ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಮನಸ್ಸಿಗೆ ಶಾಂತಿ, ಧನಲಾಭ, ಸುಖ ಭೋಜನ ಪ್ರಾಪ್ತಿ

Nitya Bhavisya Vijayavani
Published on

ಮೇಷ: ಸ್ವಪ್ರಯತ್ನದಿಂದ ಕಾರ್ಯಸಿದ್ಧಿ. ವ್ಯವಹಾರದಲ್ಲಿ ಮಾತಿನ ಚಕಮಕಿ. ಅನವಶ್ಯಕ ವಸ್ತುಗಳ ಖರೀದಿ. ಸಾಲದಿಂದ ಮುಕ್ತಿ. ಶುಭಸಂಖ್ಯೆ: 9

ವೃಷಭ: ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಮಾನಸಿಕ ಗೊಂದಲ ಉಂಟಾದೀತು. ಉದ್ಯೋಗದಲ್ಲಿ ಬಡ್ತಿ ದೊರೆತು ಸಮಾಧಾನ. ಶುಭಸಂಖ್ಯೆ:1

ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಹಣಕಾಸಿನ ವ್ಯವಹಾರದಲ್ಲಿ ಎಚ್ಚರ ವಹಿಸಿ. ನಿಮ್ಮ ಪ್ರತಿಭೆಗೆ ತಕ್ಕ ಗೌರವ ದೊರೆಯಲಿದೆ. ಶುಭಸಂಖ್ಯೆ: 5

ಕಟಕ: ಕೆಲಸ ಕಾರ್ಯಗಳಲ್ಲಿ ಜಯ. ನೆರೆಹೊರೆಯವರ ಬಳಿ ಸೌಜನ್ಯದಿಂದ ವರ್ತಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ, ಶುಭಸಂಖ್ಯೆ:6

ಸಿಂಹ: ವ್ಯಾಸಂಗಕ್ಕೆ ತೊಂದರೆ. ಶತ್ರುಭಯ. ಕುಲದೇವರನ್ನು ಪೂಜಿಸಿ. ತೀರ್ಥಕ್ಷೇತ್ರ ದರ್ಶನ. ಅತಿಯಾದ ನಿದ್ರೆ ಒಳ್ಳೆಯದಲ್ಲ. ಭೂಲಾಭ. ಶುಭಸಂಖ್ಯೆ: 3

ಕನ್ಯಾ: ರಿಯಲ್‌ ಎಸ್ಟೇಟ್‌ನವರಿಗೆ ಲಾಭ. ವಿವಾಹಕ್ಕೆ ಅಡಚಣೆ, ವಾಹನದಿಂದ ಅಪಘಾತ, ಸಾಲ ಮಾಡುವ ಸಂದರ್ಭ ಬಂದೀತು. ಶುಭಸಂಖ್ಯೆ: 7

ತುಲಾ: ಮನಸ್ಸಿಗೆ ಶಾಂತಿ, ಧನಲಾಭ, ಸುಖ ಭೋಜನ ಪ್ರಾಪ್ತಿ. ಮನಶೇಷ. ಸ್ವಲ್ಪ ಮಟ್ಟಿನ ಹಣ ಬರುವುದಾದರೂ ಉಳಿಯುವುದಿಲ್ಲ. ಶುಭಸಂಖ್ಯೆ: 9

ವೃಶ್ಚಿಕ: ಸಲ್ಲದ ಅಪವಾದ. ಉದ್ಯೋಗದಲ್ಲಿ ತೊಂದರೆ, ಅನಾರೋಗ್ಯ ಕಾಡಬಹುದು. ಬಂಧುಗಳಿಂದ ಕಿರಿಕಿರಿ. ವಿಪರೀತ ವ್ಯಸನ ಬೇಡ. ಶುಭಸಂಖ್ಯೆ: 4

ಧನುಸ್ಸು: ಸಾಲದಿಂದ ಮುಕ್ತಿ. ದ್ರವ್ಯಲಾಭ ವಿದ್ಯಾಭ್ಯಾಸದಲ್ಲಿ ಪ್ರಗತಿ. ದೂರ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು, ಶುಭಸಂಖ್ಯೆ: 8

ಮಕರ: ಶುಭ ಕಾರ್ಯದಲ್ಲಿ ಭಾಗಿ, ನಂಬಿದವರಿಂದ ಮೋಸ, ಅಲಸ್ಯ ಭಾವ. ಶೀತ ಸಂಬಂಧ ರೋಗಗಳು. ಪಿತ್ತಾರ್ಜಿಶ ಆಸ್ತಿ ಪ್ರಾಪ್ತಿ, ಶುಭಸಂಖ್ಯೆ : 4

ಕುಂಭ: ಶುಭ ವಾರ್ತೆ ಕೇಳುವಿರಿ. ಅಧಿಕಾರಿಗಳಲ್ಲಿ ಕಲಹ. ಸ್ತ್ರೀಯರಿಂದ ನೆರವು, ಮಿತ್ರರಲ್ಲಿ ದ್ವೇಷ. ಅನಾರೋಗ್ಯ, ನಿಂದನೆ, ಬೇಸರ, ಶುಭನಂಖ್ಯೆ : 2

ಮೀನ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ನೀಚ ಜನರಿಂದ ತೊಂದರೆಯಿದೆ ಎಚ್ಚರ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಭೂಮಿ ಕೊಳ್ಳುವಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net