ಈ ರಾಶಿಯವರಿಗೆ ಸಣ್ಣ ಪ್ರಮಾಣದ ಆರ್ಥಿಕ ಹಿಂಜರಿತ ಉಂಟಾಗಬಹುದು...

Nitya-Bhavishya-vvani-1-2-1
Published on

ಮೇಷ: ಧನಾತ್ಮಕ ಟೀಕೆಗಳನ್ನು ಕೇಳಿಸಿಕೊಳ್ಳಿ. ಇದರಿಂದ ನಿಮ್ಮ ಬದುಕಿನ ಶುಭಪ್ರದ ಅಧ್ಯಾಯಕ್ಕೆ ನಾಂದಿ ಸಿಗಲು ಸಾಧ್ಯ. ಶುಭಸಂಖ್ಯೆ: 9

ವೃಷಭ: ಹಿರಿಯರಿಂದ ಸಿಗಬೇಕಾದ ಆಸ್ತಿ, ಮಾರ್ಗದರ್ಶನ ಇತ್ಯಾದಿ ಲಭ್ಯವಾಗಲಿದೆ. ಮನಸ್ಸಿಗೆ ಖುಷಿಯ ದಿನವಿದು. ಶುಭಸಂಖ್ಯೆ: 2

ಮಿಥುನ: ತಂದೆ-ತಾಯಿಗಳ ಜತೆಗೆ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಮಾಡುವ ಯೋಜನೆಗೆ ಚಾಲನೆ ಸಿಗಲಿದೆ. ಶಿವಾಷ್ಟಕ ಓದಿ. ಶುಭಸಂಖ್ಯೆ: 8

ಕಟಕ:ಋಣಾತ್ಮಕ ಯೋಚನೆಗಳನ್ನು ನಿಲ್ಲಿಬಿಡಿ. ಬಾಳಸಂಗಾತಿಯ ಸಹಾಯದಿಂದ ಬಾಳಿನ ಸಾಫಲ್ಯಕ್ಕೆ ದಾರಿ ಸಿಗಲಿದೆ. ಶುಭಸಂಖ್ಯೆ: 4

ಸಿಂಹ: ನಿಂತುಬಿಟ್ಟಿದ್ದ ಕೆಲವು ಕೆಲಸಕಾರ್ಯಗಳಿಗೆ ಶೀಘ್ರವೇ ಚಾಲನೆ ಸಿಗಲಿದೆ. ಚಾಮುಂಡಾಂಬಿಕೆಯನ್ನು ಸ್ಮರಿಸಿ. ಕ್ಷೇಮ. ಶುಭಸಂಖ್ಯೆ: 6

ಕನ್ಯಾ: ಸಣ್ಣ ಆರ್ಥಿಕ ಹಿಂಜರಿತ ತೊಂದರೆಯನ್ನು ಉಂಟುಮಾಡೀತು. ಎಚ್ಚರದಿಂದಲೇ ಖರ್ಚು ವೆಚ್ಚ ಮಾಡಿ. ಶುಭಸಂಖ್ಯೆ: 5

ತುಲಾ: ಆರಂಭಿಸಿದ್ದ ಕೆಲವು ಕೆಲಸಕಾರ್ಯಗಳನ್ನೆಲ್ಲ ಮುಗಿಸುವ ಕ್ರಿಯಾಶೀಲ ದಿನ. ಲಾಭಕ್ಕೂ ದಾರಿ ಒದಗುವ ಸಾಧ್ಯತೆ. ಶುಭಸಂಖ್ಯೆ: 7

ವೃಶ್ಚಿಕ: ನಿಮ್ಮ ವ್ಯಾಪಾರದ ಸಂಬಂಧವಾದ ನಕಾರಾತ್ಮಕ ಬೆಳವಣಿಗೆಗಳನ್ನು ತಡೆಗಟ್ಟಲು ಮಿತ್ರರ ನೆರವು ಲಭಿಸುವುದು. ಶುಭಸಂಖ್ಯೆ: 3

ಧನಸ್ಸು:ಸಹೋದ್ಯೋಗಿಗಳು ನಿಮ್ಮ ವಿರುದ್ಧ ಸಿಡಿದೇಳಬಹುದು. ಎಲ್ಲರ ಜತೆಗೂ ತುಸು ಮೃದುವಾಗಿ ಮಾತನಾಡಿ. ಶುಭಸಂಖ್ಯೆ: 1

ಮಕರ: ಉನ್ನತ ಉದ್ಯೋಗಿಗಳಿಗೆ ಪದೋನ್ನತಿಯ ಭಾಗ್ಯವಿದೆ. ವರ್ಗಾವಣೆಯ ಬಿಸಿ ತಟ್ಟಿದರೂ ಜವಾಬ್ದಾರಿ ಬಿಡದಿರಿ. ಶುಭಸಂಖ್ಯೆ: 2

ಕುಂಭ: ನಿಮ್ಮ ವಿದ್ವತ್ತಿಗೆ ತಕ್ಕ ಮನ್ನಣೆ ದೊರಕಲಿದೆ. ದತ್ತಾತ್ರೇಯ ಸ್ವಾಮಿಯ ಕೃಪಾನುಗ್ರಹ ನಿಮ್ಮನ್ನು ಪೊರೆಯಲಿದೆ. ಶುಭಸಂಖ್ಯೆ: 9

ಮೀನ: ಕೆಲಸದ ಒತ್ತಡಗಳು ನಿದ್ದೆಯನ್ನು ತಡೆಯಬಹುದು. ನಿಮ್ಮ ಒತ್ತಡಗಳ ಬಗ್ಗೆ ಆಪ್ತರೊಂದಿಗೆ ಸಮಾಲೋಚಿಸಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net