ಈ ರಾಶಿಯವರಿಗಿಂದು ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದ್ಯೋಗಿಗಳಿಂದ ಕಿರಿಕಿರಿ. ಅಧಿಕಾರ ಪ್ರಾಪ್ತಿಯಲ್ಲಿ ಆತಂಕ. ಅನಿರೀಕ್ಷಿತ ಅತಿಥಿ ಆಗಮನ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 7

ವೃಷಭ: ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ. ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಧನ ನಷ್ಟ. ಬರಹಗಾರರಿಗೆ ಉತ್ತಮ ದಿನ. ಶುಭಸಂಖ್ಯೆ:1

ಮಿಥುನ: ಕೌಟುಂಬಿಕ ಕಿರಿಕಿರಿ ಸಾಧ್ಯತೆ. ಸಂಗಾತಿಯೊಡನೆ ವಾದ ವಿವಾದ ಸಲ್ಲದು. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಶುಭಸಂಖ್ಯೆ: 8

ಕಟಕ: ವಾತ್ಸಲ್ಯಪೂರ್ಣ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ. ದೂರದ ಪ್ರಯಾಣದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ:7

ಸಿಂಹ: ಧಾರ್ವಿುಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ. ಶುಭಸಂಖ್ಯೆ: 3

ಕನ್ಯಾ: ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದ ಮುದಗೊಳ್ಳುವ ಅವಕಾಶ. ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ. ಶುಭಸಂಖ್ಯೆ: 6

ತುಲಾ: ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತುಗಳನ್ನು ಆಲಿಸುವ ಆತುರ. ಉತ್ತಮ ಅಭಿಪ್ರಾಯದಿಂದ ಮನಸ್ಸಿಗೆ ಹಿತಾನುಭವ. ಶುಭಸಂಖ್ಯೆ: 4

ವೃಶ್ಚಿಕ: ನಿರಾಸೆಯಿಂದ ಹೊರಬಂದು ಕಾರ್ಯಮಗ್ನರಾಗಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ವಿದ್ಯಾರ್ಥಿಗಳಿಗೆ ಕಿರಿಕಿರಿ. ಶುಭಸಂಖ್ಯೆ: 5

ಧನುಸ್ಸು: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ನಿಮ್ಮ ಯೋಜನೆಗಳಿಗೆ ಹಿತೈಷಿಗಳಿಂದ ಉತ್ತಮ ಸಲಹೆ ದೊರೆತು ಯಶ ಕಾಣುವಿರಿ. ಶುಭಸಂಖ್ಯೆ:3

ಮಕರ: ವೃತ್ತಿ ಕ್ಷೇತ್ರದಲ್ಲಿ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 2

ಕುಂಭ: ಕುಟುಂಬದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಶುಭಸಂಖ್ಯೆ:1

ಮೀನ: ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಸಂತೋಷಗೊಳಿಸುವಿರಿ. ನಿಮ್ಮ ನಿರ್ಧಾರ ಪ್ರಶಂಸೆಗೆ ಪಾತ್ರವಾಗುವುದು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net