

ಮೇಷ: ದಿನಸಿ ವ್ಯಾಪಾರಿಗಳಿಗೆ ಉತ್ತಮ ಸಮಯ. ಕುಟುಂಬದಲ್ಲಿ ಶಾಂತಿ, ಸಮಾಧಾನ. ಆದಾಯಕ್ಕಿಂತ ಖರ್ಚು ಹೆಚ್ಚು ಆಗಬಹುದು. ಶುಭಸಂಖ್ಯೆ: 1
ವೃಷಭ: ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ. ಧೈರ್ಯದಿಂದಿರುವಿರಿ. ಅನವಶ್ಯಕ ಖರ್ಚು ನಿಯಂತ್ರಿಸುವುದು ಒಳ್ಳೆಯದು. ಶುಭಸಂಖ್ಯೆ: 9
ಮಿಥುನ: ಉನ್ನತ ಆಧಿಕಾರ ದೊರೆಯುತ್ತದೆ, ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ, ಎಚ್ಚರದಿಂದ ಮಾತನಾಡಿ. ಮಕ್ಕಳಿಗೆ ಕೀರ್ತಿ ಲಭ್ಯ. ಶುಭಸಂಖ್ಯೆ: 5
ಕಟಕ: ರಿಯಲ್ ಎಸ್ಟೇಟ್ ವ್ಯವಹಾರ ಅಬಾಧಿತವಾಗಿ ಮುಂದುವರಿಯಲಿದೆ. ತಾಂತ್ರಿಕ ಪರಿಣಿತರಿಗೆ ಶುಭ. ರಾಜಕಾರಣಿಗಳಿಗೆ ಅಶುಭ. ಶುಭಸಂಖ್ಯೆ: 8
ಸಿಂಹ: ಆಟೋಟ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಹುಷಾರಾಗಿರಿ. ವ್ಯವಹಾರದಲ್ಲಿ ಎಚ್ಚರವಹಿಸಿ. ಶುಭಸಂಖ್ಯೆ: 3
ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಲೇವಾದೇವಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಮನೋವೈದ್ಯರಿಗೆ ಒಳ್ಳೆಯ ದಿನ. ಶುಭಸಂಖ್ಯೆ: 2
ತುಲಾ: ಚರ್ಮದ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಮಾಡಿ. ಆಹಾರದ ಬಗ್ಗೆ ವಿಶೇಷ ಎಚ್ಚರವಿರಲಿ. ಶುಭಸಂಖ್ಯೆ: 8
ವೃಶ್ಚಿಕ: ಮಹಿಳೆಯರಿಗೆ ಉತ್ತಮ ದಿನ. ತಾಂತ್ರಿಕ ಪರಿಣಿತರಿಗೆ ಅಧಿಕ ಲಾಭ ಬರಲಿದೆ. ರಾಜಕಾರಣಿಗಳಿಗೆ ಶುಭದಾಯಕ ದಿನವಲ್ಲ. ಶುಭಸಂಖ್ಯೆ: 4
ಧನುಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ ಹೆಚ್ಚು . ಸಮಾಜದಲ್ಲಿ ಗೌರವ ದೊರೆತು ಸಂತಸ. ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ. ಶುಭಸಂಖ್ಯೆ: 2
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಧಾನ್ಯ ಮಾರಾಟಗಾರರಿಗೆ ಉತ್ತಮ ಆದಾಯ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ: 9
ಕುಂಭ: ದೂರ ಪ್ರಯಾಣ ಮಾಡಬೇಕಾಗುವುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ. ದೈನಂದಿನ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ: 6
ಮೀನ: ಉಪನ್ಯಾಸಕರಿಗೆ ಒಳ್ಳೆಯ ಸಮಯ. ನಾನಾ ರೀತಿಯ ತೊಂದರೆ ಎದುರಿಸಬೇಕಾದೀತು. ಕೋಪ ನಿಯಂತ್ರಿಸದಿದ್ದರೆ ತೊಂದರೆ. ಶುಭಸಂಖ್ಯೆ: 7