

ಮೇಷ: ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಹಾಗಿದ್ದರೆ ಅನುಕೂಲಕರವಾಗಿರುತ್ತದೆ. ಆ ಬಗ್ಗೆ ಚಿಂತಿಸಿದರೆ ಉಪಯುಕ್ತ. ಶುಭಸಂಖ್ಯೆ: 7
ವೃಷಭ: ಹಳೆಯ ಸಾಲಬಾಧೆಗಳಿಂದ ಮುಕ್ತರಾಗಲಿದ್ದೀರಿ. ಹೊಸ ಯೋಜನೆಗೆಂದು ಈಗಲೇ ದೊಡ್ಡ ಮೊತ್ತದ ಹಣ ತೊಡಗಿಸದಿರಿ. ಶುಭಸಂಖ್ಯೆ: 8
ಮಿಥುನ: ವೃತ್ತಿಯಲ್ಲಿ ಸ್ವಲ್ಪಮಟ್ಟಿನ ನಿರಾಸೆ ಉಂಟಾಗದೆ ಇರದು. ಆದರೂ ಕೂಡ ನೀವು ಕೈಗೊಂಡಿರುವ ಪ್ರಯತ್ನವನ್ನು ಬಿಡದಿರಿ. ಶುಭಸಂಖ್ಯೆ: 9
ಕಟಕ: ವಿವಾದಗಳಿಂದ ವಿಮುಕ್ತಿಯನ್ನು ಹೊಂದಿ ಹೊರಬರುವ ಸಂಭ್ರಮವನ್ನು ಕೆಲವರು ಇಂದು ನಿರೀಕ್ಷಿಸಬಹುದಾಗಿದೆ. ಶುಭಸಂಖ್ಯೆ: 3
ಸಿಂಹ: ಉತ್ತಮವಾದ ಕೆಲವೇ ಕೆಲವು ಪ್ರಯತ್ನಗಳ ಮೂಲಕ ಈ ದಿನದ ಕೊನೆಗೆ ಶುಭವಾದ ಪರಿಣಾಮ ಲಭ್ಯವಾಗಲಿದೆ. ಶುಭಸಂಖ್ಯೆ: 2
ಕನ್ಯಾ: ಬಾಳಸಂಗಾತಿಗೆ ಬಹು ಅನಿರೀಕ್ಷಿತವಾಗಿ ಉಡುಗೊರೆ ನೀಡುವುದರಿಂದ ಕೆಲವು ಬಿಕ್ಕಟ್ಟುಗಳು ದೂರವಾಗಲಿವೆ. ಶುಭಸಂಖ್ಯೆ: 1
ತುಲಾ: ಕೈಗೊಂಡ ಯೋಜನೆ ಯಶಸ್ವಿಯಾಗುತ್ತದೆ ಎಂದು ಖಚಿತವಾದ ನಂತರವೇ ಇತರರಿಗೆ ಆ ಬಗ್ಗೆ ತಿಳಿಸುವ ಧೈರ್ಯ ಮಾಡಿ. ಶುಭಸಂಖ್ಯೆ: 6
ವೃಶ್ಚಿಕ: ಸುತ್ತಮುತ್ತಲಿನ ಜನರನ್ನು ಹತ್ತಿರ ಸೇರಿಸಬಹುದು. ಆದರೆ ನಿಮ್ಮ ಸಜ್ಜನಿಕೆ ದುರುಪಯೋಗವಾಗದ ಹಾಗೆ ಎಚ್ಚರ ವಹಿಸಲೇಬೇಕು. ಶುಭಸಂಖ್ಯೆ: 5
ಧನಸ್ಸು: ಕನಸಿನ ಗೋಪುರವನ್ನು ಕಟ್ಟುವಂತಹ ವ್ಯರ್ಥ ಸಾಹಸವನ್ನು ನಿಲ್ಲಿಸಿಬಿಡಿ. ಪ್ರಬಲವಾದ ಸತತ ಯತ್ನಗಳಿಂದ ಗೆಲುವಿದೆ. ಶುಭಸಂಖ್ಯೆ: 4
ಮಕರ: ಒಳ್ಳೆಯ ಗೆಳೆಯರು ಸಿಕ್ಕಿದರೂ ಪ್ರಯೋಜನ ಇಲ್ಲದ ಮಾತುಕತೆಗಳಲ್ಲಿ ಕಾಲಹರಣ ಮಾಡದಿರಿ. ಅವರ ಸಲಹೆಯನ್ನೂ ಸ್ವೀಕರಿಸಿ. ಶುಭಸಂಖ್ಯೆ: 8
ಕುಂಭ: ಎಲ್ಲ ನಿರ್ಧಾರ ಮುಗಿದ ನಂತರವೂ ಪ್ರವಾಸದ ವೇಳಾಪಟ್ಟಿ ಬದಲಾಗಬಹುದು. ಸ್ವಲ್ಪ ಮಟ್ಟಿನ ತಾಳ್ಮೆ ವಹಿಸಿದರೆ ಉತ್ತಮ. ಶುಭಸಂಖ್ಯೆ: 2
ಮೀನ: ಮೇಲಧಿಕಾರಿಗಳ ಗಮನಕ್ಕೆ ಬರುವ ಮುನ್ನವೇ ವಿಳಂಬವಾದ ಕೆಲಸಗಳನ್ನು ಮುಗಿಸಿಬಿಡಿ. ಅಧಿಕವಾದ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 5