

ಮೇಷ: ಕೆಲಸಗಳಿಂದ ಅನುಕೂಲ, ಮಾನ, ಅಪಮಾನ ನಿಂದನೆ, ಸ್ನೇಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 7
ವೃಷಭ: ಕುಟುಂಬದವರೊಂದಿಗೆ ಮನಸ್ತಾಪ. ಮಾನಸಿಕ ವೇದನೆ. ಆರೋಗ್ಯದಲ್ಲಿ ವ್ಯತ್ಯಾಸ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ಶುಭಸಂಖ್ಯೆ: 1
ಮಿಥುನ: ಅನಿರೀಕ್ಷಿತ ಪ್ರಯಾಣ. ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ಅನಾನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3
ಕಟಕ: ಆರ್ಥಿಕವಾಗಿ ಮೋಸ. ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಸ್ನೇಹಿತರ ಜತೆ ಸಮಸ್ಯೆ. ಶುಭಸಂಖ್ಯೆ: 6
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಗೌರವಕ್ಕೆ ಧಕ್ಕೆ. ಮಕ್ಕಳ ನಡವಳಿಕೆಯಿಂದ ಬೇಸರ. ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ. ಶುಭಸಂಖ್ಯೆ: 4
ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ನಿದ್ರಾಭಂಗ. ನಷ್ಟ ಮತ್ತು ಸಂಕಷ್ಟದ ಅನುಭವ. ಶುಭಸಂಖ್ಯೆ: 9
ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆ. ಆತ್ಮಗೌರವಕ್ಕೆ ಚ್ಯುತಿ. ಉತ್ತಮ ಅವಕಾಶಗಳು ಪ್ರಾಪ್ತಿಯಾಗಿ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 8
ವೃಶ್ಚಿಕ: ದುರಾಲೋಚನೆಗಳು ಜಾಸ್ತಿ. ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ ತಲೆದೋರಬಹುದು. ಶುಭಸಂಖ್ಯೆ: 6
ಧನುಸ್ಸು: ಸಾಲದ ಸಹಾಯ. ಮಾನಸಿಕ ವೇದನೆ. ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ. ಕುಲದೇವತಾ ನಿಂದನೆ ಮಾಡುವುದು ಒಳ್ಲೆಯದಲ್ಲ. ಶುಭಸಂಖ್ಯೆ: 1
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಸಮಸ್ಯೆ ಹೆಚ್ಚು, ಆತ್ಮೀಯರು, ಪ್ರೀತಿಪಾತ್ರರು ದೂರವಾದಾರು. ಭಾವನೆಗೆ ಪೆಟ್ಟು. ಶುಭಸಂಖ್ಯೆ: 2
ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತನೆಗಳು, ಶಕ್ತಿ ದೇವತೆಗಳ ದರ್ಶನ ಭಾಗ್ಯ. ಶುಭಸಂಖ್ಯೆ: 5
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳು ಪೆಟ್ಟು ಮಾಡಿಕೊಳ್ಳಬಹುದು ಕಾಳಜಿ ವಹಿಸಿ. ಆರೋಗ್ಯದಲ್ಲಿ ಏರುಪೇರು ಆದೀತು. ಶುಭಸಂಖ್ಯೆ: 7