ಈ ರಾಶಿಯವರಿಗೆ ಇಂದು ಆರ್ಥಿಕ ಸಮಸ್ಯೆಯಿಂದ ಮುಕ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೂರ ಪ್ರಯಾಣದ ಸಾಧ್ಯತೆ. ಅನಾರೋಗ್ಯ ಭೀತಿ. ತಾಯಿಯಿಂದ ಧನಾಗಮನ. ದಾನ ಧರ್ಮದ ಫಲ ಪಡೆಯುವಿರಿ. ಶುಭಸಂಖ್ಯೆ: 1

ವೃಷಭ: ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ. ಮನೆಯ ವಾತಾವರಣದಲ್ಲಿ ಕಿರಿಕಿರಿ. ಮಾನಸಿಕ ನೆಮ್ಮದಿ ಭಂಗವಾಗಬಹುದು. ಶುಭಸಂಖ್ಯೆ: 6

ಮಿಥುನ: ಪಾಲುದಾರಿಕೆಯಲ್ಲಿ ಲಾಭ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಬಂಧುಮಿತ್ರರ ಆಗಮನ. ಕುಟುಂಬದಲ್ಲಿ ಆತಂಕ ಕಾಡಬಹುದು. ಶುಭಸಂಖ್ಯೆ: 5

ಕಟಕ: ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಮಕ್ಕಳಿಂದ ಕುಟುಂಬದಲ್ಲಿ ಕಿರಿ-ಕಿರಿ. ಆರ್ಥಿಕ ನೆರವು ದೊರೆಯುವುದು. ಶುಭಸಂಖ್ಯೆ: 7

ಸಿಂಹ: ಅತಿ ಒಳ್ಳೆಯತನದಿಂದ ಸಂಕಷ್ಟ. ಮಾನಸಿಕ ಚಿಂತೆ. ಮಕ್ಕಳು ಉದ್ಯೋಗ ಕಳೆದುಕೊಳ್ಳುವ ಭೀತಿ. ಕುಟುಂಬದಲ್ಲಿ ಆತಂಕ. ಶುಭಸಂಖ್ಯೆ: 3

ಕನ್ಯಾ: ಮಿತ್ರರಿಂದ ನಷ್ಟ. ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ ಕಾದಿದೆ. ದಾಂಪತ್ಯದಲ್ಲಿ ಕಿರಿಕಿರಿ ಆದೀತು. ನಿದ್ರಾಭಂಗ ಸಾಧ್ಯತೆ. ಶುಭಸಂಖ್ಯೆ: 6

ತುಲಾ: ಸೇವಾ ವೃತ್ತಿಯ ಉದ್ಯೋಗ ಲಾಭ ದೊರೆತು ಸಂತಸ. ಆರ್ಥಿಕ ಸಮಸ್ಯೆಯಿಂದ ಮುಕ್ತಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:1

ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ ಸಾಧ್ಯತೆ. ಗುರು ನಿಂದನೆ ಮತ್ತು ದೈವನಿಂದನೆ ಉಚಿತವಲ್ಲ. ಅನಾರೋಗ್ಯದಿಂದ ಚಿಂತೆ. ಶುಭಸಂಖ್ಯೆ: 2

ಧನುಸ್ಸು: ಕುಲದೇವರ ದರ್ಶನ ಮಾಡುವಿರಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಅಧಿಕ ಖರ್ಚು. ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 8

ಮಕರ: ಬಂಧು ಬಾಂಧವರ ನಡುವೆ ವಿರಸಗಳು. ಪಾಲುದಾರಿಕೆ ವ್ಯವಹಾರದಲ್ಲಿ ಅನನುಕೂಲ. ಪ್ರಯಾಣದಿಂದ ಸಂಕಷ್ಟ. ಶುಭಸಂಖ್ಯೆ: 7

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಶುಭಕಾರ್ಯಗಳಿಗೆ ಕಾಲ ಕೂಡುವುದು. ಆರ್ಥಿಕ, ಕೌಟುಂಬಿಕ ದುಸ್ಥಿತಿ. ದೈವನಿಂದನೆ ಸಲ್ಲದು. ಶುಭಸಂಖ್ಯೆ: 4

ಮೀನ: ದೈಹಿಕ ಮತ್ತು ಮಾನಸಿಕ ತೊಂದರೆ. ಕೆಲಸ ಕಾರ್ಯಗಳಿಗೆ ಅಡೆತಡೆ ಉಂಟಾಗಬಹುದು. ಅನಾರೋಗ್ಯ ಸಮಸ್ಯೆ ಕಾಡಲಿವೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net