ಈ ರಾಶಿಯವರ ಅಭೂತಪೂರ್ವ ಆತ್ಮವಿಶ್ವಾಸಕ್ಕೆ ದೈವೀಶಕ್ತಿಯ ಬೆಂಬಲವಿದೆ...

Nithya Bhavishya vvani
Published on

ಮೇಷ: ನಿಮ್ಮ ಅಭೂತಪೂರ್ವವಾದ ಆತ್ಮವಿಶ್ವಾಸಕ್ಕೆ ದೈವೀಶಕ್ತಿಯ ಬೆಂಬಲವಿದೆ. ಆದರೂ ಅತಿ ಎಂಬಂಥ ಆತ್ಮವಿಶ್ವಾಸ ಬೇಡ. ಶುಭಸಂಖ್ಯೆ: 7

ವೃಷಭ: ನಿಮ್ಮ ಮನದ ಸಂಕಲ್ಪ ಒಳಿತು ಮಾಡುವಂಥದ್ದು. ಕುಲದೇವರ ಕೃಪಾಶೀರ್ವಾದಿಂದ ಆ ಶುಭವಾದ ಸಂಕಲ್ಪ ಸಾಕಾರವಾಗಲಿದೆ. ಶುಭಸಂಖ್ಯೆ: 9

ಮಿಥುನ: ಒತ್ತಡಗಳಿಂದ ಬಹು ದೂರ ಹೋಗಬೇಕೆಂಬ ತುಡಿತವನ್ನು ನಿಯಂತ್ರಿಸಿ. ಇದ್ದು ಜಯಿಸಬೇಕು ಎಂಬ ಮಾತು ನೆನಪಿರಲಿ. ಶುಭಸಂಖ್ಯೆ: 4

ಕಟಕ: ಮೋಸ ಮಾಡುವ ಜನ ಹತ್ತಿರ ಬರಲಿದ್ದಾರೆ. ಚಿನ್ನಾಭರಣಗಳ ಬಗ್ಗೆ ಜಾಗ್ರತೆ ಇರಲಿ. ಲಲಿತಾ ಸಹಸ್ರನಾಮವನ್ನು ಓದಿ. ಶುಭಸಂಖ್ಯೆ: 2

ಸಿಂಹ: ಸಾಮಾಜಿಕ ಜೀವನದ ಸಂದರ್ಭದಲ್ಲಿ ಅನೇಕ ಕನಸುಗಳನ್ನು ಕಂಡಿದ್ದೀರಿ. ಅವು ನನಸಾಗಲು ತಾಳ್ಮೆ ಮುಖ್ಯ. ಶುಭಸಂಖ್ಯೆ: 5

ಕನ್ಯಾ: ಯೋಗ, ಧ್ಯಾನ ಮುಂತಾದವುಗಳ ಮೂಲಕ ಅಲೌಕಿಕ ಸಿದ್ಧಿಯತ್ತ ಸಾಗುವಿರಿ. ಸತ್ಸಂಕಲ್ಪಗಳು ಸಿದ್ಧಿಸಲಿವೆ. ಶುಭಸಂಖ್ಯೆ: 1

ತುಲಾ: ಬಂಡವಾಳ ಹೂಡದೆ ವಹಿವಾಟು ನಡೆಸುವ ಪ್ರಯತ್ನ ವಿಫಲವಾಗುತ್ತದೆ. ಸದ್ಯ ಹೊಸ ಬಂಡವಾಳ ಹೂಡದಿರಿ. ಶುಭಸಂಖ್ಯೆ: 3

ವೃಶ್ಚಿಕ: ಮಹಾಗಣಪತಿಯನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ. ಹಲವಾರು ಕೆಲಸಗಳು ಬಹಳ ಬೇಗನೆ ನೆರವೇರಲಿವೆ. ಶುಭಸಂಖ್ಯೆ: 8

ಧನುಸ್ಸು: ಧನಸಂಪಾದನೆಗೆ ಅನೇಕ ದಾರಿಗಳನ್ನು ಸೃಷ್ಟಿಸಿಕೊಂಡಿರಬಹುದು. ಆದರೆ ಹಿತಶತ್ರುಗಳ ಕಾಟದ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ: 6

ಮಕರ: ಹಿರಿಯರ ಮಾತುಗಳನ್ನು ಕೇಳುವ ಆಸ್ಥೆಯನ್ನು ತೋರಿದರೆ ನಿಮಗೇ ಲಾಭ. ನಿಮ್ಮ ಒಬ್ಬರ ಬಲವೇ ಎಲ್ಲಕ್ಕೂ ಸಾಕಾಗದು. ಶುಭಸಂಖ್ಯೆ: 7

ಕುಂಭ: ಅನೇಕ ದಿನಗಳಿಂದ ನಡೆದ ವಿದ್ಯಮಾನಗಳಿಂದ ನೊಂದುಕೊಂಡಿರುವ ನಿಮಗೆ ಹರ್ಷದಾಯಕ ಸಮಾಚಾರವೊಂದು ಸಿಗಲಿದೆ. ಶುಭಸಂಖ್ಯೆ: 4

ಮೀನ: ಕಂಗೆಡುವ ಸ್ವಭಾವವನ್ನು ಬಿಡಿ. ತಾಳಿದವನು ಬಾಳಿಯಾನು. ಹೀಗಾಗಿ ತಾಳ್ಮೆಯಿಂದ ಇದ್ದರೆ ಸಫಲತೆಯನ್ನು ಪಡೆಯುವಿರಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net