ಈ ರಾಶಿಯವರ ಸಮಸ್ಯೆಗೆ ಇಂದು ಸ್ನೇಹಿತರಿಂದ ಪರಿಹಾರ ದೊರೆತು ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಬಾಳ ಸಂಗಾತಿಯ ಸಲಹೆ ತೆಗೆದುಕೊಳ್ಳಿ. ಅನಿರೀಕ್ಷಿತ ಅತಿಥಿಗಳ ಆಗಮನ. ಸಂತೋಷ ಕೂಟದಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 9

ವೃಷಭ: ಹಿತಶತ್ರುಗಳ ಉಪಟಳ ಜಾಸ್ತಿಯಾಗಬಹುದು. ಸಹೋದರರಿಂದ ಸಹಾಯ. ದಿನಾಂತ್ಯ ದಲ್ಲಿ ಶುಭಸುದ್ದಿ ಸಿಗಲಿದೆ. ಶುಭಸಂಖ್ಯೆ: 6

ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನ ನಿರೀಕ್ಷೆಯಲ್ಲಿದ್ದವರಿಗೆ ಸಂತಸ. ಆರೋಗ್ಯದ ಬಗ್ಗೆ ನಿಗಾ ಇರಲಿ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 5

ಕಟಕ: ಮನೆಗೆ ಸಂಬಂಧಿಸಿ ಮಹತ್ವದ ನಿರ್ಧಾರಕ್ಕೆ ಚಾಲನೆ ದೊರೆಯಲಿದೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ ಹೆಗಲೇರಲಿದೆ. ಶುಭಸಂಖ್ಯೆ: 1

ಸಿಂಹ: ಅಕ್ಕ-ತಂಗಿಯರ ಬಾಂಧವ್ಯವನ್ನು ಹಟದಿಂದ ಹಾಳು ಮಾಡಿಕೊಳ್ಳಬೇಡಿ. ಅತಿಥಿಗಳನ್ನು ಸತ್ಕರಿಸಿ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 7

ಕನ್ಯಾ: ಕುಂಟುಂಬದಲ್ಲಿ ಸಂಭ್ರಮ ಸಡಗರ. ಹಣದ ಸಮಸ್ಯೆ ಉಂಟಾಗಬಹುದು. ದಿನಾಂತ್ಯದಲ್ಲಿ ಧನಾಗಮವಾಗಿ ಸಮಾಧಾನ. ಶುಭಸಂಖ್ಯೆ: 8

ತುಲಾ: ನಿಮ್ಮ ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ ದೊರೆತು ನೆಮ್ಮದಿ. ಕಲಾವಿದರಿಗೆ ವಿಶೇಷ ದಿನ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 3

ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ. ಅನಾರೋಗ್ಯ ಸಮಸ್ಯೆ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸಿ. ಶುಭಸಂಖ್ಯೆ: 6

ಧನುಸ್ಸು: ಆಡುವ ಮಾತಿನ ಬಗ್ಗೆ ಎಚ್ಚರ ವಹಿಸಿ. ಹಿತಶತ್ರುಗಳಿಂದ ಅಪಪ್ರಚಾರ. ಸಮಾಧಾನದಿಂದಿರಿ. ದಿನಾಂತ್ಯದಲ್ಲಿ ಶುಭ ವಾರ್ತೆ. ಶುಭಸಂಖ್ಯೆ: 9

ಮಕರ: ಹಣದ ಅಪವ್ಯಯ. ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಇರಬಹುದು. ಅಬ್ಯಾಗತರ ಆಗಮನ. ಮನೆಯಲ್ಲಿ ಸಂತಸದ ಕ್ಷಣ. ಶುಭಸಂಖ್ಯೆ: 1

ಕುಂಭ: ಕೋಪವನ್ನು ನಿಯಂತ್ರಿಸಿಕೊಳ್ಳಿ. ವ್ಯೆದ್ಯರ ಸಲಹೆ ಕಟ್ಟುನಿಟ್ಟಾಗಿ ಪಾಲಿಸಿ. ಮಕ್ಕಳಿಂದ ಖರ್ಚು ಹೆಚ್ಚಾಗಬಹುದು. ಶುಭಸಂಖ್ಯೆ: 2

ಮೀನ: ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ನೂರು ಸಲ ಯೋಚಿಸಿ. ಅನಿರೀಕ್ಷಿತ ಧನಾಗಮ. ಮಾನಸಿಕ ಸೌಖ್ಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net