ಈ ರಾಶಿಯವರಿಗೆ ಇಂದು ಪ್ರಯಾಣದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಪರಿಚಿತರಿಂದ ನಷ್ಟ. ಮಾನಸಿಕ ವೇದನೆ. ಅನಿಯಂತ್ರಿತ ಕೋಪದಿಂದ ಸಮಸ್ಯೆ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1

ವೃಷಭ: ಪತ್ರಗಳಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆ. ಧರ್ಮಕಾರ್ಯಗಳಿಗೆ ಅಡೆತಡೆ. ಮನೋನಿಯಂತ್ರಣ ಇಲ್ಲದೆ ಸಮಸ್ಯೆ. ಶುಭಸಂಖ್ಯೆ: 8

ಮಿಥುನ: ಆರ್ಥಿಕ ನಷ್ಟ. ಅನಗತ್ಯ ಮಾತಿನಿಂದ ತೊಂದರೆ ಆದೀತು. ಪತ್ರ ವ್ಯವಹಾರಗಳಲ್ಲಿ ಹಿನ್ನಡೆ ಅನುಭವಿಸುವಿರಿ. ಶುಭಸಂಖ್ಯೆ: 2

ಕಟಕ: ಆರೋಗ್ಯದಲ್ಲಿ ವ್ಯತ್ಯಾಸ. ಸಹೋದರ ಸಹೋದರಿಯರ ವಾಗ್ವಾದ. ಕೆಲಸಗಳಲ್ಲಿ ಹಿನ್ನಡೆ. ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ. ಶುಭಸಂಖ್ಯೆ: 6

ಸಿಂಹ: ಅಧಿಕ ಖರ್ಚು ಮಾಡಬೇಕಾಗಬಹುದು. ಕುಲದೇವರ ದರ್ಶನ ಮಾಡಿ ಭಕ್ತಿಯಿಂದ ಪ್ರಾರ್ಥಿಸಿ. ಉದ್ಯೋಗ ದೊರಕುವ ಸಾಧ್ಯತೆ. ಶುಭಸಂಖ್ಯೆ: 9

ಕನ್ಯಾ: ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಒತ್ತಡದ ಜೀವನದಲ್ಲಿ ಸಮಸ್ಯೆಗಳು. ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು. ಶುಭಸಂಖ್ಯೆ: 5

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ. ರಾಜಕೀಯ ವ್ಯಕ್ತಿಗಳಿಗೆ ಗೌರವಕ್ಕೆ ಚ್ಯುತಿ. ಉದ್ಯೋಗಸ್ಥರಿಗೆ ಅನುಕೂಲ. ಶುಭಸಂಖ್ಯೆ: 4

ವೃಶ್ಚಿಕ: ತಂದೆಯಿಂದ ಅನುಕೂಲ. ಪ್ರಯಾಣದಲ್ಲಿ ಅನುಕೂಲ. ಕೆಲಸ ಕಾರ್ಯಗಳಲ್ಲಿ ಜಯ. ಮಿತ್ರರಿಂದ ಸಂಕಷ್ಟ ತಲೆದೋರಬಹುದು. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ. ಅನಾರೋಗ್ಯ ಸಮಸ್ಯೆ. ಉದ್ಯೋಗದಲ್ಲಿ ಸಮಸ್ಯೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 1

ಮಕರ: ಸಂಗಾತಿಯಿಂದ ಅನುಕೂಲ. ಸೋದರ ಮಾವನೊಡನೆ ಕಲಹ. ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು ಆಗಲಿದೆ. ಶುಭಸಂಖ್ಯೆ: 5

ಕುಂಭ: ಆರೋಗ್ಯದಲ್ಲಿ ಸಮಸ್ಯೆ, ವೈದ್ಯರ ಸಲಹೆ ಪಡೆಯಿರಿ. ಸಂಗಾತಿಯಿಂದ ನೋವು, ಕೋರ್ಟ್ ಕೇಸುಗಳಲ್ಲಿ ಮುನ್ನಡೆ. ಶುಭಸಂಖ್ಯೆ: 7

ಮೀನ: ಪ್ರೀತಿ ಪ್ರೇಮದ ವಿಷಯಗಳಲ್ಲಿ ನಿರಾಸಕ್ತಿ. ಶತ್ರು ಬಾಧೆ. ಭಾವನೆಗಳಿಗೆ ಪೆಟ್ಟು. ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net