

ಮೇಷ: ಮನೆಗೆ ಹತ್ತಿರದ ಬಂಧುಗಳು ಆಗಮಿಸುವರು. ಸ್ನೇಹಿತರ ಜೊತೆ ವಿಹಾರ. ಹೊಸ ಭೂಮಿ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 6
ವೃಷಭ: ಅವಕಾಶಗಳಿಂದ ವಂಚಿತರಾಗುತ್ತೀರಿ. ಸಂಗೀತಗಾರರಿಗೆ ವಿಶೇಷ ಅವಕಾಶ. ಅನವಶ್ಯಕ ಅಪವ್ಯಯ ಸಾಧ್ಯತೆ. ಶುಭಸಂಖ್ಯೆ: 4
ಮಿಥುನ: ವೈದ್ಯರ ಸಲಹೆಯನ್ನು ನಿರ್ಲಕ್ಷಿಸುವುದು ಸಲ್ಲದು. ಆರೋಗ್ಯದ ಬಗ್ಗೆ ನಿಗಾ ಇರಲಿ. ಮಕ್ಕಳಿಂದ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 2
ಕಟಕ: ಅಕ್ಕ-ತಂಗಿಯರ ಆಗಮನ. ಆತ್ಮೀಯ ಸ್ನೇಹಿತನ ಭೇಟಿ. ವಿಶೇಷ ಪುರಸ್ಕಾರ. ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ. ಶುಭಸಂಖ್ಯೆ: 2
ಸಿಂಹ: ಶತ್ರುಗಳ ಉಪಟಳ. ಪಿತ್ರಾರ್ಜಿತ ಆಸ್ತಿಯ ವಿವಾದ. ತಾಯಿಯ ಮಾತನ್ನು ಪಾಲಿಸಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 8
ಕನ್ಯಾ: ಕುಟುಂಬದವರೊಂದಿಗೆ ಸಮಾಲೋಚಿಸಿ. ಯಾರೋ ಮಾಡಿದ ತಪ್ಪಿಗೆ ಶಿಕ್ಷೆ. ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 3
ತುಲಾ: ಸಂಗಾತಿ ಜತೆ ಖರೀದಿ. ಮಕ್ಕಳ ವಿಷಯದಲ್ಲಿ ಶುಭಸುದ್ದಿ. ಕಲಾವಿದರಿಗೆ ವಿಶೇಷ. ದಿನಾಂತ್ಯದಲ್ಲಿ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 4
ವೃಶ್ಚಿಕ: ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸಕ್ಕೆ ಚಾಲನೆ. ಕುಟುಂಬದವರೊಂದಿಗೆ ಔತಣಕೂಟ. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 6
ಧನುಸ್ಸು: ಯೋಚಿಸಿ ಮಾತನಾಡಿ. ಹಿತಶತ್ರುಗಳ ಬಗ್ಗೆ ಜಾಗ್ರತೆ. ಅನಾರೋಗ್ಯ ಕಾಡಬಹುದು. ದುರ್ಗೆಯನ್ನು ಸ್ತುತಿಸಿ. ಶುಭಸಂಖ್ಯೆ: 3
ಮಕರ: ಪ್ರತಿಭೆಗೆ ತಕ್ಕ ಪುರಸ್ಕಾರ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಂಗಾತಿಯೊಂದಿಗೆ ಮುನಿಸು. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 5
ಕುಂಭ: ಸಾಲಗಾರರ ಕಾಟ. ಕುಟುಂಬದಲ್ಲಿ ಒತ್ತಡ. ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 7
ಮೀನ: ಸ್ವಗ್ರಾಮದಿಂದ ಆತ್ಮೀಯ ಬಂಧುಗಳ ಆಗಮನ. ಮನೆ ಖರೀದಿಗೆ ನಿರ್ಧಾರ. ದಿನಾಂತ್ಯದಲ್ಲಿ ಕಾರ್ಯದ ಒತ್ತಡ. ಶುಭಸಂಖ್ಯೆ: 4