

ಮೇಷ: ಸಾತ್ವಿಕ ಜನರಾದ ನಿಮ್ಮನ್ನು ಮೆಚ್ಚಿಕೊಳ್ಳದಿರಲು ಸಾಧ್ಯವಿಲ್ಲ. ಜನರೊಡನೆ ಮಾತನಾಡಲು ಖಂಡಿತ ಸಂಕೋಚಪಡಬೇಡಿ. ಶುಭಸಂಖ್ಯೆ: 8
ವೃಷಭ: ಸರ್ರನೇ ಬರುವ ಸಿಟ್ಟನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಅದರ ಅಸಮತೋಲನ ತೊಂದರೆ ತಂದೀತು. ಎಚ್ಚರ. ಶುಭಸಂಖ್ಯೆ: 5
ಮಿಥುನ: ಸರಾಗವಾಗಿ ನಡೆಯುತ್ತಿರುವ ವಹಿವಾಟುಗಳಲ್ಲಿ ಹೆಚ್ಚಿನದೇನೂ ಬದಲಾವಣೆ ಮಾಡಬೇಡಿ. ತೊಂದರೆಯೇ ಆದೀತು. ಶುಭಸಂಖ್ಯೆ: 2
ಕಟಕ: ನಿಮ್ಮ ಬೆನ್ನ ಹಿಂದೆ ಅಪಾರವಾದ ಟೀಕೆಗಳನ್ನು ಮಾಡುವವರಿದ್ದಾರೆ. ಆದರೆ ನೀವೇನೂ ತಾಳ್ಮೆ ಕಳೆದುಕೊಳ್ಳದಿರಿ. ಶುಭಸಂಖ್ಯೆ: 1
ಸಿಂಹ: ಸಾಮಾಜಿಕ ಪರಿಸರದ ಆಗುಹೋಗುಗಳನ್ನು ಅರ್ಥಮಾಡಿಕೊಂಡು ಸ್ಪಂದಿಸುತ್ತೀರಿ. ಇದರಿಂದ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 4
ಕನ್ಯಾ: ಅಪಾರ ಕರುಣಾಮಯಿ ಭಗವಂತನಿಗೆ ಶ್ರದ್ಧೆಯಿಂದ ಶರಣು ಹೊಂದುವುದರಿಂದ ನಿಮಗಿಂದು ಒಳಿತಾಗಲಿದೆ. ಶುಭಸಂಖ್ಯೆ: 7
ತುಲಾ: ನಿಮ್ಮ ವಿರುದ್ಧ ನಕಾರಾತ್ಮಕ ಮಾತುಗಳೇ ಹೆಚ್ಚು ಕೇಳಿಬರಬಹುದು. ಅದನ್ನು ನಿರ್ಲಕ್ಷಿಸಿ. ಪ್ರಾಮಾಣಿಕತೆ ಬಿಡದಿರಿ. ಶುಭಸಂಖ್ಯೆ: 9
ವೃಶ್ಚಿಕ: ತಾಂತ್ರಿಕ ಜ್ಞಾನದಿಂದ ಅಪಾರವಾದ ಲಾಭವನ್ನು ತಂದುಕೊಡುವ ಬೆಳವಣಿಗೆ ನಿಮ್ಮ ಬಾಳಿನಲ್ಲಿಂದು ಜರುಗಲಿದೆ. ಶುಭಸಂಖ್ಯೆ: 6
ಧನುಸ್ಸು: ಯಾರನ್ನಾದರೂ ಅವಲಂಬಿಸುವ ಯೋಚನೆ ದೂರ ಮಾಡಿ. ಸ್ವಾವಲಂಬನೆಯಿಂದ ಸಿದ್ಧಿಗೆ ದಾರಿ ಲಭ್ಯವಿದೆ. ಶುಭಸಂಖ್ಯೆ: 3
ಮಕರ: ಖರ್ಚುವೆಚ್ಚಗಳು ಹೆಚ್ಚಾಗುತ್ತಿವೆ ಎಂದು ಸಿಡುಕಾಡದಿರಿ. ಖರ್ಚಾಗುವ ರೀತಿಯಲ್ಲಿ ನಿಯಂತ್ರಣವನ್ನು ಸಾಧಿಸಿ. ಶುಭಸಂಖ್ಯೆ: 1
ಕುಂಭ: ಮಹಾಮೃತ್ಯುಂಜಯನನ್ನು ಭಕ್ತಿಯಿಂದ ಭಜಿಸಿ. ಇಷ್ಟಾರ್ಥಗಳನ್ನು ಸಾಧಿಸುವ ಪ್ರಯತ್ನದಲ್ಲಿ ಯಶಸ್ಸು ಲಭ್ಯ. ಶುಭಸಂಖ್ಯೆ: 5
ಮೀನ: ಯೋಗ್ಯ ನಾಯಕತ್ವದ ಹುಡುಕಾಟದಲ್ಲಿ ಎಲ್ಲರ ಗಮನ ನಿಮ್ಮ ಕಡೆ ಬರಬಹುದು. ಸಂಯಮದಿಂದ ಸಿದ್ಧಿಯಿದೆ. ಶುಭಸಂಖ್ಯೆ: 9