ಈ ರಾಶಿಯವರಿಗೆ ಇಂದು ಸಂಗಾತಿಯ ಸಲಹೆಯಿಂದ ಆಸ್ತಿ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಜವಾಬ್ದಾರಿಗಳು ಉತ್ತಮ ಸಮಯವನ್ನು ಹಾಳು ಮಾಡಲಿವೆ. ನಿಮ್ಮ ಯೋಜನೆಗಳ ಅನುಷ್ಠಾನಕ್ಕೆ ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8

ವೃಷಭ: ಅನಿರೀಕ್ಷಿತ ಜವಾಬ್ದಾರಿಗಳು ಹೆಗಲೇರಲಿವೆ. ಆರ್ಥಿಕ ಶಿಸ್ತು ಪಾಲಿಸಿ, ದುಂದುವೆಚ್ಚ ಮಾಡದಿರಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2

ಮಿಥುನ: ವೈಯಕ್ತಿಕ ಹಿತಾಸಕ್ತಿಗಳಿಗೆ ಹೆಚ್ಚಿನ ಗಮನ ಹರಿಸಿ. ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಶುಭಸಂಖ್ಯೆ: 9

ಕಟಕ: ದುಂದುವೆಚ್ಚವನ್ನು ನಿಯಂತ್ರಿಸಿ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಿ. ವೃತ್ತಿಪರರಿಗೆ ಅಧಿಕ ಲಾಭ. ಆರ್ಥಿಕ ಸ್ಥಿತಿ ಉತ್ತಮ. ಶುಭಸಂಖ್ಯೆ: 8

ಸಿಂಹ: ಭವಿಷ್ಯದ ಬಗ್ಗೆ ಯೋಚಿಸುವ ಸಮಯ ಇದು. ಚಿಂತಿಸಿ. ವ್ಯಾಪಾರ-ವ್ಯವಹಾರದಲ್ಲಿ ಪಾಲುದಾರರಿಂದ ಮೋಸ ಸಾಧ್ಯತೆ. ಶುಭಸಂಖ್ಯೆ: 8

ಕನ್ಯಾ: ಕುಟುಂಬದ ಬದ್ಧತೆಗಳೊಂದಿಗೆ ವ್ಯವಹರಿಸಿ. ಕಷ್ಟಪಟ್ಟು ಕೆಲಸ ಮಾಡಿ. ಮಹಿಳಾ ಉದ್ಯೋಗಿಗಳಿಗೆ ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 6

ತುಲಾ: ಮನೆಯಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಚಿನ್ನದ ವ್ಯವಹಾರಗಳಲ್ಲಿ ಧನಲಾಭ. ಸಕಾರಾತ್ಮಕ ಚಿಂತನೆಯಿಂದ ಯಶಸ್ಸು. ಶುಭಸಂಖ್ಯೆ:3

ವೃಶ್ಚಿಕ: ಕುಟುಂಬದ ವ್ಯವಹಾರದಿಂದ ದೂರವಿರಿ. ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ. ಚಂದ್ರನ ಪ್ರಭಾವದಿಂದ ಕಿರಿಕಿರಿ. ಶುಭಸಂಖ್ಯೆ: 6

ಧನು: ಭವಿಷ್ಯದ ಹೂಡಿಕೆಯ ಕನಸು ನನಸಾಗಲಿದೆ. ದೀರ್ಘಕಾಲಿಕ ಸಮಸ್ಯೆಗಳು ಪರಿಹಾರವಾಗಲಿವೆ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 4

ಮಕರ: ಸಣ್ಣ ವ್ಯಾಪಾರಕ್ಕೆ ಸೂಕ್ತ ಸಮಯ. ಸಂಬಂಧಿಕರಿಂದ ಅಪಪ್ರಚಾರ. ವ್ಯಾಪಾರದಲ್ಲಿ ಹೊಸ ಪಾಲುದಾರರ ಆಗಮನ. ಧನಲಾಭ. ಶುಭಸಂಖ್ಯೆ: 5

ಕುಂಭ: ಹೆಚ್ಚುತ್ತಿರುವ ಕೆಲಸ ನಿಯಂತ್ರಿಸಿ. ಅವಕಾಶದ ಲಾಭ ಪಡೆದುಕೊಳ್ಳಿ. ಚಿಂತೆ ದೂರಾಗಲಿದೆ. ಅವಕಾಶದ ಸದ್ಭಳಕೆ ಮಾಡಿಕೊಳ್ಳಿ. ಶುಭಸಂಖ್ಯೆ: 8

ಮೀನ: ಸಾರ್ವಜನಿಕವಾಗಿ ಬರುವ ಅವಕಾಶಗಳನ್ನು ಸ್ವೀಕರಿಸಿ. ಸಂಗಾತಿಯ ಸಲಹೆಯಿಂದ ಆಸ್ತಿ ಲಾಭ. ಪುಣ್ಯ ಕ್ಷೇತ್ರಕ್ಕೆ ಪ್ರಯಾಣ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net