ಈ ರಾಶಿಯವರಿಗೆ ಹೊಸ ವ್ಯಾಪಾರ ಆರಂಭಿಸಲು ಉತ್ತಮ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತೊಂದರೆ ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ಗೆಳೆಯರೊಂದಿಗೆ ನಿಮ್ಮ ಸಂತೋಷವನ್ನು ಹಂಚಿಕೊಳ್ಳಿ. ಶುಭಸಂಖ್ಯೆ: 9

ವೃಷಭ: ಹಿತಮಿತ ಮಾತುಗಳಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ ಮುಂದಾಳುಗಳಿಗೆ ಕಚೇರಿಯಲ್ಲಿ ತಾಳ್ಮೆ ಇರಲಿ. ಶುಭಸಂಖ್ಯೆ: 5

ಮಿಥುನ: ನಿಮ್ಮ ಬಹುದಿನದ ಕನಸು ನನಸಾಗಲಿದೆ. ವ್ಯಾಪಾರವನ್ನು ಪ್ರಾರಂಭಿಸಲು ದೃಢ ನಿರ್ಧಾರ ತೆಗೆದುಕೊಳ್ಳಲು ಸುಸಮಯ. ಶುಭಸಂಖ್ಯೆ: 8

ಕಟಕ: ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ನಿಮ್ಮ ಹಳೆಯ ಯೋಜನೆಯನ್ನು ಕಾರ್ಯಗತಗೊಳಿಸಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 5

ಸಿಂಹ: ನಿಮ್ಮ ಪ್ರತಿಭೆ ಜಾಣತನಕ್ಕೆ ವೇದಿಕೆ ಪ್ರಾಪ್ತಿ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾದೀತು. ಯೋಚಿಸಿ ಮುನ್ನಡೆಯಿರಿ. ಶುಭಸಂಖ್ಯೆ: 3

ಕನ್ಯಾ: ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಖಚಿತ. ಪ್ರಭಾವಿಗಳ ಸಂಪರ್ಕ. ಇತಿ- ಮಿತಿ ಅರಿತು ಕೆಲಸ ನಿರ್ವಹಿಸಿ. ಶುಭಸಂಖ್ಯೆ:1

ತುಲಾ: ಉದ್ದಿಮೆಗೆ ಸಂಬಂಧಿಸಿ ವಿಶೇಷ ವ್ಯಕ್ತಿಯ ಭೆೇಟಿ ಮಾಡುವಿರಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನ ವಹಿಸಿ. ಶುಭಸಂಖ್ಯೆ: 6

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಅತ್ಯಂತ ಗಮನಾರ್ಹವಾದ ಸಾಧನೆ ನಿಮ್ಮದಾಗಲಿದೆ. ದೂರದ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 9

ಧನುಸ್ಸು: ನಿಮ್ಮ ಮನೆಯವರಿಗೆ ಭರವಸೆ ಮೂಡಿಸುವಿರಿ. ಚಲನಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಮಕರ: ವ್ಯವಹಾರದಲ್ಲಿ ಅನಿರೀಕ್ಷಿತ ತಿರುವುಗಳು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ವಿಚಾರದಲ್ಲಿ ಅಡಚಣೆ. ಶುಭಸಂಖ್ಯೆ: 4

ಕುಂಭ: ವಿದ್ಯಾಭ್ಯಾಸಿಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯ ನಿರಾತಂಕ. ಹೃದಯ ಸಂಬಂಧಿ ತೊಂದರೆಗಳು ಬರಬಹುದು. ಶುಭಸಂಖ್ಯೆ: 6

ಮೀನ: ಯಾವುದೇ ವಿಷಯದ ಬಗ್ಗೆ ಅನೇಕ ಬಾರಿ ಯೋಚಿಸಿ ಮುಂದುವರಿಯಿರಿ. ಹೊಸ ವ್ಯಾಪಾರ ಆರಂಭಿಸಲು ಉತ್ತಮ ದಿನ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net