

ಮೇಷ: ಭೂಮಿ ವಿಷಯವಾಗಿ ಕಲಹ ಉಂಟಾಗುವ ಸಾಧ್ಯತೆ. ಶರೀರಕ್ಕೆ ಗಾಯವಾಗಬಹುದು, ಎಚ್ಚರ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 6
ವೃಷಭ: ರಾಜಕಾರಣಿಗಳಿಗೆ ಒತ್ತಡ. ಸಾಧು-ಸಂತರ ದರ್ಶನ. ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 5
ಮಿಥುನ: ಕಲಾವಿದರಿಗೆ ಸನ್ಮಾನ. ಹೈನುಗಾರಿಕೆಯಲ್ಲಿ ಲಾಭ. ಕಾರ್ವಿುಕರಿಗೆ ಶುಭ. ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಸುದ್ದಿ. ಶುಭಸಂಖ್ಯೆ: 2
ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ ಇರಲಿ. ವೈದ್ಯರಿಗೆ ಉತ್ತಮ ದಿನ. ರಾಜಕಾರಣಿಗಳಿಗೆ ಇಂದು ಒಳ್ಳೆಯದಾಗಲಿದೆ. ಶುಭಸಂಖ್ಯೆ: 7
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಸರ್ಕಾರದಿಂದ ಧನಸಹಾಯ ಸಿಗಲಿದೆ. ಶುಭಸಂಖ್ಯೆ: 3
ಕನ್ಯಾ: ಬಂಧುಗಳಿಂದ ಕಿರಿಕಿರಿ ಉಂಟಾದೀತು. ಆಹಾರ ವಸ್ತುಗಳ ಪೂರೈಕೆದಾರರಿಗೆ ಲಾಭವಿದೆ. ಬೆನ್ನುನೋವಿನ ತೊಂದರೆ. ಶುಭಸಂಖ್ಯೆ: 9
ತುಲಾ: ವಿದ್ಯಾರ್ಥಿಗಳು ಶ್ರಮವಹಿಸಿ. ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಸ್ನೇಹಿತ ರಿಂದ ಸಹಾಯ ದೊರೆಯಲಿದೆ. ಶುಭಸಂಖ್ಯೆ:1
ವೃಶ್ಚಿಕ: ಅನವಶ್ಯಕ ವಾದ-ವಿವಾದವಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಆರೋಗ್ಯ ಉತ್ತಮವಾಗಿರುತ್ತದೆ. ಶುಭಸಂಖ್ಯೆ: 8
ಧನುಸ್ಸು: ಹೈನುಗಾರಿಕೆಯಲ್ಲಿ ತೊಡಗಿರುವ ರೈ ತರಿಗೆ ಲಾಭ. ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ. ಪ್ಲಾಸ್ಟಿಕ್ ಉದ್ದಿಮೆಯವರಿಗೆ ನಷ್ಟ. ಶುಭಸಂಖ್ಯೆ: 7
ಮಕರ: ಕಲಾವಿದರಿಗೆ ಕೀರ್ತಿ. ವಾಣಿಜ್ಯ ಅಧ್ಯಯನದಲ್ಲಿ ಆಶಾಕಿರಣ ಗೋಚರಿಸಲಿದೆ. ರಾಜಕಾರಣಿಗಳಿಗೆ ಈ ದಿನ ಅಷ್ಟು ಒಳ್ಳೆಯದಲ್ಲ. ಶುಭಸಂಖ್ಯೆ: 5
ಕುಂಭ: ದೀರ್ಘ ಪ್ರಯಾಣ ಸಾಧ್ಯತೆ. ವಿದೇಶ ವ್ಯವಹಾರಗಳಲ್ಲಿ ಪ್ರಗತಿಯಾಗಲಿದ್ದು, ಉತ್ತಮ ಧನಲಾಭವೂ ಆಗುವ ಸಾಧ್ಯತೆ ಇದೆ. ಶುಭಸಂಖ್ಯೆ: 2
ಮೀನ: ಅನಿರೀಕ್ಷಿತ ಧನಸಹಾಯ. ವಕೀಲರಿಗೆ ಲಾಭ. ಹೈನುಗಾರಿಕೆಯಲ್ಲಿ ಲಾಭ. ಇಷ್ಟ ದೇವರನ್ನು ಸ್ಮರಿಸಿ ಮುನ್ನಡೆದರೆ ಯಶಸ್ಸು. ಶುಭಸಂಖ್ಯೆ: 9