ಈ ರಾಶಿಯವರಿಗೆ ಇಂದು ಬಹುದಿನದ ಕನಸು ನನಸಾಗಿ ಸಂತಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಜಟಿಲ ಸಮಸ್ಯೆ ನಿವಾರಿಸಿದ ಸಮಾಧಾನ. ಗೆಳೆಯರೊಂದಿಗೆ ಸಂತೋಷಕೂಟ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8

ವೃಷಭ: ತೂಕದ ಮಾತುಗಳಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ ಮತ್ತು ಮುಂದಾಳು ಗಳಿಗೆ ವಿಶೇಷ ದಿನ. ತಾಳ್ಮೆ ಇರಲಿ. ಶುಭಸಂಖ್ಯೆ:1

ಮಿಥುನ: ನಿಮ್ಮ ಬಹುದಿನದ ಕನಸು ನನಸಾಗಿ ಸಂತಸ. ಕುಟುಂಬದ ಸಹಕಾರದೊಂದಿಗೆ ಅಂದುಕೊಂಡ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 6

ಕಟಕ: ನಕಾರಾತ್ಮಕ ಯೋಚನೆಯಿಂದ ದೂರವಿರಿ. ಅಪರೂಪಕ್ಕೆ ಹಳೇ ಸ್ನೇಹಿತನ ಭೇಟಿ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 3

ಸಿಂಹ: ನಿಮ್ಮ ಜಾಣತನಕ್ಕೆ ವಿಶೇಷ ಪುರಸ್ಕಾರ. ಮಿತಿಮೀರಿದ ಉತ್ಸಾಹದಿಂದ ತೊಂದರೆ ಸಾಧ್ಯತೆ. ಯೋಚಿಸಿ ಮುಂದಡಿ ಇಡಿ. ಶುಭಸಂಖ್ಯೆ:5

ಕನ್ಯಾ: ಆತ್ಮವಿಶ್ವಾಸದಿಂದ ಮುನ್ನುಗ್ಗಿ, ಯಶಸ್ಸು ಸಿಗುತ್ತದೆ. ಪ್ರಭಾವಿಗಳೊಂದಿಗೆ ಸಂವಹನ. ಇತಿಮಿತಿಗಳನ್ನು ಅರಿತು ವ್ಯವಹರಿಸಿ. ಶುಭಸಂಖ್ಯೆ: 6

ತುಲಾ: ಉದ್ದಿಮೆಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೆೇಟಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನ ವಹಿಸಿ. ಶುಭಸಂಖ್ಯೆ: 8

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಮಿತವ್ಯಯ ಸಾಧಿಸಿ. ಗಮನಾರ್ಹವಾದ ಸಾಧನೆ ನಿಮ್ಮದಾಗಲಿದೆ. ದೂರ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 8

ಧನುಸ್ಸು: ಕುಟುಂಬದವರಿಗೆ ನಿಮ್ಮ ಕಾರ್ಯವೈಖರಿಯ ಬಗ್ಗೆ ಬೇಸರ. ಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ವಾದಕರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಮಕರ: ಕೈಬಿಟ್ಟ ವ್ಯವಹಾರದಲ್ಲಿ ಅನಿರೀಕ್ಷಿತ ಧನಲಾಭ. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿರಲಿ. ಶುಭಸಂಖ್ಯೆ:1

ಕುಂಭ: ವಿದ್ಯಾಭ್ಯಾಸಿಗಳಿಗೆೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಆತಂಕ ದೂರ. ಹೃದಯ ಸಂಬಂಧಿ ತೊಂದರೆ ಬಂದೀತು. ಶುಭಸಂಖ್ಯೆ: 6

ಮೀನ: ಯಾವುದೇ ವಿಷಯದ ಬಗ್ಗೆ ಅನೇಕ ಬಾರಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಹೊಸ ವ್ಯಾಪಾರ ಆರಂಭಿಸಲು ಶುಭದಿನ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net