

ಮೇಷ: ವೃತ್ತಿಯಲ್ಲಿ ಅಡೆತಡೆಗಳು ಎದುರಾಗಬಹುದು. ದುರ್ಗಾದೇವಿಯ ಸ್ತುತಿಯನ್ನು ಮಾಡುತ್ತಿರಿ. ಶುಭಾಶೀರ್ವಾದ ಲಭಿಸುತ್ತದೆ. ಶುಭಸಂಖ್ಯೆ: 4
ವೃಷಭ: ಯಾರೂ ಸದಾ ಕಾಲವೂ ಶತ್ರುಗಳಲ್ಲ. ಹೊಸ ಮಿತ್ರರು, ದೂರದ ನೆಂಟರು, ಸಹೋದ್ಯೋಗಿಗಳ ಬಗೆಗೆ ಹೆಚ್ಚಿನ ನಿಗಾ ಇರಲಿ. ಶುಭಸಂಖ್ಯೆ: 9
ಮಿಥುನ: ನಿಮ್ಮ ಆತ್ಮವಿಶ್ವಾಸದ ಬಗ್ಗೆ ಎರಡು ಮಾತಿಲ್ಲ. ಆದರೆ ಅತಿ ಆತ್ಮವಿಶ್ವಾಸದಿಂದ ಕೆಲಸವೊಂದು ಕೈ ತಪ್ಪಿ ಹೋಗಬಹುದು. ಜಾಗ್ರತೆ. ಶುಭಸಂಖ್ಯೆ: 3
ಕಟಕ: ಚತುರತೆಯಿಂದ ಕೂಡಿದ ನಿಮ್ಮದೇ ಆದ ವಿಶಿಷ್ಟ ಪ್ರತಿಭೆಗೆ ವಿಶೇಷವಾದ ಮನ್ನಣೆ ಸಿಗಲಿದೆ. ನೆಮ್ಮದಿಯಾಗಿರಿ. ಶುಭಸಂಖ್ಯೆ: 6
ಸಿಂಹ: ನೀರಸ ದಿನ ಎಂದು ಖಿನ್ನತೆ ಮೂಡಬಹುದು. ಮಹಾವಿಷ್ಣುವನ್ನು ಸಹಸ್ರನಾಮದ ಮೂಲಕ ಸ್ತುತಿಸಿ. ಸಿದ್ಧಿ ಲಭ್ಯವಾಗುತ್ತದೆ. ಶುಭಸಂಖ್ಯೆ: 7
ಕನ್ಯಾ: ಅಜಾಗ್ರತೆಯಿಂದ ಅತ್ಯಮೂಲ್ಯ ವಸ್ತುಗಳನ್ನು ಎಲ್ಲೋ ಇಡುವ ಸಾಧ್ಯತೆ ಇದೆ. ಅವುಗಳ ಪ್ರದರ್ಶನವನ್ನು ಮಾಡದಿರಿ. ಶುಭಸಂಖ್ಯೆ: 1
ತುಲಾ: ಮಾತಿನಲ್ಲಿ ನಿಯಂತ್ರಣ ತಪ್ಪದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಗ್ರಹದೋಷವು ತೊಂದರೆಗೆ ಸಿಲುಕಿಸುತ್ತದೆ. ಶುಭಸಂಖ್ಯೆ: 5
ವೃಶ್ಚಿಕ: ಯಾರನ್ನೂ ಕೂಡ ನಂಬಿಯೂ ನಂಬದಂತಿರಿ. ನಂಬದೆ ಅತಿಯಾದ ಬಿಗಿಯನ್ನೂ ತೋರದಿರಿ. ಸಮಚಿತ್ತದಿಂದ ಗೆಲುವಾಗಲಿದೆ. ಶುಭಸಂಖ್ಯೆ: 2
ಧನುಸ್ಸು: ಪ್ರತಿದಿನವೂ ಗೆಲುವು ನಿಶ್ಚಿತವೆಂದು ಭಾವಿಸಿದ್ದೀರಿ. ಆದರೆ ಅದು ಪೂರ್ತಿಯಾಗಿ ನಿಜವೇನೂ ಅಲ್ಲ. ಇಂದು ಸ್ವಲ್ಪ ಹುಷಾರಾಗಿರಿ. ಶುಭಸಂಖ್ಯೆ: 8
ಮಕರ: ಎಂದೋ ಮೂಲೆಗೆ ಇಟ್ಟಿದ್ದ ಹಳೆಯದಾದ ಕಡತವೊಂದರ ಅಗತ್ಯ ಕಂಡುಬರಬಹುದು. ಅದಕ್ಕಾಗಿ ಬೇಗ ಸಿದ್ಧರಾಗಿರಿ. ಶುಭಸಂಖ್ಯೆ: 4
ಕುಂಭ: ಪರಿಪೂರ್ಣ ಜನರು ಯಾರೂ ಸಿಗಲಾರರು. ನೀವು ಪರಿಪೂರ್ಣತೆಯ ಕಡೆಗೆ ಹೆಜ್ಜೆಯನ್ನು ಇಡಿ. ಲಾಭಕ್ಕೆ ದಾರಿ ಸಿಗಲಿದೆ. ಶುಭಸಂಖ್ಯೆ: 9
ಮೀನ: ಯಶಸ್ಸಿನ ನಿರೀಕ್ಷೆಯಲ್ಲಿದ್ದೀರಿ. ನಿಮ್ಮನ್ನು ಗೆಲ್ಲಿಸಲು ಬೇಕಾದಂತಹ ಸಂಪನ್ನ ಶಕ್ತಿಗಳು ಸಹಾಯಕ್ಕೆ ಬರಬಹುದಾದ ಸಾಧ್ಯತೆ ಇದೆ. ಶುಭಸಂಖ್ಯೆ: 3