ಇಂದು ಈ ರಾಶಿಯ ಸ್ತ್ರೀಯರಿಗೆ ಅನುಕೂಲಕರ ಸ್ಥಿತಿ, ಚಿನ್ನಾಭರಣ ಖರೀದಿ ಸಾಧ್ಯತೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪರಿಶ್ರಮದಿಂದಾಗಿ ಯಶಸ್ಸು. ಎದುರಾಳಿಗಳ ಕುತಂತ್ರ ಬಯಲಾಗಲಿದೆ.ಚಿಂತೆಗೆ ಅವಕಾಶವಿಲ್ಲ. ತೈಲ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 9

ವೃಷಭ: ಬಂಧು ಆಗಮನದಿಂದ ನೆಮ್ಮದಿ. ಆರೋಗ್ಯಕ್ಕಾಗಿ ಯೋಗಕ್ಕೆ ಮೊರೆ. ಪಶು ಪಕ್ಷಿಗೆ ಆಹಾರ ನೀಡಿ. ದೀನರಿಗೆ ಸಹಾಯ ಮಾಡಿ. ಶುಭಸಂಖ್ಯೆ: 6

ಮಿಥುನ: ಉಲ್ಲಾಸದಿಂದ ಮೈ ಮರೆಯುವ ಸಾಧ್ಯತೆ. ಉದ್ಯೋಗದಲ್ಲಿ ಆತ್ಮವಿಶ್ವಾಸ. ಅತಿಯಾಗಿ ಪ್ರೀತಿಸುವವರಿಂದ ಸಾಂತ್ವನ. ಶುಭಸಂಖ್ಯೆ: 8

ಕಟಕ: ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಅನಿರೀಕ್ಷಿತ ತಲೆನೋವು, ಬೆನ್ನುನೋವು. ನಿಗದಿತ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 1

ಸಿಂಹ: ವ್ಯವಹಾರದಲ್ಲಿ ಉನ್ನತಿಯಾಗಿ ಗೌರವಾದರಗಳನ್ನು ಪಡೆಯುವಿರಿ. ಸತ್ಪುರುಷರ ದರ್ಶನ. ಚಿನ್ನಾಭರಣ ಖರೀದಿ ಸಾಧ್ಯತೆ. ಶುಭಸಂಖ್ಯೆ: 2

ಕನ್ಯಾ: ವಸ್ತ್ರವಿನ್ಯಾಸಕಾರರಿಗೆ ಆರ್ಥಿಕ ಲಾಭ. ಹೆಚ್ಚಿನ ಜಬಾಬ್ದಾರಿ ನಿಭಾಯಿಸುವಲ್ಲಿ ಯಶಸ್ಸು. ಆತ್ಮೀಯರಲ್ಲಿ ಸಂತಸ ಹಂಚಿಕೊಳ್ಳಿ. ಶುಭಸಂಖ್ಯೆ: 5

ತುಲಾ: ಒಳ್ಳೆಯ ಕೆಲಸದ ನಿರೀಕ್ಷೆ. ವ್ಯವಹಾರದಲ್ಲಿ ಪ್ರಗತಿ. ಗ್ರಹಬಲಗಳು ಕೂಡಿಬರಲಿವೆ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಸಾಧ್ಯತೆ. ಶುಭಸಂಖ್ಯೆ: 9

ವೃಶ್ಚಿಕ: ಆರ್ಥಿಕರಂಗದಲ್ಲಿ ಪ್ರಗತಿ. ದೂರಪ್ರಯಾಣ. ಆರೋಗ್ಯ ಚೇತರಿಕೆ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ. ಉದ್ಯೋಗದಲ್ಲಿ ಆಸಕ್ತಿ. ಶುಭಸಂಖ್ಯೆ: 4

ಧನುಸ್ಸು: ಯಾವುದೇ ಬದಲಾವಣೆಯಾದರೂ ಫಲಿತಾಂಶ ನಿಮ್ಮ ಪರವಾಗಿರಲಿದೆ. ರಕ್ಷಣಾ ಕ್ಷೇತ್ರದಲ್ಲಿದ್ದವರಿಗೆ ಕಠಿಣ ಸವಾಲಿನ ಸಾಧ್ಯತೆ. ಶುಭಸಂಖ್ಯೆ: 1

ಮಕರ: ಸಮಾಧಾನ ಚಿತ್ತದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ದುಡುಕುತನ ಒಳ್ಳೆಯದಲ್ಲ. ಯೋಚಿಸಿ ನಿರ್ಧರಿಸಿ. ಶುಭಸಂಖ್ಯೆ: 6

ಕುಂಭ: ಅನಿರೀಕ್ಷಿತ ಬೆಳವಣಿಗೆಯಿಂದ ಅಧಿಕಾರ ಹೊಂದು ವಿರಿ. ವಿರೋಧಿಗಳಿಂದಲೂ ಸೈ ಎನ್ನಿಸಿಕೊಳ್ಳುವಂತಹ ಕಾರ್ಯಸಾಧನೆ. ಶುಭಸಂಖ್ಯೆ: 7

ಮೀನ: ವೈದ್ಯರಿಗೆ ಅಧಿಕ ಶ್ರಮ. ಸ್ತ್ರೀಯರಿಗೆ ಅನುಕೂಲಕರ ಸ್ಥಿತಿ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೋವ್ಯಾಧಿ ದೂರವಾಗಲಿದೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net