ಈ ರಾಶಿಯವರದ್ದಿಂದು ದೈವಿಕ ಚಿಂತನೆ, ಕೈಹಾಕಿದ ಕೆಲಸಗಳಲ್ಲಿ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಯತ್ನ ಕಾರ್ಯಾನುಕೂಲ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ದ್ವಿಚಕ್ರವಾಹನದಿಂದ ಅಪಘಾತ ಸಾಧ್ಯತೆ. ಶುಭಸಂಖ್ಯೆ: 3

ವೃಷಭ: ಪ್ರಿಯ ಜನರ ಭೇಟಿ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಚಂಚಲ ಮನಸ್ಸು, ವೃಥಾ ಅಲೆದಾಟ, ಅಕಾಲ ಭೋಜನ. ಶುಭಸಂಖ್ಯೆ: 8

ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ. ಆರೋಗ್ಯದಲ್ಲಿ ಏರುಪೇರು. ವಿವಾದಗಳಿಗೆ ಆಸ್ಪದ ಕೊಡಬೇಡಿ. ಆಲಸ್ಯ ಮನೋಭಾವ ಬೇಡ. ಶುಭಸಂಖ್ಯೆ: 5

ಕಟಕ: ಅಲ್ಪ ಕಾರ್ಯಸಿದ್ಧಿ. ಕ್ರಯವಿಕ್ರಯಗಳಲ್ಲಿ ಮೋಸವಾಗ ಬಹುದು. ಮಾತಾಪಿತೃಗಳಿಂದ ಹಿತವಚನ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:3

ಸಿಂಹ: ಕಾರ್ಯ ವಿಘಾತ. ಶತ್ರುಬಾಧೆೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ಮನಸ್ತಾಪ. ಮನಸ್ಸಿನಲ್ಲಿ ಭಯ ಭೀತಿ. ದೂರ ಪ್ರಯಾಣ. ಶುಭಸಂಖ್ಯೆ: 2

ಕನ್ಯಾ: ಪರಿಶ್ರಮಕ್ಕೆ ತಕ್ಕ ವರಮಾನ. ವಿವಾಹ ಯೋಗ. ವ್ಯವಹಾರದಲ್ಲಿ ದೃಷ್ಟಿ ದೋಷ, ದಂಡ ಕಟ್ಟುವಿರಿ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ: 2

ತುಲಾ: ಮಕ್ಕಳೊಡನೆ ನೆಮ್ಮದಿಯ ಜೀವನ. ಪಾಲುದಾರಿಕೆಯಲ್ಲಿ ಎಚ್ಚರವಿರಲಿ. ಹಿತಶತ್ರುಗಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 6

ವೃಶ್ಚಿಕ: ವಿನಾಕಾರಣ ಸ್ನೇಹಿತರ ವಲಯದಲ್ಲಿ ವಿರೋಧ ಕಟ್ಟಿಕೊಳ್ಳುವಿರಿ. ವಿನಾಕಾರಣ ದ್ವೇಷ. ಪರರ ಕೆಲಸಗಳಿಗಾಗಿ ಖರ್ಚು. ಶುಭಸಂಖ್ಯೆ: 7

ಧನುಸ್ಸು: ದೈವಿಕ ಚಿಂತನೆ. ಕೈಹಾಕಿದ ಕೆಲಸಗಳಲ್ಲಿ ಜಯ. ವಿದೇಶ ಪ್ರಯಾಣ ಸಾಧ್ಯತೆ. ಅನ್ಯ ಜನರಲ್ಲಿ ವೈಮನಸ್ಸು. ಉತ್ತಮ ಬುದ್ಧಿಶಕ್ತಿ. ಶುಭಸಂಖ್ಯೆ: 2

ಮಕರ: ಭ್ರಾತೃಗಳಿಂದ ತೊಂದರೆ. ಹಣಕಾಸಿನ ಅಡಚಣೆ. ಕಾರ್ಯ ವಿಳಂಬ. ಸ್ಥಿರಾಸ್ತಿ ಮಾರಾಟ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಶುಭಸಂಖ್ಯೆ: 9

ಕುಂಭ: ಕಾರ್ಯ ಬದಲಾವಣೆ. ವಿದ್ಯೆಯಲ್ಲಿ ಆಸಕ್ತಿ. ನೀಚ ಜನರ ಸಹವಾಸ ಮಾಡಲು ಹೋಗಬೇಡಿ. ದಾಂಪತ್ಯದಲ್ಲಿ ಕಲಹವಾಗಬಹುದು. ಶುಭಸಂಖ್ಯೆ: 5

ಮೀನ: ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ಅನಾಹುತ ಖಚಿತ. ಕೃಷಿಯಲ್ಲಿ ನಷ್ಟವಾದೀತು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net