

ಮೇಷ: ಯೋಜನೆಗಳನ್ನು ಕೈಗೊಳ್ಳುವಿರಿ, ಕೌಟುಂಬಿಕ ವಿವಾದಗಳು ರಾಜಿಯಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಶುಭಸಂಖ್ಯೆ: 9
ವೃಷಭ: ನಿಂದನೆಗೊಳಗಾಗುವ ಸಾಧ್ಯತೆಯಿದೆ, ಎಚ್ಚರ. ಪಾರಂಪರಿಕ ವೃತ್ತಿಯಲ್ಲಿ ಆದಾಯ. ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡ. ಶುಭಸಂಖ್ಯೆ:1
ಮಿಥುನ: ಕುಟುಂಬದಲ್ಲಿ ಸಂತೋಷ. ವ್ಯವಹಾರದಲ್ಲಿ ಎಚ್ಚರಿಕೆ ಯಿಂದಿರುವುದು ಈ ದಿನ ತುಂಬ ಅಗತ್ಯವಿದೆ. ಅಧಿಕ ಹಣ ಖರ್ಚಾಗುತ್ತದೆ. ಶುಭಸಂಖ್ಯೆ:6
ಕಟಕ: ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಅನಿರೀಕ್ಷಿತ ಧನಾಗಮನ. ಕೆಲಸ- ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 8
ಸಿಂಹ: ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ನೆರೆಹೊರೆಯವ ರೊಂದಿಗೆ ಸ್ನೇಹದಿಂದಿರಿ. ತಪ್ಪುಗಳನ್ನು ಸರಿಪಡಿಸಿ ಕೊಂಡು ಸಮಾಧಾನದಿಂದಿರಿ. ಶುಭಸಂಖ್ಯೆ: 4
ಕನ್ಯಾ: ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುತ್ತವೆ. ಗೃಹ ನಿರ್ಮಾಣ ಕಾರ್ಯಕ್ಕೆ ಯೋಜನೆ. ಶುಭಸಂಖ್ಯೆ:2
ತುಲಾ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು. ಆಹಾರದಲ್ಲಿ ವ್ಯತ್ಯಾಸವಾಗಿ ತೊಂದರೆ. ಅಗ್ನಿಯಿಂದ ಎಚ್ಚರದಿಂದಿರಿ. ಶುಭಸಂಖ್ಯೆ: 1
ವೃಶ್ಚಿಕ: ದೀರ್ಘಕಾಲಿನ ವ್ಯಾಧಿ ನಿವಾರಣೆಯಾಗುವುದು. ವಿವಾಹ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಆಧ್ಯಾತ್ಮಿಕ ಚಿಂತನೆ ಮಾಡುವಿರಿ. ಶುಭಸಂಖ್ಯೆ: 7
ಧನುಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರಿಕೆ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ದೊರೆತು ಸಮಾಧಾನ. ಕ್ರೀಡಾಪಟುಗಳಿಗೆ ಉತ್ತಮ ದಿನ. ಶುಭಸಂಖ್ಯೆ: 9
ಮಕರ: ಆಂತರಿಕ ಶತ್ರುಗಳಿರುತ್ತಾರೆ. ಎಚ್ಚರದಿಂದ ಇರಿ. ಸಂಗಾತಿಯಲ್ಲಿ ಅಸಮಾಧಾನ ಪ್ರದರ್ಶಿಸುವಿರಿ, ಆಸ್ತಿ ಖರೀದಿಸುವ ಯೋಜನೆ. ಶುಭಸಂಖ್ಯೆ: 3
ಕುಂಭ: ಪೋಷಕರೊಂದಿಗೆ ಉತ್ತಮ ಬಾಂಧವ್ಯ. ನಿರೀಕ್ಷಿತ ಕಾರ್ಯ ನೆರವೇರುತ್ತದೆ. ವಾಹನಗಳ ಬಿಡಿಭಾಗಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5
ಮೀನ: ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು. ಕೆಲಸಗಳಲ್ಲಿ ಪ್ರಗತಿ ಕಾಣಿಸಲಿದೆ. ವಿವಾದಾಸ್ಪದ ವಿಷಯಗಳಲ್ಲಿ ಹುಷಾರಾಗಿರಿ. ಶುಭಸಂಖ್ಯೆ: 6