

ಮೇಷ: ವ್ಯಾಪಾರದಲ್ಲಿ ಅಧಿಕ ಲಾಭ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ. ದಿನಾಂತ್ಯ ಶುಭ. ಶುಭಸಂಖ್ಯೆ: 7
ವೃಷಭ: ಪೂರ್ವತಯಾರಿ ಇಲ್ಲದೆ ಯೋಜನೆಗಳನ್ನು ಮಾಡಿದ್ದರಿಂದ ಕಾರ್ಯ ವಿಫಲ. ಅಸಹನೆಯಿಂದ ಕುಟುಂಬದಲ್ಲಿ ಮನಸ್ತಾಪ. ಶುಭಸಂಖ್ಯೆ: 9
ಮಿಥುನ: ಶೇಖರಿಸಿದ ಹಣ ಅಪವ್ಯಯ. ಸಹೋದರರ ಅಸಹಕಾರದಿಂದ ಆಸ್ತಿ ವಿಚಾರದಲ್ಲಿ ಗೊಂದಲ. ಕೃಷಿಕರಿಗೆ ವಿಶೇಷ ಧನಲಾಭ. ಶುಭಸಂಖ್ಯೆ: 1
ಕಟಕ: ಮಹಿಳೆಯರಿಗೆ ಆಭರಣ ಲಾಭ. ಸಮಾಜದಲ್ಲಿ ಗೌರವ. ಧನಾರ್ಜನೆ. ನಿಮ್ಮ ಚತುರತೆಯಿಂದ ಜಟಿಲ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ: 4
ಸಿಂಹ: ಗೃಹನಿರ್ವಣದಲ್ಲಿ ಮೋಸವಾದೀತು. ಹೊಸ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಸಮಾಧಾನ. ಅವಿವಾಹಿತರಿಗೆ ಸಿಹಿ. ಶುಭಸಂಖ್ಯೆ: 6
ಕನ್ಯಾ: ವೃತ್ತಿಯಲ್ಲಿ ಗೌರವಾದರ ಪ್ರಾಪ್ತಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ. ವಿದ್ಯಾರ್ಥಿಗಳ ಶ್ರಮಕ್ಕೆ ಫಲ. ದೂರಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 3
ತುಲಾ: ಕುಟುಂಬದಲ್ಲಿ ಉತ್ತಮ ಮಾನಸನ್ಮಾನ. ದೂರ ಪ್ರಯಾಣ ಸಂಭವ. ಆಸ್ತಿ ವಿಚಾರಗಳಲ್ಲಿ ಪ್ರಗತಿ. ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 9
ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ವೈಮನಸ್ಯ. ಮಗಳ ಮದುವೆ ವಿಚಾರದಲ್ಲಿ ಜಾಗ್ರತೆ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ:3
ಧನುಸ್ಸು: ಜವಾಬ್ದಾರಿಯಿಂದ ಕೂಡಿದ ಕಾರ್ಯವೈಖರಿಗೆ ಎಲ್ಲೆಡೆ ಮನ್ನಣೆ. ಹಳೆಯ ಮಿತ್ರರ ಸಮಾಗಮ. ಮಹಿಳೆಯರಿಗೆ ವಿಶೇಷ ದಿನ. ಶುಭಸಂಖ್ಯೆ: 6
ಮಕರ: ಆಸ್ತಿ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆ. ಸರ್ಕಾರಿ ಕೆಲಸದಲ್ಲಿ ಗಣ್ಯರ ಸಹಾಯ. ದೀರ್ಘ ಪ್ರಯಾಣ ಸಂಭವ. ಶುಭಸಂಖ್ಯೆ: 4
ಕುಂಭ: ಕೆಲಸದಲ್ಲಿ ಯಶಸ್ಸು. ಕೃಷಿಕರಿಗೆ ಧನ ವೃದ್ದಿ. ಮನೆಯಲ್ಲಿ ಸಂತಸದ ವಾತಾವರಣ. ದಿನಾಂತ್ಯದಲ್ಲಿ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 7
ಮೀನ: ಮನೆಯಲ್ಲಿ ಹೆಚ್ಚಿದ ಜವಾಬ್ದಾರಿ. ಹೃದಯ ಸಂಬಂಧಿ ಕಾಯಿಲೆ ಉಲ್ಬಣಗೊಳ್ಳಬಹುದು. ಮಾತಿನಲ್ಲಿ ತಾಳ್ಮೆ ಸಹನೆ ಇರಲಿ. ಶುಭಸಂಖ್ಯೆ: 5