ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಲಾಭ ಯೋಗ ಇದೆ

Nitya-Bhavishya-vvani-1-2-1
Published on

ಮೇಷ: ಮಗನ ವಿವಾಹದ ನಿರೀಕ್ಷೆಯಲ್ಲಿದ್ದರೆ ಶುಭ ಸುದ್ದಿ. ಉನ್ನತ ವಿದ್ಯಾಭ್ಯಾಸಕ್ಕೆ ವಿಶೇಷ ಅವಕಾಶ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ದಿ. ಶುಭಸಂಖ್ಯೆ: 9

ವೃಷಭ: ಆತ್ಮವಿಶ್ವಾಸವಿರಲಿ, ಜಯ ನಿಮ್ಮದೇ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ. ವಿಘ್ನ ನಿವಾರಣೆಗೆ ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 7

ಮಿಥುನ: ಸಾರ್ವಜನಿಕ ರಂಗದಲ್ಲಿ ಪ್ರಶಂಸೆ. ಆರೋಗ್ಯದಲ್ಲಿ ಏರುಪೇರು. ವೈದ್ಯರನ್ನು ಭೇಟಿಯಾಗಿ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 6 

ಕಟಕ: ಈ ದಿನ ನಿಮಗೆ ಹರ್ಷದಾಯಕವಾಗಿರುತ್ತದೆ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ತಾಯಿಯ ಸಲಹೆಯನ್ನು ಸ್ವೀಕರಿಸಿ. ಶುಭಸಂಖ್ಯೆ: 4

ಸಿಂಹ: ಅನಿರೀಕ್ಷಿತ ಧನಲಾಭ ಯೋಗ ಇದೆ. ಮಾನಸಿಕ ಕಿರಿಕಿರಿ ಆಗುವ ಸಾಧ್ಯತೆ. ಕುಟುಂಬದಲ್ಲಿ ಶುಭಕಾರ್ಯದ ಸಡಗರ. ಶುಭಸಂಖ್ಯೆ: 3

ಕನ್ಯಾ: ಮಕ್ಕಳ ವಿದ್ಯಾಭ್ಯಾಸ ವಿಚಾರವಾಗಿ ಸ್ವಲ್ಪ ಹಿನ್ನಡೆಯಾದೀತು, ಆತಂಕ ಬೇಡ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಶುಭಸಂಖ್ಯೆ: 4

ತುಲಾ: ನಿಮ್ಮ ಪ್ರಭಾವವನ್ನು ಬೇರೆಯವರು ಬಳಸಿಕೊಳ್ಳುವ ಸಾಧ್ಯತೆ ಇದೆ. ಅಭಿಮಾನದಿಂದ ವರ್ತಿಸಿ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 3

ವೃಶ್ಚಿಕ: ಆರೋಗ್ಯದಲ್ಲಿ ನಿರಂತರ ಸಮಸ್ಯೆ ಬರಬಹುದು. ಹಿರಿಯರ ಸಲಹೆ ತೆಗೆದುಕೊಳ್ಳಿ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 6

ಧನುಸ್ಸು: ಧಾರ್ವಿುಕ ಆಸಕ್ತಿ. ಭೂಮಿಯಿಂದ ಲಾಭ. ಮನೆಯಲ್ಲಿ ಮಗನ ವಿವಾಹದ ವಿಚಾರಕ್ಕೆ ಚಾಲನೆ. ಹಣಕಾಸಿನ ಸಮಸ್ಯೆ ಕಾಡೀತು. ಶುಭಸಂಖ್ಯೆ: 7

ಮಕರ: ಉದ್ಯೋಗ ವ್ಯವಹಾರದಲ್ಲಿ ನಿರಂತರ ಸಮಸ್ಯೆ ಬರಬಹುದು. ಅಜ್ಞಾತ ರೋಗ ಕಾಡಬಹುದು. ನುರಿತ ವೈದ್ಯರನ್ನು ಸಂರ್ಪಸಿ. ಶುಭಸಂಖ್ಯೆ: 2

ಕುಂಭ: ಅವಿವಾಹಿತರಿಗೆ ಶುಭ ಸುದ್ದಿ. ವಂಚನೆಗೆ ಒಳಗಾಗುವ ಸಾಧ್ಯತೆ. ಕೋರ್ಟ್ ವ್ಯವಹಾರದಲ್ಲಿ ಜಯ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 3

ಮೀನ: ಉದ್ಯೋಗದಲ್ಲಿ ಪ್ರಗತಿ. ಹಿರಿಯರ ಆಶೀರ್ವಾದ ಶ್ರೀರಕ್ಷೆಯಾಗಲಿದೆ. ಉಮಾಮಹೇಶ್ವರನನ್ನು ಅನನ್ಯ ಭಾವದಿಂದ ಭಜಿಸಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net