ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ವಿಶೇಷ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅನಿರೀಕ್ಷಿತ ಅತಿಥಿಯ ಆಗಮನ. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ಮೇಲಧಿಕಾರಿಯಿಂದ ಪ್ರಶಂಸೆ. ಶುಭಸಂಖ್ಯೆ: 7

ವೃಷಭ: ಜೀವನದ ಕನಸಿನ ಸಾಕಾರ. ಮಕ್ಕಳ ವಿಷಯದಲ್ಲಿ ಅಸಡ್ಡೆ ತಾಳುವುದು ಒಳ್ಳೆಯದಲ್ಲ. ಸಹೋದ್ಯೋಗಿಗಳಿಂದ ಪ್ರಶಂಸೆ. ಶುಭಸಂಖ್ಯೆ: 8

ಮಿಥುನ: ವೈದ್ಯರ ಸಲಹೆಯನ್ನು ತಿರಸ್ಕರಿಸಬೇಡಿ. ಬಹಳ ದಿನಗಳಿಂದ ಇದ್ದ ರೋಗ ಉಲ್ಬಣ. ಆತ್ಮೀಯರೊಂದಿಗೆ ವಿಹಾರ. ಶುಭಸಂಖ್ಯೆ:1

ಕಟಕ: ಪತ್ನಿಯೊಂದಿಗೆ ಮನಸ್ತಾಪ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ಕುಟುಂಬದೊಂದಿಗೆ ಕೂತು ಮಾತನಾಡುವುದು ಒಳ್ಳೆಯದು. ಶುಭಸಂಖ್ಯೆ: 5

ಸಿಂಹ: ಕೃಷಿ ಚಟುವಟಿಕೆಗೆ ಚಾಲನೆ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಆತ್ಮೀಯ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 3

ಕನ್ಯಾ: ತಪ್ಪು ನಿರ್ಧಾರಗಳಿಂದ ಸಮಸ್ಯೆ. ವ್ಯಾಪಾರ ವಹಿವಾಟುಗಳಲ್ಲಿ ಕೆಲಸಗಾರರ ಸಮಸ್ಯೆ. ಆತ್ಮೀಯರೊಂದಿಗೆ ಭೋಜನ. ಶುಭಸಂಖ್ಯೆ: 7

ತುಲಾ: ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ. ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ. ಕಲಾವಿದರಿಗೆ ವಿಶೇಷ ಸುದ್ದಿ. ಶುಭಸಂಖ್ಯೆ: 6

ವೃಶ್ಚಿಕ: ಅಪರೂಪದ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಕುಟುಂಬದೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳಿಗೆ ಸರಿಯಾದ ಸಲಹೆ ನೀಡಿ. ಶುಭಸಂಖ್ಯೆ:3

ಧನುಸ್ಸು: ಹಳೆಯ ವಿಚಾರಗಳನ್ನು ಕೆದಕಬೇಡಿ. ಸಕಾರಾತ್ಮಕ ಚಿಂತನೆಯಿಂದ ದೂರ ಇರಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಶುಭಸಂಖ್ಯೆ: 9

ಮಕರ: ಕುಟುಂಬದ ಸಮಸ್ಯೆಯನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಪರಿಹಾರ ಸಿಗುತ್ತದೆ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 5

ಕುಂಭ: ಸಂಗಾತಿಯೊಂದಿಗೆ ಮೃದುವಾಗಿ ವರ್ತಿಸಿ. ಬಹು ದಿನಗಳಿಂದ ನಿರೀಕ್ಷಿಸಿದ ಅವಕಾಶ ಪ್ರಾಪ್ತಿ. ಕಚೇರಿಯಲ್ಲಿ ಪ್ರಶಂಸೆ ದೊರೆಯಲಿದೆ. ಶುಭಸಂಖ್ಯೆ: 1

ಮೀನ: ವ್ಯಾಪಾರದಲ್ಲಿ ವಿಶೇಷ ಲಾಭ. ಕುಟುಂಬದೊಂದಿಗೆ ವಿಹಾರ. ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸುವುದು ಉತ್ತಮ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net