ:3
ಮಕರ: ಕೆಲಸಗಳು ಯಶಸ್ವಿಯಾಗುತ್ತವೆ. ವಿವಾಹಭಾಗ್ಯ ಕೂಡಿ ಬರಲಿದೆ. ಸ್ನೇಹಿತೆಯಿಂದ ತೊಂದರೆ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 3
ಕುಂಭ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಪ್ರಗತಿ ಸಾಧಿಸುವಲ್ಲಿ ಪ್ರಯತ್ನಶೀಲರಾಗಿ. ಹೃದಯ ಸಮಸ್ಯೆ ಬರಬಹುದು. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ:2
ಮೀನ: ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ. ಸಾರ್ವಜನಿಕ ರಂಗದಲ್ಲಿ ವಿಶೇಷ ಪೋ›ತ್ಸಾಹ. ಸಹೋದರರೊಂದಿಗೆ ವಿವಾದ ಬೇಡ. ಶುಭಸಂಖ್ಯೆ: 3