ಈ ರಾಶಿಯವರಿಗೆ ಪ್ರಯಾಣದಲ್ಲಿ ಜಾಗ್ರತೆ ಇರಲಿ

Nitya-Bhavishya-vvani-1-2-1
Published on

ಮೇಷ: ಮಾನಸಿಕ ನೆಮ್ಮದಿಗೆ ಅಡ್ಡಿ ಉಂಟಾಗಬಹುದು. ಹಿರಿಯರಿಗೆ ತುಸು ಅನಾರೋಗ್ಯವಾದೀತು. ವ್ಯಾಪಾರದಲ್ಲಿ ಲಾಭವಿದೆ. ಶುಭಸಂಖ್ಯೆ: 7

ವೃಷಭ: ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಮಕ್ಕಳ ಶಿಕ್ಷಣದತ್ತ ಗಮನವಿರಲಿ. ವಾಹನ ರಫ್ತುದಾರರಿಗೆ ನಿರಾಶೆಯಿದೆ. ಶುಭಸಂಖ್ಯೆ: 9

ಮಿಥುನ: ಸ್ಥಾನಮಾನದಲ್ಲಿ ಗುಣಾತ್ಮಕ ಬದಲಾವಣೆ ಆಗಲಿದೆ. ವ್ಯವಹಾರದಲ್ಲಿ ಅನುಕೂಲವಿದ್ದು ವೃತ್ತಿಯಲ್ಲಿ ಶ್ರಮ ವಹಿಸಿ. ಶುಭಸಂಖ್ಯೆ: 8

ಕಟಕ: ಧನಸಂಬಂಧಿತ ವ್ಯವಹಾರದಲ್ಲಿ ಏರಿಳಿತಗಳು ಆಗಲಿವೆ. ಚಿನ್ನಾಭರಣಗಳನ್ನು ಧರಿಸುವಾಗ ಮುನ್ನೆಚ್ಚರಿಕೆ ಇದ್ದರೆ ಉತ್ತಮ. ಶುಭಸಂಖ್ಯೆ: 5

ಸಿಂಹ: ಸ್ವಲ್ಪ ಅನಾರೋಗ್ಯ ಕಾಡಬಹುದು. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳ ನಿವಾರಣೆಗಾಗಿ ಪರಶಿವನನ್ನು ಪೂಜಿಸಿ. ಶುಭಸಂಖ್ಯೆ: 2

ಕನ್ಯಾ: ಹೆಚ್ಚೇ ಖರ್ಚು ಎದುರಾದೀತು. ಕೋರ್ಟ್ ವ್ಯವಹಾರದಲ್ಲಿ ತಡೆ. ಪಾರದರ್ಶಕವಲ್ಲದ ಒಪ್ಪಂದಗಳನ್ನು ಒಪ್ಪದಿರಿ. ಶುಭಸಂಖ್ಯೆ: 4

ತುಲಾ: ಪ್ರಯಾಣದಲ್ಲಿ ವಿಳಂಬ ಹಾಗೂ ಅಪಘಾತದ ಭಯವಿದೆ. ಈ ವೇಳೆ ಕಪ್ಪು ಬಣ್ಣದ ಬಟ್ಟೆ ಧರಿಸದಿದ್ದರೆ ತೊಂದರೆಯಿಲ್ಲ. ಶುಭಸಂಖ್ಯೆ: 1

ವೃಶ್ಚಿಕ: ಕಚೇರಿಯ ಕೆಲಸಗಾರರಿಂದ ಲಾಭ ಹಾಗೂ ಆರ್ಥಿಕ ಸಹಕಾರವಿದೆ. ಪೀಠೋಪಕರಣ ಖರೀದಿಸುವವರಿಗೆ ಸುದಿನ. ಶುಭಸಂಖ್ಯೆ: 6

ಧನಸ್ಸು: ತೈಲಪದಾರ್ಥಗಳ ವ್ಯಾಪಾರದಿಂದ ಧನಲಾಭ. ಹಿರಿಯರ ಸಲಹೆಗಳನ್ನು ಮುಕ್ತ ಮನದಿಂದ ಸ್ವೀಕರಿಸಿದರೆ ಮನ್ನಣೆ ಲಭ್ಯ. ಶುಭಸಂಖ್ಯೆ: 3

ಮಕರ: ಮರಳಿ ಪ್ರಯತ್ನಿಸುವುದರಿಂದ ಯಶಸ್ಸನ್ನು ಹೊಂದುವಿರಿ. ಪ್ರಯಾಣದಲ್ಲಿ ಜಾಗ್ರತೆ ಇರಲಿ. ಸಿಟ್ಟಿನಿಂದ ಆದಷ್ಟು ದೂರವಿರಿ. ಶುಭಸಂಖ್ಯೆ: 7

ಕುಂಭ: ರ್ತಾಕವಾಗಿ ಚಿಂತಿಸಿ ಕಾರ್ಯಪ್ರವೃತ್ತರಾಗಿ. ಸಂಘ ಸಂಸ್ಥೆಗಳಿಗೆ ಭೇಟಿ ನೀಡುವ ಯೋಗ. ಕುಲದೇವತೆಯನ್ನು ಧ್ಯಾನಿಸಿ. ಶುಭಸಂಖ್ಯೆ: 9

ಮೀನ: ಬಾಳಸಂಗಾತಿಯು ನೀಡುವ ಸಲಹೆಗಳಿಗೆ ಪ್ರಾಮುಖ್ಯತೆ ಕೊಡಿ. ಸರ್ಕಾರಿ ಕಾರ್ಯಗಳಲ್ಲಿ ಸ್ವಲ್ಪ ವಿಳಂಬವಾಗಲಿದೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net