

ಮೇಷ: ಆರ್ಥಿಕ ವಿಚಾರದಲ್ಲಿ ಹಿಡಿತ ಸಾಧಿಸಿ. ಮಗಳ ವಿವಾಹದ ಶುಭ ಸುದ್ದಿ. ಮನೆಯಲ್ಲಿ ದೃಢ ನಿರ್ಧಾರ ಕೈಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 3
ವೃಷಭ: ಸುವರ್ಣ ವ್ಯಾಪಾರಿಗಳಿಗೆ ಅಧಿಕ ಲಾಭ. ನಿಮ್ಮ ನೈಪುಣ್ಯಕ್ಕೆ ತಕ್ಕುದಾದ ಅವಕಾಶ ಲಭಿಸಲಿದೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 3
ಮಿಥುನ: ಆತ್ಮೀಯ ಸ್ನೇಹಿತನ ಮುಖೇನ ಸಂಪತ್ತಿನ ಪ್ರಾಪ್ತಿ. ಮಾರ್ಗಾಯಾಸ. ಕಲಾವಿದರಿಗೆ ಅನಿರೀಕ್ಷಿತ ಧನಾಗಮನ ಸಾಧ್ಯತೆ. ಶುಭಸಂಖ್ಯೆ: 7
ಕಟಕ: ಸಹೋದ್ಯೋಗಿಗಳಿಂದ ಕಿರಿಕಿರಿ. ಬಟ್ಟೆ ವ್ಯಾಪಾರಿಗಳಿಗೆ ಸಮೃದ್ಧಿ. ಅನಾರೋಗ್ಯ ಸಮಸ್ಯೆ ಉಲ್ಬಣಿಸಬಹುದು. ಶುಭಸಂಖ್ಯೆ: 3
ಸಿಂಹ: ವೈವಾಹಿಕ ಜೀವನದಲ್ಲಿ ಅಶಾಂತಿ. ನಿಮ್ಮ ಉನ್ನತಿಗೆ ಆತ್ಮೀಯ ಸ್ನೇಹಿತನ ಮಾರ್ಗದರ್ಶನ. ಮಕ್ಕಳಿಂದ ನಿರಂತರ ಸಮಸ್ಯೆ. ಶುಭಸಂಖ್ಯೆ: 3
ಕನ್ಯಾ: ಉದ್ಯೋಗದ ಅವಕಾಶ ಲಭಿಸಲಿದೆ. ಆತ್ಮವಿಶ್ವಾಸದಿಂದ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ. ಜಯ ಲಭಿಸಲಿದೆ. ಶುಭಸಂಖ್ಯೆ: 6
ತುಲಾ: ಹೈನುಗಾರಿಕೆಯಲ್ಲಿ ವಿಶೇಷ ಲಾಭ. ಅನಗತ್ಯ ತಿರುಗಾಟ. ಆಟಗಾರರಿಗೆ ಉತ್ತಮ ಅವಕಾಶ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2
ವೃಶ್ಚಿಕ: ಉದ್ಯೋಗ, ವ್ಯಾಪಾರದಲ್ಲಿ ಅನಗತ್ಯ ಖರ್ಚು. ದೀನರ ಸೇವೆ ಮಾಡಿ. ಆರೋಗ್ಯ ಕೈ ಕೊಟ್ಟೀತು. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 7
ಧನುಸ್ಸು: ಯಾಚಕರಿಗೆ ಸಹಾಯ ಮಾಡಿ. ಆಸ್ತಿ ಸಂಬಂಧ ಸಹೋದರರೊಂದಿಗೆ ವಿರಸ. ಕುಟುಂಬದ ಮಾರ್ಗದರ್ಶನವಿರಲಿ. ಶುಭಸಂಖ್ಯೆ: 5
ಮಕರ: ಅವ್ಯಕ್ತ ಭಯ ಕಾಡಬಹುದು. ಹಿತಶತ್ರುಗಳು ಯಶಸ್ಸಿಗೆ ತಡೆಯೊಡ್ಡಬಹುದು. ಅಂತಿಮ ಹಂತದಲ್ಲಿ ಯಶಸ್ಸಿನಲ್ಲಿ ವಿಫಲತೆ. ಶುಭಸಂಖ್ಯೆ: 4
ಕುಂಭ: ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ನನೆಗುದಿಗೆ ಬಿದ್ದ ಊರಿಗಾಗದ ವಿವಾದಕ್ಕೆ ತಾರ್ಕಿಕ ಅಂತ್ಯ. ಬಂಧು ವರ್ಗದಲ್ಲಿ ಅಗಲಿಕೆ. ಶುಭಸಂಖ್ಯೆ: 6
ಮೀನ: ಮಗಳಿಗೆ ಕಂಕಣಭಾಗ್ಯ. ಆತ್ಮಾಭಿಮಾನದಿಂದ ವರ್ತಿಸಿ. ದುರಭಿಮಾನ ಪ್ರದರ್ಶನ ಮಾಡಬೇಡಿ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 9