ಈ ರಾಶಿಯವರಿಗಿಂದು ಅನಿರೀಕ್ಷಿತ ಧನಸಹಾಯ, ನ್ಯಾಯದ ಕೆಲಸಗಳಲ್ಲಿ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಭೂಮಿ ವಿಷಯವಾಗಿ ಕಲಹ ಉಂಟಾಗಲಿದೆ. ಶರೀರಕ್ಕೆ ಗಾಯವಾದೀತು. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ. ಶುಭಸಂಖ್ಯೆ: 9

ವೃಷಭ: ರಾಜಕಾರಣಿಗಳಿಗೆ ಪ್ರತಿಷ್ಠೆ. ಸಾಧು-ಸಂತರ ದರ್ಶನ ಮಾಡುವಿರಿ. ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ. ಏಕಾಗ್ರತೆ ಸಾಧಿಸಿ. ಶುಭಸಂಖ್ಯೆ: 2

ಮಿಥುನ: ವಕೀಲರಿಗೆ ಶುಭದಾಯಕವಾದ ದಿನ. ಹೈನುಗಾರಿಕೆಯಲ್ಲಿ ಲಾಭವಾಗುವುದು. ಕಾರ್ವಿುಕರಿಗೆ ಪರ್ಯಾಯ ಕೆಲಸದ ಸಾಧ್ಯತೆ. ಶುಭಸಂಖ್ಯೆ: 5

ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ. ವೈದ್ಯರಿಗೆ ಉತ್ತಮ ಆದಾಯ ಬರಲಿದೆ. ರಾಜಕಾರಣಿಗಳಿಗೆ ಅಶುಭ. ದೇವರ ಮೊರೆ ಹೋಗಿ. ಶುಭಸಂಖ್ಯೆ: 8

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಸರ್ಕಾರದಿಂದ ಧನಸಹಾಯ. ಶುಭಸಂಖ್ಯೆ:3

ಕನ್ಯಾ: ಬಂಧುಗಳಿಂದ ಕಿರಿಕಿರಿ ಅನುಭವಿಸುವಿರಿ. ಆಹಾರ ವಸ್ತುಗಳ ಪೂರೈಕೆದಾರರಿಗೆ ಹೆಚ್ಚು ಆದಾಯ. ಬೆನ್ನುನೋವಿನ ತೊಂದರೆ. ಶುಭಸಂಖ್ಯೆ: 2

ತುಲಾ: ವಿದ್ಯಾರ್ಥಿಗಳು ಶ್ರಮವಹಿಸಿ. ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 1

ವೃಶ್ಚಿಕ: ಅನವಶ್ಯಕ ವಾದ-ವಿವಾದ ಉಂಟಾಗುವುದು. ಸಮಾಧಾನ ಮುಖ್ಯ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಆರೋಗ್ಯ ಉತ್ತಮ. ಶುಭಸಂಖ್ಯೆ: 2

ಧನುಸ್ಸು: ಹೈನುಗಾರಿಕೆಯಲ್ಲಿ ಸರಾಸರಿ ಆದಾಯ. ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯವಾಗಲಿವೆ. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ. ಶುಭಸಂಖ್ಯೆ: 6

ಮಕರ: ಕೀರ್ತಿ ಮತ್ತು ಧನ ಲಾಭ. ವಾಣಿಜ್ಯ ಅಧ್ಯಯನದಲ್ಲಿ ಒಳ್ಳೆಯ ಕಾಲ. ರಾಜಕಾರಣಿಗಳಿಗೆ ಅಶುಭವಿದೆ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 9

ಕುಂಭ: ದೀರ್ಘ ಪ್ರಯಾಣ ಮಾಡಬೇಕಾಗುವುದು. ದೂರದ ವ್ಯವಹಾರಗಳಲ್ಲಿ ಪ್ರಗತಿಯಾಗಲಿದೆ. ಉತ್ತಮ ಧನಲಾಭವಾಗುವ ಸಂಭವ. ಶುಭಸಂಖ್ಯೆ: 2

ಮೀನ: ಅನಿರೀಕ್ಷಿತ ಧನಸಹಾಯ. ನ್ಯಾಯದ ಕೆಲಸಗಳಲ್ಲಿ ಜಯ ನಿಮ್ಮ ಕಡೆಗಿದೆ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net