ಹೆಂಡ್ತಿ ಜತೆಗೆ ಜಗಳವಾಗುವ ಸಾಧ್ಯತೆ ಇದೆ ಈ ರಾಶಿಯವರ ಭವಿಷ್ಯದಲ್ಲಿ..

Nitya-Bhavishya-vvani-1-2-1
Published on
ಮೇಷ: ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿರುವವರಿಗೆ ಧನಲಾಭ. ಆರೋಗ್ಯ ಸ್ವಲ್ಪ ಸುಧಾರಣೆ ಆಗುತ್ತದೆ. ಅದೃಷ್ಟಸಂಖ್ಯೆ: 3
ವೃಷಭ: ಸುಸ್ತು, ತಲೆ ಸುತ್ತುವುದು ಇತ್ಯಾದಿ ಆಗುತ್ತದೆ. ನೀವು ಮಾಡಬೇಕಾದ ಕೆಲಸಗಳನ್ನು ಇತರರಿಗೆ ವಹಿಸಿ. ಅದೃಷ್ಟಸಂಖ್ಯೆ: 1
ಮಿಥುನ: ನಿಮಗೆ ಮಾತು ಕೊಟ್ಟವರು ನೆರವೇರಿಸುವುದು ಅನುಮಾನಾಸ್ಪದ. ಇಂದು ದೂರಪ್ರಯಾಣ ಮಾಡುವುದು ಬೇಡ. ಅದೃಷ್ಟಸಂಖ್ಯೆ: 6
ಕಟಕ: ನಿಮ್ಮ ಬಳಿ ಸುಳ್ಳು ಹೇಳಿದವರು ಸಿಕ್ಕಿಬೀಳುತ್ತಾರೆ. ಬಾಳಸಂಗಾತಿಯೊಂದಿಗೆ ಕಲಹ ಆಗುವ ಸಾಧ್ಯತೆ. ಅದೃಷ್ಟಸಂಖ್ಯೆ: 3
ಸಿಂಹ: ಈ ಹಿಂದೆ ಕೊಟ್ಟ ಹಣವನ್ನು ಮರಳಿ ಪಡೆಯಲು ಹೋಗಿ ತಿರಸ್ಕಾರಕ್ಕೆ ಗುರಿ ಆಗುವ ಸಾಧ್ಯತೆಗಳಿವೆ. ಅದೃಷ್ಟಸಂಖ್ಯೆ: 6
ಕನ್ಯಾ: ಸೋದರರಿಗಾಗಿ ಓಡಾಡಬೇಕಾದೀತು. ನಿಮ್ಮ ಶ್ರಮವನ್ನು ಯಾರೂ ಗಮನಿಸುತ್ತಿಲ್ಲ ಎಂದು ಕೊರಗುವಿರಿ. ಅದೃಷ್ಟಸಂಖ್ಯೆ: 9
ತುಲಾ: ಹಾಡುಗಾರಿಕೆ, ನೃತ್ಯ ಇತ್ಯಾದಿ ಕಲೆ ಇರುವವರಿಗೆ ಉತ್ತಮ ಅವಕಾಶ. ಹೊಸ ಉದ್ಯೋಗದ ಭರವಸೆಯಿದೆ. ಅದೃಷ್ಟಸಂಖ್ಯೆ: 3
ವೃಶ್ಚಿಕ: ಯಾವುದೇ ದುರಭ್ಯಾಸವಿದ್ದರೆ ತಕ್ಷಣ ನಿಲ್ಲಿಸಿ. ಇಲ್ಲವಾದರೆ ಚಿಕ್ಕ ಗಾಯವನ್ನು ದೊಡ್ಡ ಮಾಡಿದಂತಾಗುತ್ತದೆ. ಅದೃಷ್ಟಸಂಖ್ಯೆ: 2
ಧನಸ್ಸು: ಆಯ್ಕೆಗಳು ಗೊಂದಲಮಯ ಅನಿಸುತ್ತದೆ. ನಿಮಗೇ ನಿಮ್ಮ ಮೇಲೆ ನಂಬಿಕೆ ಇಲ್ಲ. ಆದುದರಿಂದ ಎಚ್ಚರ. ಅದೃಷ್ಟಸಂಖ್ಯೆ: 6
ಮಕರ: ಗುರುಹಿರಿಯರ ಮಾರ್ಗದರ್ಶನ ಲಭ್ಯ. ನಿಮ್ಮ ಒಳಿತನ್ನು ಬಯಸುವ ಅವರ ಮೇಲೆ ಸಿಟ್ಟು ಮಾಡಬೇಡಿ. ಅದೃಷ್ಟಸಂಖ್ಯೆ: 5
ಕುಂಭ: ದೊಡ್ಡ ಬದಲಾವಣೆ ಆಗುತ್ತದೆಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಸಂಗಾತಿಯ ಜತೆ ಮಾತಿನ ಚಕಮಕಿ ಇದೆ. ಅದೃಷ್ಟಸಂಖ್ಯೆ: 4
ಮೀನ: ಕಫ ಪ್ರಕೃತಿ ಹೆಚ್ಚಾಗುವುದರಿಂದ ಕರಿದ ಆಹಾರಪದಾರ್ಥಗಳನ್ನು ವರ್ಜಿಸಿ. ದೂರಪ್ರಯಾಣಕ್ಕೆ ಸಿದ್ಧರಾಗಿ. ಅದೃಷ್ಟಸಂಖ್ಯೆ: 9 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net