ಈ ರಾಶಿಯವರಿಗೆ ಇಂದು ಸೂಕ್ತ ಸಲಹೆಯಿಂದ ಧನ ನಷ್ಟ ತಪ್ಪಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಗ್ರಾಮದಿಂದ ಬಂಧುಗಳ ಆಗಮನ. ಆಸ್ತಿ ವಿವಾದದಿಂದ ಅಸಮಾಧಾನ. ಅಮೂಲ್ಯ ವಸ್ತು ಕಳ್ಳತನವಾಗುವ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ಪೀಠೋಪಕರಣಗಳ ಖರೀದಿಯಲ್ಲಿ ಮೋಸ. ಹಿರಿಯರ ದರ್ಶನ. ಸಂಗಾತಿಯೊಂದಿಗೆ ವಿಹಾರ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ:1

ಮಿಥುನ: ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ವ್ಯವಸಾಯಗಾರರಿಗೆ ಅಧಿಕ ಲಾಭ. ಮಹಿಳಾ ಉದ್ಯೋಗಿಗಳಿಗೆ ವಿಶೇಷ ಮನ್ನಣೆ. ಶುಭಸಂಖ್ಯೆ: 3

ಕಟಕ: ಮನೆಯಲ್ಲಿ ಸಮಾರಂಭದ ಸಡಗರ. ಪ್ರೇಮಿಗಳಿಗೆ ನಿರಾಶಾದಾಯಕ ದಿನ. ಸಗಟು ವ್ಯಾಪಾರಿಗಳಿಗೆ ಕೆಲಸಗಾರರಿಂದ ಕಿರಿಕಿರಿ. ಶುಭಸಂಖ್ಯೆ: 2

ಸಿಂಹ: ಸಾಲಗಾರರಿಂದ ತೊಂದರೆ. ಹಿತಶತ್ರುಗಳ ವಿಚಾರದಲ್ಲಿ ಎಚ್ಚರವಿರಲಿ. ಉದರ ಸಂಬಂಧಿ ರೋಗಗಳು ಹೆಚ್ಚಲಿವೆ. ಶುಭಸಂಖ್ಯೆ: 8

ಕನ್ಯಾ: ಸಾಧು ಸಂತರ ದರ್ಶನ ಮಾಡುವ ಅವಕಾಶ. ಸೂಕ್ತ ಸಲಹೆಯಿಂದ ಧನ ನಷ್ಟ ತಪ್ಪಲಿದೆ. ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 6

ತುಲಾ: ಹೊಸ ವ್ಯಾಪಾರದ ಕಾರ್ಯರೂಪಕ್ಕೆ ಸಂತಸ. ಸಹೋದ್ಯೋಗಿಗಳಿಂದ ಸಹಕಾರ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ. ಶುಭಸಂಖ್ಯೆ: 4

ವೃಶ್ಚಿಕ: ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗುವ ದಿನ. ಸಾಹಿತಿಗಳು ಮತ್ತು ವೈದ್ಯರಿಗೆ ನಿರಾಸೆ. ಗೃಹಾರಂಭಕ್ಕೆ ಚಾಲನೆ. ಶುಭಸಂಖ್ಯೆ: 8

ಧನುಸ್ಸು: ನಂಬಿಕಸ್ಥನಿಂದಲೇ ಮೋಸವಾಗುವ ಸಾಧ್ಯತೆ. ಸಾಲ ಕೈತಪ್ಪುವ ಶಂಕೆ. ದುಷ್ಟ ಜನರ ಸಹವಾಸದಿಂದ ತೊಂದರೆ. ಅನಾರೋಗ್ಯ. ಶುಭಸಂಖ್ಯೆ: 9

ಮಕರ: ದೂರದೂರಿಗೆ ಪ್ರಯಾಣ ಸಾಧ್ಯತೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿ, ಸಂತಸ. ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ಶುಭಸಂಖ್ಯೆ: 1

ಕುಂಭ: ಹಣದ ಅಪವ್ಯಯ. ವಾಹನ ಚಾಲನೆಯಲ್ಲಿ ಎಚ್ಚರ. ಆತ್ಮೀಯರ ವಿಯೋಗ. ಸ್ವಗ್ರಾಮಕ್ಕೆ ಭೇಟಿ. ಸಾರ್ವಜನಿಕವಾಗಿ ಅವಮಾನ. ಶುಭಸಂಖ್ಯೆ: 1

ಮೀನ: ರಾಜಕೀಯದಲ್ಲಿ ಇರುವವರಿಗೆ ಪದವಿ ಲಭ್ಯ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಛೀಮಾರಿ. ಮಹಿಳೆಯರಿಗೆ ಕಿರಿಕಿರಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net