ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಹುಷಾರು: ನಿತ್ಯಭವಿಷ್ಯ

Nithya Bhavishya
Published on

ಮೇಷ: ನಲ್ಮೆಯ ಸ್ನೇಹಿತನ ಆಗಮನ. ಬಂಧು-ಮಿತ್ರರೊಂದಿಗೆ ಔತಣಕೂಟ. ಕಚೇರಿಯಲ್ಲಿ ಕಿರಿಕಿರಿ ಉಂಟಾಗಬಹುದು. ಶುಭಸಂಖ್ಯೆ: 2

ವೃಷಭ: ಬಹುಕಾಲದಿಂದ ಬಾಧಿಸುತ್ತಿದ್ದ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಸಹೋದ್ಯೋಗಿಗಳಿಂದ ಸಲಹೆ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9

ಮಿಥುನ: ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗೆ ಅವಕಾಶ. ಸಾಲಗಾರರಿಂದ ತೊಂದರೆ. ಆರೋಗ್ಯದಲ್ಲಿ ಒತ್ತಡ ಜಾಸ್ತಿಯಾಗಬಹುದು. ಶುಭಸಂಖ್ಯೆ: 8

ಕಟಕ: ದೃಢ ಮನಸ್ಸು ತುಂಬ ಮುಖ್ಯ. ನಿಮ್ಮ ಕಾರ್ಯಕ್ಷಮತೆಗೆ ಬಹುವಿಧದ ಪ್ರಶಂಸೆ. ಸಿದ್ಧಿಯ ಸಾಫಲ್ಯತೆಯಿಂದ ಸಮಾಧಾನ. ಶುಭಸಂಖ್ಯೆ: 9

ಸಿಂಹ: ಭಾವನಾತ್ಮಕತೆಗೆ ಅವಕಾಶ ಮಾಡಿಕೊಡಬೇಡಿ. ಹಿತಶತ್ರುಗಳಿಂದ ತೊಂದರೆಯಾಗಬಹುದು. ಪತಿಯೊಂದಿಗೆ ವಾಗ್ವಾದ. ಶುಭಸಂಖ್ಯೆ: 8

ಕನ್ಯಾ: ಆಸೆ ತಪ್ಪಲ್ಲ, ದುರಾಸೆ ಮುಳುವಾಗಬಹುದು. ಸಾರ್ವಜನಿಕವಾಗಿ ಸೌಹಾರ್ದದಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 5

ತುಲಾ: ಆತ್ಮಾಭಿಮಾನದಿಂದ ಮುಂದುವರಿಯಿರಿ. ಯಶಸ್ಸು ನಿಮ್ಮದೇ. ದುರ್ಬಲರಿಗೆ ಸಹಾಯ ಮಾಡಿ. ಬಂಧುಗಳ ಆಗಮನ. ಶುಭಸಂಖ್ಯೆ: 6

ವೃಶ್ಚಿಕ: ಅನವಶ್ಯಕ ಖರ್ಚು ಮಾಡಬೇಡಿ. ಭೂಮಿ ವಿಚಾರದಲ್ಲಿ ಮಹತ್ವದ ತಿರುವು. ಸಹೋದರರೊಂದಿಗೆ ಆತ್ಮೀಯತೆಯಿಂದ ಇರಿ. ಶುಭಸಂಖ್ಯೆ: 7

ಧನುಸ್ಸು: ತಂದೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಗನಿಂದ ಸಹಾಯ. ಹಳೇ ಸ್ನೇಹಿತನೊಂದಿಗೆ ಭೋಜನ. ಶುಭಸಂಖ್ಯೆ: 9

ಮಕರ: ಬಿಡುವಿಲ್ಲವೆಂದು ಕುಟುಂಬದ ಬಗ್ಗೆ ಅಸಡ್ಡೆ ಬೇಡ. ಆತ್ಮೀಯ ಸ್ನೇಹಿತನೊಂದಿಗೆ ಮನಸ್ತಾಪ. ಹಣಕಾಸಿನ ವಿಚಾರದಲ್ಲಿ ಹುಷಾರು. ಶುಭಸಂಖ್ಯೆ:1

ಕುಂಭ: ಅನವಶ್ಯಕವಾಗಿ ನಷ್ಟ. ಸಾಲಗಾರರ ಕಾಟ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 6

ಮೀನ: ಹೊಸ ಹೂಡಿಕೆಯತ್ತ ಗಮನಹರಿಸಿ. ಕೆಲಸಗಾರರ ಬಗ್ಗೆ ಅನುಕಂಪವಿರಲಿ. ರಾಜಕೀಯದಲ್ಲಿ ಇರುವವರಿಗೆ ವಿಶೇಷ ಮನ್ನಣೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net