ನಿತ್ಯಭವಿಷ್ಯ: ಈ ರಾಶಿಯವರಿಂದು ಧೈರ್ಯದಿಂದ ಮುನ್ನುಗ್ಗಿದರೆ ಪ್ರಗತಿ ಸಾಧ್ಯವಾಗಲಿದೆ

Nitya-Bhavishya-vvani-1-2-1
Published on

ಮೇಷ: ಆಕಸ್ಮಿಕವಾದ ಸಂದರ್ಭವೊಂದರಲ್ಲಿ ಅಪರೂಪದ ಗೆಳೆತನ ಒದಗಿಬರುವ ಅಚ್ಚರಿಯ ಸಿದ್ಧಿ ಸಾಧ್ಯವಾಗಲಿದೆ. ಶುಭಸಂಖ್ಯೆ: 4

ವೃಷಭ: ಹಳೆಯ ಕಡತಗಳಲ್ಲಿರುವ ಅನಗತ್ಯವಾದ ಕಾಗದಗಳನ್ನು ತೆಗೆದು ಸ್ವಚ್ಛಗೊಳಿಸಿ. ಇದು ಹೊಸ ಉತ್ಸಾಹ ತರಲಿದೆ. ಶುಭಸಂಖ್ಯೆ: 6

ಮಿಥುನ: ಕಷ್ಟಗಳು ಬೆನ್ನು ಹತ್ತಿವೆ ಎನಿಸಿದಾಗಲೆಲ್ಲ ಮಹಾವಿಷ್ಣುವನ್ನು ಭಕ್ತಿಯಿಂದ ಸ್ತುತಿ ಮಾಡಿ. ಯೋಗಕ್ಷೇಮಕ್ಕೆ ಅವಕಾಶ. ಶುಭಸಂಖ್ಯೆ: 8

ಕಟಕ: ಪ್ರಸ್ತುತ ವರ್ತಮಾನವು ನಿಮಗೆ ಧನಲಾಭ ತರುವ ಸಾಧ್ಯತೆಯನ್ನು ಹೊಂದಿಲ್ಲ. ಹೀಗಾಗಿ ಖರ್ಚಿಗೆ ಕಡಿವಾಣ ಹಾಕಿ. ಶುಭಸಂಖ್ಯೆ: 2

ಸಿಂಹ: ಬರೇ ವೃತ್ತಿಯೇ ಜೀವನವನ್ನು ಆವರಿಸದಿರಲಿ. ವೃತ್ತಿಬದುಕಿನ ಆಚೆ ಬೇರೆಯೇ ಬದುಕಿದೆ ಎಂದೂ ತಿಳಿದುಕೊಂಡಿರಿ. ಶುಭಸಂಖ್ಯೆ: 9

ಕನ್ಯಾ: ಸ್ವಲ್ಪ ಆಯಾಸ, ಸೊಂಟ ನೋವು ಎಂದು ನಿರ್ಲಕ್ಷ್ಯ ಮಾಡುವುದು ಬೇಡ. ಮನೆವೈದ್ಯರ ಸಲಹೆಯನ್ನು ಸ್ವೀಕರಿಸಿ. ಶುಭಸಂಖ್ಯೆ: 1

ತುಲಾ: ಯಾವುದೋ ಅವ್ಯಕ್ತ ಭಯಕ್ಕೆ ಬೆದರಬೇಡಿ. ಧೈರ್ಯದಿಂದ ಮುನ್ನುಗ್ಗಿದರೆ ನಿಮಗೇ ಪ್ರಗತಿ ಸಾಧ್ಯವಾಗಲಿದೆ. ಶುಭಸಂಖ್ಯೆ: 3

ವೃಶ್ಚಿಕ: ಕಾಲೆಳೆಯುವ ಜನರು ಇಂದು ಸಿಗಲಿದ್ದಾರೆ. ಆ ಕಾರಣಕ್ಕಾಗಿ ಉದ್ವಿಗ್ನಗೊಳ್ಳದೆ ಶಾಂತ ಮನದಿಂದಿರಿ. ಜಯವಿದೆ. ಶುಭಸಂಖ್ಯೆ: 5

ಧನುಸ್ಸು: ಬಾಳಿನಲ್ಲಿ ಸುಂಟರಗಾಳಿ ಬೀಸುವಂತಹ ಸಾಧ್ಯತೆ ಹೆಚ್ಚು. ಆತ್ಮವಿಶ್ವಾಸದಿಂದ ಅದನ್ನು ಎದುರಿಸಿ ನಿರಾಳತೆಯಿಂದಿರಿ. ಶುಭಸಂಖ್ಯೆ: 7

ಕುಂಭ: ಅಕ್ಕಪಕ್ಕದ ಮನೆಯವರಲ್ಲಿ ನಿಮ್ಮ ಕುರಿತು ಗೌರವ ವೃದ್ಧಿಯಾಗಲಿದೆ. ಪ್ರಶಂಸೆಗಳಿಂದ ಕುಟುಂಬದಲ್ಲಿ ಹರ್ಷವಿದೆ. ಶುಭಸಂಖ್ಯೆ: 4

ಮಕರ: ಆರ್ಥಿಕ ವ್ಯವಹಾರಗಳ ಬಗ್ಗೆ ತá-ಸು ಎಚ್ಚರ ವಹಿಸಲು ಸಾಧ್ಯವಾದರೆ ಒದ್ದಾಡುವ ಸ್ಥಿತಿಯನ್ನು ದೂರವಿಡಬಹುದು. ಶುಭಸಂಖ್ಯೆ: 8

ಮೀನ: ದೈನಂದಿನ ಏರುಪೇರುಗಳು ಇದ್ದೇ ಇರುತ್ತವೆ. ಅವುಗಳನ್ನು ಮೀರಿ ಪ್ರಯತ್ನಿಸಿದರೆ ನಿಮ್ಮ ಗುರಿಯನ್ನು ಸಾಧಿಸಬಹುದು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net