ಈ ರಾಶಿಯ ಉದ್ಯೋಗಸ್ಥ ಮಹಿಳೆಯರಿಗೆ ಇಂದು ಶುಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಶುಭವಾರ್ತೆ. ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಸುಧಾರಣೆಯಾಗಲಿದೆ. ಶುಭಸಂಖ್ಯೆ: 5

ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ. ಬಂಧು ಗಳಿಂದ ಸಹಕಾರ ದೊರೆಯುವುದು. ದೈಹಿಕವಾಗಿ ಬಳಲುವಿಕೆಯ ಅನುಭವ. ಶುಭಸಂಖ್ಯೆ: 9

ಮಿಥುನ: ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ. ಉದ್ಯೋಗದಲ್ಲಿ ಪ್ರಗತಿ. ಅವಕಾಶಗಳ ಸದುಪಯೋಗ ಪಡೆದುಕೊಳ್ಳುವುದು ಜಾಣತನ. ಶುಭಸಂಖ್ಯೆ: 9

ಕಟಕ: ವಿವಾಹ ವಿಚಾರದಲ್ಲಿ ತೊಂದರೆ. ಲೋಹದ ವಸ್ತುಗಳ ವಿಚಾರದಲ್ಲಿ ಎಚ್ಚರ, ಲೇವಾದೇವಿ ವ್ಯವಹಾರದಿಂದ ದೂರವಿರಿ. ಶುಭಸಂಖ್ಯೆ: 2

ಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ. ಉದ್ಯೋಗದಲ್ಲಿ ಬದಲಾವಣೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಶುಭಸಂಖ್ಯೆ: 9

ಕನ್ಯಾ: ತೈಲ ಮಾರಾಟದಿಂದ ಲಾಭ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ಪ್ರಯಾಣ ಸಂದರ್ಭದಲ್ಲಿ ಜಾಗೃತರಾಗಿರಿ. ಶುಭಸಂಖ್ಯೆ: 2

ತುಲಾ: ಹಣಕಾಸಿನ ಮುಗ್ಗಟ್ಟು ತಲೆದೋರಲಿದೆ. ಪ್ರಯಾಣದಲ್ಲಿ ತೊಂದರೆ. ವ್ಯವಹಾರದಲ್ಲಿ ಎಚ್ಚರದಿಂದಿರಿ, ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 7

ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಿಸಲಿದೆ. ಶುಭಸಂಖ್ಯೆ: 6

ಧನುಸ್ಸು: ಸಂಯಮದ ಅವಶ್ಯಕತೆಯಿದೆ. ಸಾಕುಪ್ರಾಣಿಗಳಿಂದ ತೊಂದರೆಯಾದೀತು. ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 3

ಮಕರ: ವಿವಾಹ ವಿಚಾರದಲ್ಲಿ ಶುಭಸುದ್ದಿ ಬರಲಿದೆ. ವಿದ್ಯಾರ್ಥಿಗಳಿಗೆ ಪ್ರಗತಿ. ಆಹಾರ ಕ್ರಮದಲ್ಲಿ ಅಗತ್ಯ ಕಾಳಜಿ ವಹಿಸುವುದು ಉತ್ತಮ. ಶುಭಸಂಖ್ಯೆ:4

ಕುಂಭ: ರಾಜಕಾರಣಿಗಳಿಗೆ ಶುಭಸಮಯ ಒದಗಿ ಬರಲಿದೆ. ಔಷಧ ವ್ಯಾಪಾರಸ್ಥರಿಗೆ ಲಾಭ. ಕೃಷಿಕರಿಗೆ ಉತ್ತಮ ಫಲಗಳು ಕಾಣಲಿವೆ. ಶುಭಸಂಖ್ಯೆ: 7

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಹಾಲು-ಹಣ್ಣು ವ್ಯಾಪಾರಸ್ಥರಿಗೆ ಒಳ್ಳೆಯ ದಿನ. ಆದರೆ ಸಮಯ ಸಾಧಕರಿಂದ ಅಂತರವಿರಲಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net