

ಮೇಷ: ಮಗಳಿಗೆ ಮದುವೆ ನಿಶ್ಚಯವಾಗಿ ಸಡಗರ. ಸಾಮಾಜಿಕ ಮನ್ನಣೆ ದೊರೆತು ಸಂತಸ. ಕಚೇರಿಯಲ್ಲಿ ವಿಶೇಷ ದಿನ. ಶುಭಸಂಖ್ಯೆ: 8
ವೃಷಭ: ಕಲಾವಿದರಿಗೆ ವಿನೂತನ ಅವಕಾಶ. ಉದ್ಯೋಗದಲ್ಲಿ ವಿಶೇಷ ಲಾಭ. ಬಂಧುಗಳ ಭೇಟಿ. ದಿನಾಂತ್ಯಕ್ಕೆ ಶುಭವಾರ್ತೆ. ಶುಭಸಂಖ್ಯೆ: 7
ಮಿಥುನ: ಆತ್ಮಾವಲೋಕನ ಮಾಡಿಕೊಂಡರೆ ಎದುರಾಗುವ ಪರಿಸ್ಥಿತಿ ನಿಭಾಯಿಸಬಹುದು. ಸೌಹಾರ್ದದಿಂದ ವರ್ತಿಸಿ. ತಾಳ್ಮೆ ಇರಲಿ. ಶುಭಸಂಖ್ಯೆ: 3
ಕಟಕ: ಕೃಷಿಕರಿಗೆ ವಿಶೇಷ ಲಾಭ. ಮೋಸ ಹೋಗುವ ಸಾಧ್ಯತೆಗಳಿವೆ. ಮನೆಗೆ ವಿಶೇಷ ಅತಿಥಿಯ ಆಗಮನವಾಗಲಿದೆ. ಶುಭಸಂಖ್ಯೆ: 7
ಸಿಂಹ: ಆರೋಗ್ಯ ಸಮಸ್ಯೆ ಸ್ವಲ್ಪಮಟ್ಟಿಗೆ ಶಮನ. ಆಹಾರದ ವಿಷಯದಲ್ಲಿ ನಿಗಾ ಇರಲಿ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 1
ಕನ್ಯಾ: ಯೋಚನೆ ಸಾಕಾರಗೊಳ್ಳಲು ಇಷ್ಟ ದೇವರನ್ನು ಪ್ರಾರ್ಥಿಸಿ. ಗಾಯಕರಿಗೆ ವಿಶೇಷ ಅವಕಾಶ. ಸ್ನೇಹಿತರಿಂದ ಅವಮಾನ.ಶುಭಸಂಖ್ಯೆ: 6
ತುಲಾ: ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ದ್ವಂದ್ವ ಎದುರಾಗಬಹುದು. ಕುಟುಂಬದ ಸಲಹೆ ಪಡೆಯಿರಿ. ದಿನಾಂತ್ಯಕ್ಕೆ ಸಂತಸ. ಶುಭಸಂಖ್ಯೆ: 4
ವೃಶ್ಚಿಕ: ಬಾಳಸಂಗಾತಿಯೊಂದಿಗೆ ವ್ಯವಧಾನದಿಂದ ನಡೆದುಕೊಳ್ಳಿ. ವಾಹನ ಖರೀದಿಗೆ ನಿರ್ಧಾರ. ಮಕ್ಕಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 5
ಧನಸ್ಸು: ಭೂವಿವಾದಕ್ಕೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ. ಮಾತಿನಿಂದ ಶತ್ರುಗಳು ಸೃಷ್ಟಿ. ಕುಟುಂಬದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 4
ಮಕರ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ. ವೃತ್ತಿಯಲ್ಲಿ ಬಡ್ತಿ ಸಿಗಬಹುದು. ತಾಯಿಯ ಆಶೀರ್ವಾದ ಪಡೆದುಕೊಳ್ಳಿ. ಶುಭಸಂಖ್ಯೆ: 7
ಕುಂಭ: ವಿವಾಹ ಅಪೇಕ್ಷಿಗಳಿಗೆ ವಿವಾಹ ನಿಶ್ಚಯ ಸಾಧ್ಯತೆ. ತಂದೆ ತಾಯಿಯ ಮಾತನ್ನು ಧಿಕ್ಕರಿಸಿ ಬೇಡಿ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 8
ಮೀನ : ವಂಚಕರು ಮೋಸ ಮಾಡುವ ಸಾಧ್ಯತೆಯಿದೆ, ಜೋಕೆ. ಯಾವುದೇ ವಿಷಯದಲ್ಲಿ ದುಡುಕಬೇಡಿ. ಆಕಸ್ಮಿಕ ಧನಲಾಭವಾದೀತು. ಶುಭಸಂಖ್ಯೆ: 9