

ಮೇಷ: ವ್ಯಾಪಾರಿಗಳಿಗೆ ಧನಾಗಮನದ ಸಾಧ್ಯತೆ. ಮಕ್ಕಳಿಂದ ಶುಭ ಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 3
ವೃಷಭ: ಪರಿಶ್ರಮಕ್ಕೆ ತಕ್ಕುದಾದ ಮನ್ನಣೆ. ನಿಂತುಹೋಗಿರುವ ಯೋಜನೆಗಳಿಗೆ ಮರುಚಾಲನೆ. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 8
ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ನೆನೆದ ಕಾರ್ಯಗಳು ಸಿದ್ಧಿ. ವಾಹನ ಚಾಲನೆಯಲ್ಲಿ ಅಪಘಾತದ ಬಗ್ಗೆ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ:
ಕಟಕ: ಅಪವಾದದಿಂದ ಪಾರಾಗಲಿದ್ದೀರಿ. ಪ್ರಯಾಣವು ಶುಭಕರವಾಗಿ ಪರಿಣಮಿಸಲಿದೆ. ಮಕ್ಕಳ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ. ಶುಭಸಂಖ್ಯೆ: 1
ಸಿಂಹ: ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವಿನಾಕಾರಣ ಅಧಿಕ ಖರ್ಚು ಸಂಭವಿಸುವ ಸಾಧ್ಯತೆ. ಶುಭಸಂಖ್ಯೆ: 4
ಕನ್ಯಾ: ಕೆಲಸದಲ್ಲಿ ಕಿರಿಕಿರಿ. ಅತಿಯಾದ ನಂಬಿಕೆ ಸಲ್ಲದು. ಮನೆ ಮಂದಿಯೊಂದಿಗೆ ದೂರದ ಬಂಧುಗಳ ದರ್ಶನ ಯೋಗ. ಶುಭಸಂಖ್ಯೆ: 9
ತುಲಾ: ಸಾಹಿತಿ, ಬರಹಗಾರರಿಗೆ ಶುಭದಿನ. ಕಾರ್ಯ ಬಾಹುಳ್ಯದಿಂದಾಗಿ ಮಾನಸಿಕ ಗೊಂದಲ. ಆಯ್ಕೆಯ ಮೂಲಕ ಕೆಲಸ ಕೈಗೆತ್ತಿಕೊಳ್ಳಿ. ಶುಭಸಂಖ್ಯೆ: 5
ವೃಶ್ಚಿಕ: ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಗುರುಹಿರಿಯರ ಸಲಹೆ ಪಡೆದುಕೊಳ್ಳುವುದು ಉತ್ತಮ. ಶುಭಸಂಖ್ಯೆ: 6
ಧನುಸ್ಸು: ಸರ್ಕಾರಿ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಪ್ರಗತಿ. ನೆಮ್ಮದಿಯನ್ನು ಕಾಣುವಿರಿ. ಶುಭಸಂಖ್ಯೆ: 9
ಮಕರ: ಬಿಡುವಿಲ್ಲದ ಕೆಲಸ ಕಾರ್ಯಗಳು, ಉಪನ್ಯಾಸಕ ವೃತ್ತಿಯಲ್ಲಿರುವವರಿಗೆ ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ. ಶುಭಸಂಖ್ಯೆ: 3
ಕುಂಭ: ಮನೆ ನಿರ್ಮಾಣ ಹಾಗೂ ಇತರ ಕೆಲಸಗಳಲ್ಲಿ ಪ್ರಗತಿ. ವಾಹನ ಖರೀದಿಗೆ ಪ್ರಶಸ್ತ ದಿನ. ಪಾಲುದಾರಿಕೆ ವ್ಯವಹಾರದಲ್ಲಿ ಸಣ್ಣ ಬಿರುಕು. ಶುಭಸಂಖ್ಯೆ: 1
ಮೀನ: ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಸಹೋದ್ಯೋಗಿಗಳ ಸಹಕಾರದಿಂದ ನೆಮ್ಮದಿ ಮೂಡಲಿದೆ. ಶುಭಸಂಖ್ಯೆ: 8