

ಮೇಷ: ಮಾತುಕತೆಯ ಸಂದರ್ಭದಲ್ಲಿ ಜಾಗ್ರತೆಯಿಂದ ವರ್ತಿಸಿ. ನಿಮ್ಮ ಹಿತವಚನಗಳಿಗೆ ಹೆಚ್ಚಿನದಾದ ಗೌರವವೇ ದೊರೆಯಲಿದೆ. ಶುಭಸಂಖ್ಯೆ: 6
ವೃಷಭ: ಯಾರಿಗೆ ಯಾರೂ ಅನಿವಾರ್ಯವೇನಲ್ಲ ಎಂಬುದು ತಿಳಿಯಲಿದೆ. ನಿಮ್ಮ ಸಾಮರ್ಥ್ಯದ ಮೇಲಿನ ನಂಬಿಕೆ ಬಿಡದಿರಿ. ಶುಭಸಂಖ್ಯೆ: 2
ಮಿಥುನ: ವಿಭಿನ್ನ ರೀತಿಯದಾದ ತೊಡಕುಗಳನ್ನು ಎದುರಿಸುತ್ತೀರಿ. ಆದರೆ ಸಮೃದ್ಧ ಅನುಭವವೇ ನಿಮ್ಮನ್ನು ರಕ್ಷಣೆ ಮಾಡಲಿದೆ. ಶುಭಸಂಖ್ಯೆ: 9
ಕಟಕ: ನಿಮ್ಮ ಉನ್ನತ ಚಿಂತನೆಯೊಂದು ವಿಶೇಷವಾದ ಪ್ರಶಂಸೆಯನ್ನು ಗಳಿಸಿಕೊಡಲಿದೆ. ಆದರೆ ವ್ಯರ್ಥ ಅಹಂಕಾರವನ್ನು ಬಿಟ್ಟುಬಿಡಿ. ಶುಭಸಂಖ್ಯೆ: 5
ಸಿಂಹ: ಯೋಗ್ಯತೆ ಇಲ್ಲದಂತಹ ಜನ ಹಿಂಬಾಲಿಸುತ್ತಾರೆ. ಮಾತಾಡದೆ ಮೌನವಾಗಿ ಇರುವುದರಿಂದಲೇ ಎಲ್ಲವೂ ಬೇಗ ಬಗೆಹರಿಯಲಿವೆ. ಶುಭಸಂಖ್ಯೆ: 8
ಕನ್ಯಾ: ನಿಮ್ಮ ಸಂಕಷ್ಟದ ವೇಳೆ ಮಕ್ಕಳು ಆರೈಕೆಗೆ ಮುಂದಾಗಲಿದ್ದಾರೆ. ಈ ವಿಚಾರ ಹೆಚ್ಚಿನ ಶಕ್ತಿಯನ್ನು ತಂದುಕೊಡಲಿದೆ. ಶುಭಸಂಖ್ಯೆ: 4
ತುಲಾ: ಹಳೆಯ ಮನೆಯ ನವೀಕರಣದ ವಿಚಾರದಲ್ಲಿ ಸಹೋದರರ ಬೆಂಬಲ ಲಭಿಸುತ್ತದೆ. ಆದರೆ ಸಾಲದ ಶೂಲಕ್ಕೆ ಸಿಲುಕದಿರಿ. ಶುಭಸಂಖ್ಯೆ: 7
ವೃಶ್ಚಿಕ: ಕಚೇರಿಯಲ್ಲಿ ವೃಥಾ ಜಗಳಕ್ಕೆ ಬರುವವರ ಬಗೆಗೆ ಜಾಗರೂಕರಾಗಿರಿ. ಇಲ್ಲವಾದರೆ ಅವಮಾನ ಉಂಟಾದೀತು. ಶುಭಸಂಖ್ಯೆ: 3
ಧನುಸ್ಸು: ನಿಮ್ಮಷ್ಟು ಯೋಗ್ಯತೆ ಇಲ್ಲದವರು ನಿಮಗೆ ಉಪದೇಶ ಮಾಡಲೆಂದು ಬರುತ್ತಾರೆ. ಸುಮ್ಮನೆ ನಕ್ಕು ಹಗುರಾಗಿಬಿಡಿ. ಶುಭಸಂಖ್ಯೆ: 1
ಮಕರ: ನೀವು ಗಳಿಸಿಟ್ಟ ಹಣವನ್ನು ಜಾಣ್ಮೆಯಿಂದ ಕಿತ್ತುಕೊಳ್ಳುವ ಜನರ ಬಗ್ಗೆ ಹುಷಾರಾಗಿರಿ. ಸಹನೆಯನ್ನೂ ಬಿಡಿದಿರಿ. ಶುಭಸಂಖ್ಯೆ: 6
ಕುಂಭ: ಮನೆಯ ಪ್ರತಿಯೊಬ್ಬರ ಬಳಿಯೂ ಮುಕ್ತವಾಗಿ ಮಾತನಾಡಿ. ನಿಮ್ಮ ಬೇಕಾಗಿರುವ ಬೆಂಬಲವು ಸಹಜವಾಗಿಯೇ ಒದಗಿಬರಲಿದೆ. ಶುಭಸಂಖ್ಯೆ: 2
ಮೀನ: ಆರ್ಥಿಕ ವಿಚಾರದ ಬಗೆಗೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಒಳಿತಿಗೆ ಸಂಬಂಧಿಸಿದ ಮುಖ್ಯ ತಿರುವು ಲಭ್ಯವಾಗಲಿದೆ. ಶುಭಸಂಖ್ಯೆ: 9