ಇಂದು ಈ ರಾಶಿಯ ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅನವಶ್ಯಕ ಉದ್ವೇಗ ಬೇಡ . ಹಳೆಯ ಸ್ನೇಹಿತನ ಭೆೇಟಿ. ದಿನಾಂತ್ಯದಲ್ಲಿ ಆಶ್ಚರ್ಯಕರ ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದಿರಿ. ಶುಭಸಂಖ್ಯೆ: 9

ವೃಷಭ: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಅನಗತ್ಯ ವಿಷಯಗಳ ಬಗ್ಗೆ ತಲೆ ಹಾಕದಿರುವುದು ಕ್ಷೇಮ. ಶುಭಸಂಖ್ಯೆ: 1

ಮಿಥುನ: ಅನಿರೀಕ್ಷಿತ ಹೃದಯ ಸಂಬಂಧಿ ಸಮಸ್ಯೆ ಕಾಡಬಹುದು. ಆತ್ಮಾಭಿಮಾನಕ್ಕೆ ಧಕ್ಕೆ ಆಗಬಹುದು. ಸರ್ಕಾರಿ ಕೆಲಸಗಳಲ್ಲಿ ಜಯ. ಶುಭಸಂಖ್ಯೆ: 6

ಕಟಕ: ವ್ಯಾಪಾರದಲ್ಲಿ ನಿರಾಸೆ. ಧನವ್ಯಯ. ತಾಳ್ಮೆಯಿಂದ ವರ್ತಿಸಿ. ಕುಟುಂಬದಲ್ಲಿ ಮಹತ್ವದ ತೀರ್ವನಕ್ಕೆ ಹಿರಿಯರ ಸಲಹೆ. ಶುಭಸಂಖ್ಯೆ: 5

ಸಿಂಹ: ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ಮನಸ್ತಾಪ. ತಾಯಿಯ ಸಲಹೆ ಪಾಲಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ. ಶುಭಸಂಖ್ಯೆ: 8

ಕನ್ಯಾ: ನಿಮ್ಮ ಹಠಮಾರಿತನ ವಿಷಯವನ್ನು ಸಂಕೀರ್ಣಗೊಳಿಸುತ್ತದೆ. ಖಾಸಗಿ ಉದ್ಯೋಗಿಗಳಿಗೆ ವಿಶೇಷ ಬಡ್ತಿ ಸಾಧ್ಯತೆ ಇದೆ. ಶುಭಸಂಖ್ಯೆ: 1

ತುಲಾ: ನಿಮ್ಮ ಪ್ರತಿಭೆಗೆ ವಿಶೇಷ ಪುರಸ್ಕಾರ ಸಿಗುತ್ತದೆ. ಸಾಹಿತಿಗಳಿಗೆ, ಲೇಖಕರಿಗೆ ವಿಶೇಷ ದಿನ. ನಂಬಿಗಸ್ಥರೇ ವಂಚಿಸಿಯಾರು. ಶುಭಸಂಖ್ಯೆ: 6

ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಬಂಧುಗಳ ತಕರಾರು. ಮಾತುಕತೆಯಿಂದ ಸುಖಾಂತ್ಯ. ಕ್ರೀಡಾಪಟುಗಳಿಗೆ ಯಶಸ್ಸಿನ ದಿನ. ಶುಭಸಂಖ್ಯೆ: 5

ಧನುಸ್ಸು: ಆಸ್ತಿ ವಿಚಾರದಲ್ಲಿ ಗೊಂದಲ. ಬಂಧುವರ್ಗದಲ್ಲಿ ವಿಶೇಷ ಮಾನಸನ್ಮಾನ. ಮನೆಯಲ್ಲಿ ಶುಭಕಾರ್ಯಕ್ಕೆ ನಾಂದಿ. ಶುಭಸಂಖ್ಯೆ:4

ಮಕರ: ಕೆಲ ನಿರ್ಧಾರಗಳನ್ನು ಕುಟುಂಬದವರು ವಿರೋಧಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಅನಾರೋಗ್ಯ ಕಾಡೀತು. ಶುಭಸಂಖ್ಯೆ:1

ಕುಂಭ: ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿ.ಕೊಳ್ಳಿ. ಕೃಷಿಭೂಮಿ ಖರೀದಿಯ ಬಗ್ಗೆ ಅಂತಿಮ ತೀರ್ವನ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 3

ಮೀನ: ವ್ಯಾಪಾರಸ್ಥರಿಗೆ ನಷ್ಟ ಭೀತಿ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ. ಕಲಾವಿದರಿಗೆ ಶುಭ ಸುದ್ದಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net