ಈ ರಾಶಿಯವರ ಬದುಕಿಗೆ ಇಂದು ಹೊಸ ಆಯಾಮ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪಕ್ಕದ ಮನೆಯವರ ಜೊತೆಗಿನ ಜಗಳ ಮನಸ್ಸನ್ನು ಕೆಡಿಸುತ್ತದೆ. ಸಹನೆ ಕಳೆದುಕೊಳ್ಳಬೇಡಿ. ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಶುಭಸಂಖ್ಯೆ:9

ವೃಷಭ: ವಿಶ್ರಾಂತಿ ಇಲ್ಲದ ದುಡಿಮೆ. ನಿವೇಶನ ಖರೀದಿ ನಿರ್ಧಾರ. ಅವಿವಾಹಿತರಿಗೆ ವಿವಾಹಯೋಗ. ಉನ್ನತ ವಿದ್ಯಾಭ್ಯಾಸಕ್ಕೆ ನಿರ್ಧಾರ. ಶುಭಸಂಖ್ಯೆ: 1

ಮಿಥುನ: ಸರ್ಕಾರಿ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಬೇರೆ ಯವರ ಅಭಿಪ್ರಾಯಕ್ಕೆ ಬೆಲೆ ಕೊಡಿ. ಅನಾರೋಗ್ಯ ಕಾಡೀತು, ಎಚ್ಚರದಿಂದಿರಿ. ಶುಭಸಂಖ್ಯೆ: 5

ಕಟಕ: ರಚನಾತ್ಮಕ ಕಾರ್ಯದಿಂದ ಕಚೇರಿಯಲ್ಲಿ ಪ್ರಶಂಸೆ. ಸಾರಿಗೆ ವ್ಯವಹಾರದಲ್ಲಿ ಅಧಿಕ ಲಾಭ. ಧಾರ್ವಿುಕ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 1

ಸಿಂಹ: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಅವಿವಾಹಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 4

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮೇಲೆ ಇದ್ದ ಸಂಶಯ ನಿವಾರಣೆ ಆಗಲಿದೆ. ಸಂಘ-ಸಂಸ್ಥೆಗಳಲ್ಲಿ ಅಧಿಕಾರ-ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ: 7

ತುಲಾ: ಒಪ್ಪಂದದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ. ಸಾರ್ವಜನಿಕ ಕೆಲಸಗಳಿಗಾಗಿ ಹಣ ಖರ್ಚು. ಕುಲದೇವರ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 2

ವೃಶ್ಚಿಕ: ಕೆಲಸ-ಕಾರ್ಯಗಳಲ್ಲಿ ನಿರೀಕ್ಷಿತ ಮುನ್ನಡೆ. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ಸಾಧ್ಯತೆ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 6

ಧನುಸ್ಸು: ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಗೆಳೆಯರೊಂದಿಗೆ ವಿಹಾರ ಕೈಗೊಳ್ಳುವಿರಿ. ಶುಭಸಂಖ್ಯೆ:3

ಮಕರ: ಮಕ್ಕಳ ಪ್ರಗತಿಯಿಂದ ಸಂತೋಷ. ಕೌಟುಂಬಿಕ ಸಮಸ್ಯೆಯನ್ನು ಆಪ್ತರಲ್ಲಿ ಹಂಚಿಕೊಳ್ಳಿ. ಮಂಗಳ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 4

ಕುಂಭ: ಅಸಾಧ್ಯ ಕೆಲಸ ಮಾಡುವ ಮೂಲಕ ಕಚೇರಿಯಲ್ಲಿ ಪ್ರಶಂಸೆ. ಬದುಕಿಗೆ ಹೊಸ ಆಯಾಮ ಸಿಗಲಿದೆ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 2

ಮೀನ: ಸಮಾಜದಲ್ಲಿ ಗೌರವಾದರಗಳು ಪ್ರಾಪ್ತಿ. ಆಸ್ತಿ ವಿಚಾರಕ್ಕೆ ನ್ಯಾಯಾಲಯಕ್ಕೆ ಹೋಗಲು ತೀರ್ವನ. ನೂತನ ವಾಹನ ಖರೀದಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net