ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವೃತ್ತಿಪರರಿಗೆ ವಿಪುಲ ಅವಕಾಶ. ಪೋಷಕರ ಆರೋಗ್ಯ ದಲ್ಲಿ ಕಾಳಜಿವಹಿಸಿ. ಹೊಸದನ್ನು ಕಲಿಯುವ ಅವಕಾಶ ದೊರೆಯುವುದು. ಶುಭಸಂಖ್ಯೆ: 9

ವೃಷಭ: ವಿವಾಹದ ವಿಷಯವಾಗಿ ಶುಭವಾರ್ತೆ ಕೇಳುವಿರಿ. ಶಿಕ್ಷಣ ಕ್ಷೇತ್ರದವರಿಗೆ ಉತ್ತಮ ದಿನ. ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 4

ಮಿಥುನ: ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮ ಪಾಲಿಗಿದೆ. ಶ್ರಮಕ್ಕೆ ತಕ್ಕ ಫಲ ಸಿಗುವುದು. ಮಾತಿನಿಂದ ಶತ್ರುಗಳು ಸೃಷ್ಟಿಯಾದಾರು, ಹುಷಾರು. ಶುಭಸಂಖ್ಯೆ: 3

ಕಟಕ: ವಿವಾಹ ಪ್ರಸ್ತಾಪ ಫಲ ನೀಡಲಿದೆ. ಬಂಧು ಬಳಗದವರೊಡನೆ ಭಿನ್ನಾಭಿಪ್ರಾಯ ಬರಬಹುದು. ಸ್ತ್ರೀಯರಿಗೆ ಆಭರಣ ಲಾಭ. ಶುಭಸಂಖ್ಯೆ: 6

ಸಿಂಹ: ಕ್ರೀಡಾಪಟುಗಳಿಗೆ ವಿಶೇಷ ದಿನವಾಗಿದೆ. ದಾಂಪತ್ಯ ದಲ್ಲಿ ವಿರಸ ತಲೆದೋರಬಹುದು. ಸಮಾಧಾನಿ ಯಾಗಿರಿ. ಸಂತಾನ ಯೋಗ. ಶುಭಸಂಖ್ಯೆ: 9

ಕನ್ಯಾ: ಮಿತ್ರರ ಸಹಕಾರ. ಹೂಡಿಕೆಯಲ್ಲಿ ಲಾಭ. ಭವಿಷ್ಯದ ಚಿಂತೆ. ಬಹುನಿರೀಕ್ಷಿತ ಕೆಲಸದಲ್ಲಿ ಯಶಸ್ವಿ. ವಿದ್ಯಾರ್ಥಿಗಳಿಗೆ ಅಶುಭ ದಿನ. ಶುಭಸಂಖ್ಯೆ: 8

ತುಲಾ: ಕೆಲಸದಲ್ಲಿ ಬಡ್ತಿ ದೊರೆಯುವುದು. ಆಕಸ್ಮಿಕ ಧನಲಾಭ. ತಾಯಿ ಕಡೆಯ ಆಸ್ತಿ ವಿಚಾರದಲ್ಲಿ ಘರ್ಷಣೆ. ಮಾಟ ಮಂತ್ರದ ಭೀತಿ. ಶುಭಸಂಖ್ಯೆ: 2

ವೃಶ್ಚಿಕ: ಬಿದ್ದು ಪೆಟ್ಟಾಗುವ ಸಾಧ್ಯತೆ. ಯಂತ್ರೋಪಕರಣ ಗಳಿಂದ ತೊಂದರೆ. ಅವಿವಾಹಿತರಿಗೆ ಶುಭ ಸುದ್ದಿ. ವಿದೇಶ ಪ್ರಯಾಣ ಯಶಸ್ವಿ. ಶುಭಸಂಖ್ಯೆ: 3

ಧನುಸ್ಸು: ಭೂ ವ್ಯವಹಾರದಲ್ಲಿ ತೊಂದರೆ. ಕಟ್ಟಡ ವೃತ್ತಿಯವರಿಗೆ ಗಾಯಗಳಾಗುವ ಸಂಭವ. ವ್ಯವಸಾಯಗಾರರಿಗೆ ಮೋಸ ಸಾಧ್ಯತೆ. ಶುಭಸಂಖ್ಯೆ: 6

ಮಕರ: ವಕೀಲಿ ವೃತ್ತಿಯಲ್ಲಿ ತೊಂದರೆ ಉಂಟಾಗಬಹುದು. ಆಭರಣ ಖರೀದಿಯಲ್ಲಿ ವಂಚನೆಯಾಗುವ ಸಂಭವ. ಹಣಕಾಸಿನ ತೊಂದರೆ. ಶುಭಸಂಖ್ಯೆ: 4

ಕುಂಭ: ಸಹೋದರನ ಆರೋಗ್ಯದಲ್ಲಿ ಸಮಸ್ಯೆ. ಮನೆಯ ಹಿರಿಯರೊಂದಿಗೆ ಜಗಳವಾದೀತು. ಸ್ನೇಹಿತರೇ ಶತ್ರುಗಳಾಗಬಹುದು ಎಚ್ಚರ. ಶುಭಸಂಖ್ಯೆ: 8

ಮೀನ: ಹೂಡಿಕೆಯಲ್ಲಿ ಮೋಸ. ವಕೀಲರಿಗೆ ಶುಭ. ಸಹೋದ್ಯೋಗಿಗಳಿಂದ ಸಹಕಾರ. ನಟರು ಮತ್ತು ಗಾಯಕರಿಗೆ ಹೇರಳ ಅವಕಾಶ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net