ಈ ರಾಶಿಯವರು ಇಷ್ಟ ಇಲ್ದಿರೋ ಸ್ಥಳಕ್ಕೆ ವರ್ಗಾವಣೆಯಾಗಬಹುದು!

Nitya-Bhavishya-vvani-1-2-1
Published on

ಮೇಷ: ನೆರೆಹೊರೆಯವರಲ್ಲಿ ಒಳ್ಳೆಯ ಜನರನ್ನು ಗೆಳೆಯರನ್ನಾಗಿ ಪಡೆಯುವಂತಹ ಸುಯೋಗ ನಿಮ್ಮ ಪಾಲಿಗಿದೆ. ಶುಭಸಂಖ್ಯೆ: 3

ವೃಷಭ: ಆತುರಪಡುವ ಕಾರಣದಿಂದ ಅಧಿಕಾರ ಮತ್ತು ಜನಪ್ರಿಯತೆಗಳ ಬಗೆಗಿನ ನಿಮ್ಮ ಮಹತ್ವಾಕಾಂಕ್ಷೆ ಹಾಳಾದೀತು. ಶುಭಸಂಖ್ಯೆ: 8

ಮಿಥುನ: ಬೇಡವೆನಿಸಿದ ಸ್ಥಳಗಳಿಗೇ ವರ್ಗಾವಣೆಯ ಸಂದರ್ಭಗಳು ಕೂಡಿ ಬರಬಹುದು. ರಾಮರಕ್ಷಾ ಸ್ತೋತ್ರ ಓದಿ. ಶುಭಸಂಖ್ಯೆ: 6

ಕಟಕ: ನಿಮ್ಮ ಬಗ್ಗೆ ಇಂದು ಸ್ನೇಹಿತರಾಗಲೀ, ಮೇಲಧಿಕಾರಿಗಳೇ ಆಗಿರಲಿ, ಒಳ್ಳೆಯದೇ ಮನೋಭಾವ ತಳೆಯಲಿದ್ದಾರೆ. ಶುಭಸಂಖ್ಯೆ: 9

ಸಿಂಹ: ಸಮಾಜದ ಎಲ್ಲರನ್ನೂ ಸಂಘಟಿಸುವ ಶಕ್ತಿಯುಳ್ಳ ನೀವು ಅದರಿಂದಾಗಿ ಪ್ರಶಂಸೆಯನ್ನು ಗಳಿಸುವುದಕ್ಕೆ ಸಾಧ್ಯವಿದೆ. ಶುಭಸಂಖ್ಯೆ: 1

ಕನ್ಯಾ: ಕೆಲವು ಘಟನೆಗಳ ಕಾರಣದಿಂದ ರಾಜಕಾರಣಿಗಳು ಅಸಮಾಧಾನ ಹೊಂದುವ ಸಾಧ್ಯತೆಗಳಿವೆ. ಜಾಣ್ಮೆ ಇರಲಿ. ಶುಭಸಂಖ್ಯೆ: 5

ತುಲಾ: ಬಹಳ ಕಾಲದಿಂದ ನಡೆಯುತ್ತಿರುವ ವಿವಾದಗಳು ಅನೇಕ ರೀತಿಯ ನಾಟಕೀಯ ತಿರುವುಗಳನ್ನು ಪಡೆಬಹುದು. ಶುಭಸಂಖ್ಯೆ: 2

ವೃಶ್ಚಿಕ: ಕಿರಾಣಿ ವ್ಯಾಪಾರಿಗಳು, ಹಾರ್ಡ್​ವೇರ್ ವ್ಯಾಪಾರಸ್ಥರು, ಕೃಷಿಕರಿಗೆ ಸದ್ಯಕ್ಕೆ ಲಾಭದಾಯಕ ವಾತಾವರಣವಿದೆ. ಶುಭಸಂಖ್ಯೆ: 7

ಧನಸ್ಸು: ಧನಲಾಭದ ವಿಚಾರದಲ್ಲಿ ನಿಮ್ಮ ತಲೆಮಾರಿನವರ ಹೊಸ ಬಗೆಯ ವಿಚಾರಗಳು ನಿಮಗೆ ಬೆಂಬಲ ನೀಡಬಲ್ಲವು. ಶುಭಸಂಖ್ಯೆ: 4

ಮಕರ: ವಿಮಾಕ್ಷೇತ್ರ, ವೈದ್ಯಕೀಯ ಕ್ಷೇತ್ರ, ವಿಜ್ಞಾನರಂಗದಲ್ಲಿ ಇರುವವರಿಗೆ ಅನುಕೂಲಕರವಾದ ದಿನ ಎನಿಸಲಿದೆ. ಶುಭಸಂಖ್ಯೆ: 3

ಕುಂಭ: ಹಲವಾರು ಬಗೆಯ ಬದಲಾವಣೆಗಳ ಕುರಿತು ನೀವು ರ್ತಾಕವಾಗಿ ಆಲೋಚಿಸುವುದರಿಂದ ಸಿದ್ಧಿಗೆ ದಾರಿ ಇದೆ. ಶುಭಸಂಖ್ಯೆ: 8

ಮೀನ: ಆಧ್ಯಾತ್ಮಿಕ ವಿಚಾರಗಳ ಓದು ನಿಮ್ಮ ಮನಸ್ಸನ್ನು ಹೊಸ ಚಿಂತನೆಗಳಿಗೆ ತೆರೆದಿಡಲಿದೆ. ಆರೋಗ್ಯದತ್ತ ಗಮನವಿರಲಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net