ಈ ರಾಶಿಯವರಿಗೆ ಇಂದು ನಿರಾಸೆಯ ಮಧ್ಯೆ ಶುಭಸುದ್ದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಬಟ್ಟೆ ಹಾಗೂ ಲೋಹ ವ್ಯಾಪಾರ ಮಾಡುವವರಿಗೆ ವಿಶೇಷ ಆದಾಯ. ಅಧಿಕಾರಿಗಳ ಸಲಹೆಯಿಂದಾಗಿ ನಷ್ಟ ಸಾಧ್ಯತೆ. ಶುಭಸಂಖ್ಯೆ: 1

ವೃಷಭ: ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ಸಾಧ್ಯತೆ. ಶುಭಸಂಖ್ಯೆ: 7

ಮಿಥುನ: ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ನೆರೆಹೊರೆಯವರೊಂದಿಗೆ ವಿರಸ ಸಾಧ್ಯತೆ. ಸಂಗಾತಿಗೆ ಭಾಗ್ಯೋದಯ ಸಂಭವ. ಶುಭಸಂಖ್ಯೆ: 4

ಕಟಕ: ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ. ಶುಭಸಂಖ್ಯೆ: 5

ಸಿಂಹ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ವ್ಯವಹಾರದ ವೃದ್ಧಿಯಿಂದಾಗಿ ಅಧಿಕ ಧನಲಾಭ. ಶುಭಸಂಖ್ಯೆ: 3

ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪ ಎದುರಿಸಬೇಕಾದೀತು. ಶುಭಸಂಖ್ಯೆ: 9

ತುಲಾ: ಆಮದು- ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿರು ವವರಿಗೆ ಲಾಭ. ಪಾಲುಗಾರಿಕೆಯಲ್ಲಿ ಇರಿಸುಮುರಿಸು ತರುವ ಸಾಧ್ಯತೆ. ಶುಭಸಂಖ್ಯೆ: 7

ವೃಶ್ಚಿಕ: ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿಯೊಂದನ್ನು ಕೇಳಲಿದ್ದೀರಿ.ಕಾರ್ಯಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ ಸಾಧ್ಯತೆ. ಶುಭಸಂಖ್ಯೆ: 5

ಧನುಸ್ಸು: ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಗಳ ವಿವಾಹ ವಿಷಯದಲ್ಲಿ ನೆಂಟರಿಂದ ಪ್ರಸ್ತಾಪಗಳು ಬರಲಿವೆ. ಶುಭಸಂಖ್ಯೆ: 6

ಮಕರ: ಅಡೆತಡೆಗಳ ನಡುವೆಯೂ ಶುಭಕಾರ್ಯ ಯಶಸ್ವಿ. ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಔಷಧ ತಯಾರಕರಿಗೆ ಲಾಭ. ಶುಭಸಂಖ್ಯೆ: 6

ಕುಂಭ: ಸಂಗಾತಿಗೆ ನೆರೆಹೊರೆಯವರಿಂದ ಸ್ವಲ್ಪಮಟ್ಟಿನ ಪ್ರತಿರೋಧ. ನವೀನ ವ್ಯವಹಾರವೊಂದರಲ್ಲಿ ಹಣ ವಿನಿಯೋಗ ಮಾಡಲಿದ್ದೀರಿ. ಶುಭಸಂಖ್ಯೆ: 1

ಮೀನ: ಅಧಿಕಾರಿಗಳ ಅಸಹಕಾರದಿಂದಾಗಿ ಸರ್ಕಾರದಿಂದ ಆಗಬೇಕಾದ ಕೆಲಸಗಳು ವಿಳಂಬ. ನಿರಾಸೆಯ ಮಧ್ಯೆ ಶುಭಸುದ್ದಿ ಸಿಗಲಿದೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net