ಈ ರಾಶಿಯ ಸಂತಾನ ಅಪೇಕ್ಷಿತರಿಗೆ ಇಂದು ಸಿಹಿಸುದ್ದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಮನಸ್ಸಿಗೆ ಅಸಮಾಧಾನ. ಶುಭಸಂಖ್ಯೆ: 9

ವೃಷಭ: ವಿದ್ಯಾರ್ಥಿಗಳಿಗೆ ವಿಶೇಷ ದಿನ. ಮಕ್ಕಳ ಭವಿಷ್ಯದ ಕುರಿತು ಯೋಜನೆ ರೂಪಿಸಿ. ಕುಟುಂಬದ ಉನ್ನತಿಗೆ ಯೋಚನೆ. ಶುಭಸಂಖ್ಯೆ: 9

ಮಿಥುನ: ತಾಯಿಯಿಂದ ಆರ್ಥಿಕ ಸಹಾಯ. ಭೂಮಿ, ವಾಹನದಿಂದ ಧನಾಗಮ. ವಿದ್ಯಾರ್ಥಿಗಳಿಗೆ ಅಡೆತಡೆ. ಪ್ರೀತಿಯ ವಿಷಯದಲ್ಲಿ ಸಮಸ್ಯೆ. ಶುಭಸಂಖ್ಯೆ: 9

ಕಟಕ: ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ. ಕಲಾವಿದರಿಗೆ ಅನುಕೂಲಕರ ವಾತಾವರಣ. ಲೋಹದ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ:1

ಸಿಂಹ: ನಿಮ್ಮ ಮರೆವಿನಿಂದ ಪ್ರಮುಖ ವಿಷಯದಲ್ಲಿ ಸೋಲು. ಸಾಲದ ಚಿಂತೆ, ಸಾಲದೆಂಬಂತೆ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ:8

ಕನ್ಯಾ: ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಮಾನಸನ್ಮಾನ ಸಾಧ್ಯತೆ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 7

ತುಲಾ: ಗಾಯಕರಿಗೆ ಅನುಕೂಲ. ಪ್ರತಿಭಾನ್ವಿತರಿಗೆ ಆಕಸ್ಮಿಕ ಅವಕಾಶ ಪ್ರಾಪ್ತಿ. ಸ್ಥಿರಾಸ್ತಿ ಸಮಸ್ಯೆ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಶುಭಸಂಖ್ಯೆ: 1

ವೃಶ್ಚಿಕ: ತಂದೆಯಿಂದ ಸೂಕ್ತ ಮಾರ್ಗದರ್ಶನ. ಮಿತ್ರರಿಂದ ಅನುಕೂಲವಾಗಲಿದೆ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಂಭವ. ಶುಭಸಂಖ್ಯೆ: 2

ಧನುಸ್ಸು: ಉದ್ಯೋಗ ಸ್ಥಳದಲ್ಲಿ ಕಲಹ. ಗೃಹ ನಿರ್ವಣಕ್ಕೆ ಹಣಕಾಸಿನ ನೆರವು ಪ್ರಾಪ್ತಿ. ಕುಟುಂಬ ನಿರ್ವಹಣೆಗೆ ಸಾಲ ಮಾಡಬೇಕಾದೀತು. ಶುಭಸಂಖ್ಯೆ: 6

ಮಕರ: ಮಿತ್ರರಿಂದ ಅನನುಕೂಲ. ರಾಜಕೀಯದಲ್ಲಿ ಇರುವವರಿಗೆ ಉನ್ನತ ಅಧಿಕಾರ ಪ್ರಾಪ್ತಿ ಸಾಧ್ಯತೆ. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ: 4

ಕುಂಭ: ವ್ಯಾಪಾರಸ್ಥರಿಗೆ ಹಿನ್ನಡೆ. ಸಾಲಗಾರರಿಂದ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದ ಕನಸಿನ ಸಾಕಾರ. ಧಾರ್ವಿುಕ ಮಂದಿರಕ್ಕೆ ಭೇಟಿ. ಶುಭಸಂಖ್ಯೆ: 7

ಮೀನ: ಮಗನಿಂದ ಅನುಕೂಲ. ವಿದ್ಯಾರ್ಥಿಗಳಿಗೆ ವಿಶೇಷ ಪ್ರಗತಿ. ಸಂತಾನ ಅಪೇಕ್ಷಿತರಿಗೆ ಸಿಹಿಸುದ್ದಿ. ಸಹೋದ್ಯೋಗಿಗಳಿಂದ ಸಹಕಾರ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net