

ಮೇಷ: ವ್ಯಕ್ತಿತ್ವಕ್ಕೆ ಹೊಸದೇ ಆಯಾಮವು ದೊರಕುವ ಕಾರಣದಿಂದಾಗಿ ವಿಶೇಷವಾದ ಪ್ರಶಂಸೆಗಳಿಗೆ ಮನ್ನಣೆಗಳಿಗೆ ಪಾತ್ರರಾಗುವಿರಿ. ಶುಭಸಂಖ್ಯೆ: 6
ವೃಷಭ: ಎಲ್ಲ ಕೆಲಸಗಳಲ್ಲಿಯೂ ಉತ್ಸಾಹದಿಂದ ಮುನ್ನುಗ್ಗುವವರು ನೀವು. ಅದೇನೂ ತಪ್ಪಲ್ಲ. ಆದರೆ ಯೋಚಿಸಿ ಮುನ್ನುಗ್ಗಿ. ಶುಭಸಂಖ್ಯೆ: 2
ಮಿಥುನ: ಪ್ರೇಮ ಪ್ರಣಯದ ವಿಚಾರಗಳಲ್ಲಿ ಹಿಂದೆಮುಂದೆ ಯೋಚಿಸದೆ ಇಡುವ ಹೆಜ್ಜೆಗಳು ಅವಮಾನಕ್ಕೆ ಗುರಿಪಡಿಸಬಹುದು. ಎಚ್ಚರ. ಶುಭಸಂಖ್ಯೆ: 7
ಕಟಕ: ಮಾತಿನ ಒರಟುತನವನ್ನು ಸ್ವಲ್ಪ ಕಡಿಮೆ ಮಾಡಿ. ಹೇಳಬೇಕಾದ ವಿಚಾರವನ್ನು ತಾಳ್ಮೆಯಿಂದ ತಿಳಿಸಿದರೆ ಒಳ್ಳೆಯದಾಗಲಿದೆ. ಶುಭಸಂಖ್ಯೆ: 5
ಸಿಂಹ: ಹಣವನ್ನು ಎಗರಿಸುವಂತಹ ಜನರು ನಿಮ್ಮನ್ನು ಸುತ್ತುವರಿಯಬಹುದು. ನಿಮ್ಮಲ್ಲಿನ ಹಣದ ಬಗ್ಗೆ ಸಾಧ್ಯವಾದಷ್ಟು ಎಚ್ಚರದಿಂದಿರಿ. ಶುಭಸಂಖ್ಯೆ: 3
ಕನ್ಯಾ: ಆರ್ಥಿಕ ವಿಚಾರದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ಹೊಸ ಯೋಜನೆಯೊಂದನ್ನು ರೂಪಿಸಿದರೆ ಯಶಸ್ಸನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 9
ತುಲಾ: ಅಸಹಾಯಕತೆಯಿಂದ ನೊಂದುಕೊಳ್ಳುತ್ತಿದ್ದೀರಿ. ಅದನ್ನು ಬೇಗನೆ ನೀಗಿಸಲು ನಿಗೂಢವಾದ ಶಕ್ತಿಯೊಂದು ಬಲ ನೀಡಲಿದೆ. ಶುಭಸಂಖ್ಯೆ: 1
ವೃಶ್ಚಿಕ: ಹತ್ತಿರದವರೇ ವಿರೋಧಿಗಳಾಗುವ ಹಲವು ಸಾಧ್ಯತೆಗಳಿವೆ. ನಿಮ್ಮ ಗುಟ್ಟನ್ನು ಎಂದೂ ಯಾರಿಗೂ ಬಿಟ್ಟುಕೊಡದಿರಿ. ಶುಭಸಂಖ್ಯೆ: 8
ಧನುಸ್ಸು: ಸೋಲುತ್ತಿದ್ದೇನೆಂಬ ನಿರಾಶೆಯ ಯೋಚನೆ ಕಾಡಬಹುದು. ಅದನ್ನು ಬಿಟ್ಟು ಮುನ್ನಡೆದರೆ ಯಶಸ್ಸನ್ನು ಪಡೆಯುವಿರಿ. ಶುಭಸಂಖ್ಯೆ: 4
ಮಕರ: ವಿವಿಧ ಸಾಮಾಜಿಕ ವಿರೋಧಿ ಗುಂಪುಗಳು ನಿಮ್ಮನ್ನು ಹಿಂಬಾಲಿಸುವ ಸಾಧ್ಯತೆಗಳಿವೆ. ಎಚ್ಚರಿಕೆಯಿಂದಿದ್ದರೆ ಒಳಿತಿದೆ. ಶುಭಸಂಖ್ಯೆ: 6
ಕುಂಭ: ನಿಮ್ಮ ಅತಿಯಾದ ಬೌದ್ಧಿಕ ಜಾಣ್ಮೆಯಿಂದ ಅನ್ಯರು ಅಸಹಾಯಕರಾದಾರು. ಅಲ್ಪಬುದ್ಧಿಯ ಜನರಿಗೆ ತಕ್ಕ ದಾರಿ ಕಾಣಿಸಿ. ಶುಭಸಂಖ್ಯೆ: 2
ಮೀನ: ನೆರೆಹೊರೆಯವರು ನಿಮ್ಮಲ್ಲಿನ ವೈಚಾರಿಕ ಚಿಂತನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಯಾರು. ಚಿಂತಿತರಾಗುವುದು ಬೇಡ. ಶುಭಸಂಖ್ಯೆ: 7