ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ನಾಯಕನಾಗುವ ಅವಕಾಶ ಒದಗಿಬರಲಿದೆ..

Nitya-Bhavishya-vvani-1-2-1-1
Published on

ಮೇಷ: ಯಾರದೋ ನೆರವಿಗಾಗಿ ಕಾಯುವ ವಿಚಾರವನ್ನು ದೂರದಲ್ಲಿಯೇ ಬಿಟ್ಟುಬಿಡಿ. ನಿಮ್ಮ ಮೇಲೆ ನಿಮಗೆ ಭರವಸೆ, ವಿಶ್ವಾಸಗಳು ಇದ್ದಿರಲಿ. ಶುಭಸಂಖ್ಯೆ: 5

ವೃಷಭ: ಮೂಗಿನ ತುದಿಗೇ ಬಂದು ನಿಲ್ಲುವಂಥ ಸಿಟ್ಟನ್ನು ನಿಯಂತ್ರಿಸಿಕೊಳ್ಳಬೇಕು. ಗ್ರಹಗಳ ವಿಷಮ ಸಂಚಾರ ತೊಂದರೆ ತಂದೀತು. ಶುಭಸಂಖ್ಯೆ: 2

ಮಿಥುನ: ಖರ್ಚುವೆಚ್ಚ ಅಧಿಕವಾಗುತ್ತಿದೆ ಎಂಬ ಕಾರಣಕ್ಕಾಗಿ ಸಿಡಿಮಿಡಿ ಬೇಡ. ಹಣ ಸೋರಿಕೆಯಾಗದಂತೆ ಹತೋಟಿ ಮಾಡುವುದೇ ಸೂಕ್ತ. ಶುಭಸಂಖ್ಯೆ: 4

ಕಟಕ: ಸುತ್ತಮುತ್ತಲಿನ ಪರಿಸರದ ಸಂಕಷ್ಟಗಳನ್ನು ಜಾಣತನದಿಂದ ಅರ್ಥಮಾಡಿಕೊಳ್ಳುತ್ತೀರಿ. ಇದರಿಂದ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 6

ಸಿಂಹ: ನಿಮ್ಮ ಬಗ್ಗೆ ಹಿಂದಿನಿಂದ ವ್ಯಾಪಕವಾಗಿಯೇ ಟೀಕಿಸುವಂತಹ ಜನರಿದ್ದಾರೆ. ಆದರೆ ನೀವು ತಾಳ್ಮೆಯನ್ನು ಕಳೆದುಕೊಳ್ಳದಿರಿ. ಶುಭಸಂಖ್ಯೆ: 8

ಕನ್ಯಾ: ಥಟ್ಟನೆ ನಡೆಸುವ ವಹಿವಾಟಿನಲ್ಲಿ ಹೆಚ್ಚಿನ ಬದಲಾವಣೆಗಳಿಗೆ ಅವಕಾಶ ಕೊಡಬೇಡಿ. ಮುಂದೆ ಕಷ್ಟವೇ ಆದೀತು. ಶುಭಸಂಖ್ಯೆ: 3

ತುಲಾ: ನಿಮ್ಮ ಬಗ್ಗೆ ಮೇಲಧಿಕಾರಿಗಳಿಗೆ ಪದೇಪದೆ ದೂರುಗಳು ಕೇಳಿಬರಬಹುದು. ಕೇಳಿ ನಕ್ಕುಬಿಡಿ. ಪರಿಶುದ್ಧತೆಯನ್ನು ಉಳಿಸಿಕೊಳ್ಳಿ. ಶುಭಸಂಖ್ಯೆ: 7

ವೃಶ್ಚಿಕ: ಮನದಾಳದ ಮೌನದಿಂದ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ. ಶ್ರೀಹರಿಯ ಕೃಪೆಯಿಂದ ನಿಮ್ಮ ಪಾಲಿಗೆ ಶುಭವಾಗಲಿದೆ. ಶುಭಸಂಖ್ಯೆ: 1

ಧನಸ್ಸು: ಸತ್ಯನಿಷ್ಠೆಯನ್ನು ಪಾಲಿಸುವ ನಿಮಗೆ ಕಷ್ಟಗಳು ಎದುರಾದರೆ ಆಶ್ಚರ್ಯವೇನಿಲ್ಲ. ಆದರೂ ಅದನ್ನು ಬಿಡದೆ ಇದ್ದರೆ ಒಳಿತೇ ಆಗಲಿದೆ. ಶುಭಸಂಖ್ಯೆ: 9

ಮಕರ: ನಿಮ್ಮ ತಾಂತ್ರಿಕ ಪರಿಜ್ಞಾನವು ಲಾಭಕ್ಕೆ ಕಾರಣ ಎನಿಸುವ ಬೆಳವಣಿಗೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿ ಒದಗಿಬರಲಿದೆ. ಶುಭಸಂಖ್ಯೆ: 4

ಕುಂಭ:  ಸಜ್ಜನರಾಗಿರುವ ನಿಮ್ಮನ್ನು ಮೆಚ್ಚಿಕೊಳ್ಳದವರು ಯಾರೂ ಇಲ್ಲ. ಆದರೆ ಸಂಕೋಚ ಬಿಟ್ಟು ಜನರೊಡನೆ ಮಾತುಗಳನ್ನಾಡಿ. ಶುಭಸಂಖ್ಯೆ: 2

ಮೀನ : ಪ್ರಸನ್ನತೆಯಿರುವ ನಾಯಕನ ಹುಡುಕಾಟದಲ್ಲಿ ನಿಮ್ಮ ಸುತ್ತಮುತ್ತಲಿನ ಎಲ್ಲರ ಗಮನವೂ ನಿಮ್ಮತ್ತ ಬರುತ್ತದೆ. ಲಾಭವಿದೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net