ಇಂದು ಈ ರಾಶಿಯವರ ಸಾಧನೆಗೆ ಅಭಿನಂದನೆ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಯೋಚನೆಗಳನ್ನು ಇಷ್ಟ ಪಡುತ್ತೀರಿ. ನ್ಯಾಯವಾದಿಗಳಿಗೆ ಸೋಲಾಗಬಹುದು. ಹಾಸ್ಯಗಾರರಿಗೆ ಅಥವಾ ಕಥೆಗಾರರಿಗೆ ಶುಭ ದಿನ. ಶುಭಸಂಖ್ಯೆ: 9

ವೃಷಭ: ಸಿಟ್ಟು ಏಕಾಂಗಿತನಕ್ಕೆ ಕಾರಣವಾಗುವುದು. ಮದುವೆಗೆ ಸಂಬಂಧಿಸಿ ತಾಯಿ, ಅಣ್ಣಂದಿರ ಮನವೊಲಿಸುವಲ್ಲಿ ಯಶಸ್ವಿಯಾಗುವಿರಿ. ಶುಭಸಂಖ್ಯೆ: 5

ಮಿಥುನ: ಮೇಲಧಿಕಾರಿಗಳಿಂದ ಒತ್ತಡ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಕಾರ್ಯ ಸಾಧನೆಯ ಅನುಕೂಲ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 6

ಕಟಕ: ಸಹೋದ್ಯೋಗಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳಲಿದೆ. ವೃತ್ತಿ ಬದಲಾಯಿಸುವ ಯೋಚನೆ ಮುಂದೂಡುವುದು ಉತ್ತಮ. ಶುಭಸಂಖ್ಯೆ: 8

ಸಿಂಹ: ಜವಾಬ್ದಾರಿಗಳತ್ತ ಗಮನ ಹರಿಸಿ. ಆತಂಕವಿಲ್ಲದೆ ಕೆಲಸಕಾರ್ಯಗಳು ಸುಸೂತ್ರವಾಗಿ ನಡೆಯುವವು. ಸಂಗಾತಿಗೆ ಸಮಯ ಕೊಡಿ. ಶುಭಸಂಖ್ಯೆ: 1

ಕನ್ಯಾ: ಸದ್ಯದ ಪರಿಸ್ಥಿತಿಯಲ್ಲಿ ಹಣದ ಬಗ್ಗೆ ಯೋಚಿಸಬೇಕಾಗಿಲ್ಲ. ಜಾಹೀರಾತು ಕ್ಷೇತ್ರದ ಕೆಲಸಗಳಿಂದ ಉತ್ತಮ ಅವಕಾಶಗಳು ಸಿಗಲಿವೆ. ಶುಭಸಂಖ್ಯೆ: 3

ತುಲಾ: ಆತುರದ ನಿರ್ಧಾರದಿಂದ ಧನ ನಷ್ಟ ಆಗಲಿದೆ. ಸಹೋದ್ಯೋಗಿಗಳಿಂದ ಸಹಾಯ. ಕೆಲ ವಿಚಾರದಲ್ಲಿ ಘರ್ಷಣೆ ಸಾಧ್ಯತೆ ಇದೆ. ಶುಭಸಂಖ್ಯೆ: 2

ವೃಶ್ಚಿಕ: ಕೈಗೊಳ್ಳಲಿರುವ ನಿರ್ಧಾರಗಳು ಮನೆಯವರಿಗೆ ತಿಳಿದಿರಲಿ. ಅವಿವಾಹಿತರಿಗೆ ವಿವಾಹ ಸಿದ್ದಿ. ಸಾಧನೆಗೆ ಅಭಿನಂದನೆ ಸಿಗಲಿದೆ. ಶುಭಸಂಖ್ಯೆ: 6

ಧನುಸ್ಸು: ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಿ. ಮೇಲಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ. ಪದವಿ ಪ್ರಾಪ್ತಿಯಲ್ಲಿ ತೊಂದರೆ. ಶುಭಸಂಖ್ಯೆ: 2

ಮಕರ: ಹಿಂಜರಿಕೆ, ಭಯದ ಸ್ವಭಾವದಿಂದ ಹಿನ್ನಡೆ. ಕುಟುಂಬದ ನಿಮ್ಮ ಕಾಳಜಿ ಸಂತೃಪ್ತಿ ತಂದು ಕೊಡುವುದು. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಕುಂಭ: ಅವಿವಾಹಿತರಿಗೆ ವಿವಾಹ ಯೋಗವಿದೆ. ವೈಯಕ್ತಿಕ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ. ವೃತ್ತಿ ಸಂಬಂಧೀ ವಿಷಯಗಳು ನಿರಾಳ. ಶುಭಸಂಖ್ಯೆ: 3

ಮೀನ: ನೀವಂದುಕೊಂಡಷ್ಟು ನಿಮ್ಮ ಪರಿಸ್ಥಿತಿ ಕೆಟ್ಟದಾಗಿ ಇಲ್ಲ. ಲಾಭಗಳಿಸುವ ಉದ್ದೇಶವಿದ್ದಲ್ಲಿ ಸ್ವಲ್ಪ ಸಮಯ ಕಾಯಬೇಕಾಗುವುದು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net