ಈ ರಾಶಿಯವರು ವಿವಾದವೊಂದರಲ್ಲಿ ಸಿಲುಕಿ ಒದ್ದಾಡುವ ಸಂದರ್ಭವಿದೆ ಎಚ್ಚರ !

Nithya Bhavishya
Published on

ಮೇಷ: ವಾಸಸ್ಥಳದ ಬದಲಾವಣೆಗೆ ಅನುಕೂಲಕರ

ಅವಕಾಶಗಳು ಎದುರಾಗಲಿವೆ. ಅತಿಯಾದ

ನಿರೀಕ್ಷೆಯನ್ನು ಬಿಡಿ. ಶುಭಸಂಖ್ಯೆ: 8

ವೃಷಭ: ಎಲ್ಲ ಸಂದರ್ಭಗಳಲ್ಲೂ ನಿಮಗೆ

ನೀವೇ ಗುರುವಾಗುವುದು ಸಮಂಜಸವಲ್ಲ.

ಕಷ್ಟಕ್ಕೆ ಸಿಲುಕಬಹುದು. ಎಚ್ಚರ. ಶುಭಸಂಖ್ಯೆ: 1

ಮಿಥುನ: ತುಸು ಅಡೆತಡೆಗಳ ಬಳಿಕ

ಇಷ್ಟಾರ್ಥಗಳು ಪೂರ್ಣವಾಗಲಿವೆ. ವಿಘ್ನನಿವಾರಕನಾದ

ಗಣಪತಿಯನ್ನು ಪ್ರಾರ್ಥಿಸಿ. ಶುಭಸಂಖ್ಯೆ: 6

ಕಟಕ: ವೃತ್ತಿಯಿಂದ ಬಿಡುವು ಪಡೆದು ಮನೆಯವರ

ಜತೆ ಸಂತೋಷದಿಂದ ಕಾಲ ಕಳೆಯಿರಿ.

ಉತ್ಸಾಹ ಮೂಡಲಿದೆ. ಶುಭಸಂಖ್ಯೆ: 3

ಸಿಂಹ: ಬಂಧುಗಳ ಕಾರಣದಿಂದ ಕೆಲಸಕಾರ್ಯಗಳಲ್ಲಿ

ಸ್ವಲ್ಪ ಅಡ್ಡಿಯಾಗುವ ಸಾಧ್ಯತೆಗಳಿವೆ.

ಜಾಣ್ಮೆಯಿಂದ ದೂರ ಕಳಿಸಿ. ಶುಭಸಂಖ್ಯೆ: 9

ಕನ್ಯಾ: ಕೃಷಿಕರು, ಯುವ ಉದ್ಯಮಿಗಳಿಗೆ

ಅನುಕೂಲಕರ ಬೆಳವಣಿಗೆಗಳು ಜರುಗಲಿವೆ.

ಅತಿಯಾದ ಆತ್ಮವಿಶ್ವಾಸ ಬಿಡಿ. ಶುಭಸಂಖ್ಯೆ: 2

ತುಲಾ: ವಿವಾದವೊಂದರಲ್ಲಿ ಸಿಲುಕಿ ಒದ್ದಾಡುವ

ಸಂದರ್ಭ ಬಂದೀತು. ಸಮಯಾವಧಾನದ

ವರ್ತನೆಯಿಂದ ನೆಮ್ಮದಿ. ಶುಭಸಂಖ್ಯೆ: 5

ವೃಶ್ಚಿಕ: ಅದೃಷ್ಟದ ನೆಪದಲ್ಲಿ ಧನವ್ಯಯ

ಮಾಡುತ್ತಿದ್ದೀರಿ. ಪರಿಶ್ರಮದಿಂದ ಲಾಭ

ಪಡೆಯಲು ಸತತ ಪ್ರಯತ್ನ ಮಾಡಿ. ಶುಭಸಂಖ್ಯೆ: 7

ಧನಸ್ಸು: ಅಲ್ಪಜ್ಞಾನಿಗಳ ಜತೆ ವಾದ ಮಾಡುವ

ಪ್ರಸಂಗ ಬರಬಹುದು. ಚಾತುರ್ಯದಿಂದಲೇ

ಆ ಸನ್ನಿವೇಶವನ್ನು ಎದುರಿಸಿ. ಶುಭಸಂಖ್ಯೆ: 4

ಮಕರ: ಗುರು ಶ್ರೀ ರಾಘವೇಂದ್ರರನ್ನು ಭಕ್ತಿಯಿಂದ

ಭಜಿಸಿ. ಆರಂಭಿಸಿದ ಕಾರ್ಯಗಳು

ಯಶಸ್ವಿಯಾಗಿ ಮುಗಿಯಲಿವೆ. ಶುಭಸಂಖ್ಯೆ: 6

ಕುಂಭ: ಸುಗಂಧದ್ರವ್ಯಗಳ ಮಾರಾಟಗಾರರು,

ಸಿದ್ಧ ಆಹಾರವಸ್ತುಗಳ ವ್ಯಾಪಾರಿಗಳು,

ಪತ್ರಿಕೋದ್ಯಮಿಗಳಿಗೆ ಲಾಭವಿದೆ. ಶುಭಸಂಖ್ಯೆ: 8

ಮೀನ: ವೃತ್ತಿಯಲ್ಲಿ ಪ್ರಶಂಸೆ ಗಳಿಸಲಿದ್ದೀರಿ.

ಉದ್ದೇಶಿತ ಕಾರ್ಯಗಳಲ್ಲಿ ತುಸು ಬದಲಾವಣೆ

ಮಾಡಿದರೆ ಯಶಸ್ವಿಯಾಗುವಿರಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net