ಈ ರಾಶಿಯವರಿಗಿಂದು ಸ್ತ್ರೀಯರಿಂದ ಅನುಕೂಲ, ನೆರೆಯವರಿಂದ ಸಹಕಾರ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಋಣಬಾಧೆಯಿಂದ ಕಿರಿಕಿರಿ. ಮಕ್ಕಳಿಂದ ಆರ್ಥಿಕ ಸಹಾಯ. ಮೋಜು-ಮಸ್ತಿಯ ಆಲೋಚನೆ. ಶುಭಸಂಖ್ಯೆ: 9

ವೃಷಭ: ವಾಹನ ದುರಸ್ತಿಗೆ ಖರ್ಚು. ತಾಯಿಯಿಂದ ಸಹಾಯ. ಧಾರ್ವಿುಕ ಆಚರಣೆಗಳು. ಅಹಂಕಾರ. ಅಧಿಕ ಕೋಪ. ಅನಾರೋಗ್ಯ. ಶುಭಸಂಖ್ಯೆ: 7

ಮಿಥುನ: ಮಕ್ಕಳಿಂದ ಲಾಭ. ಪ್ರಯಾಣದಲ್ಲಿ ಯಶ. ಕಾರ್ಯಜಯ. ಅಧರ್ಮದ ಸಂಪಾದನೆ ಬೇಡ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 1

ಕಟಕ: ಲಾಭದಲ್ಲಿ ಕುಸಿತ. ಅನಿರೀಕ್ಷಿತ ಖರ್ಚು. ಕುಟುಂಬದಲ್ಲಿ ಅಸಹಕಾರ. ಕಲ್ಪನೆಗಳಲ್ಲಿ ಕಾಲಹರಣ. ಸ್ಥಿರಾಸ್ತಿ ವಾಹನ ಯೋಗ. ಶುಭಸಂಖ್ಯೆ: 3

ಸಿಂಹ: ಉದ್ಯೋಗ ಲಾಭ. ವ್ಯವಹಾರದಲ್ಲಿ ಯಶಸ್ಸು. ಉತ್ತಮ ಹೆಸರು ಮತ್ತು ಪ್ರಶಂಸೆ. ದೂರ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 9

ಕನ್ಯಾ: ಧನಾಗಮನ. ಉತ್ತಮ ಹೆಸರು. ತಲೆಗೆ ಮತ್ತು ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಪ್ರಯಾಣ ವಿಘ್ನ. ಶುಭಸಂಖ್ಯೆ: 6

ತುಲಾ: ಆಪತ್ತಿನಿಂದ ಪಾರು. ವ್ಯಾಜ್ಯಗಳಲ್ಲಿ ಜಯ. ವ್ಯವಹಾರದಲ್ಲಿ ಅನುಕೂಲ. ಸಂಗಾತಿಯಿಂದ ನೋವು. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 7

ವೃಶ್ಚಿಕ: ಅವಮಾನ ಮತ್ತು ಅಪವಾದಗಳು. ಸಾಲದ ಚಿಂತೆ. ಮೋಜು ಮಸ್ತಿಯಲ್ಲಿ ಕಾಲಹರಣ. ಶತ್ರು ಕಾಟ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 8

ಧನುಸ್ಸು: ಭಾವನೆಗಳ ತೊಳಲಾಟ. ತಂದೆಯಿಂದ ಸಹಕಾರ. ಸರ್ಕಾರಿ ಕಾರ್ಯದಲ್ಲಿ ಯಶ. ಸಾಲಬಾಧೆಯಿಂದ ಮುಕ್ತಿ. ಶತ್ರು ಸಂಹಾರ. ಶುಭಸಂಖ್ಯೆ:3

ಮಕರ: ಪ್ರೇಮದಲ್ಲಿ ಹಿನ್ನಡೆ. ಅಧಿಕ ಒತ್ತಡ, ಮಕ್ಕಳ ನಡವಳಿಕೆಯಿಂದ ಬೇಸರ. ಉದ್ಯೋಗ ಅನುಕೂಲ. ಸ್ಥಿರಾಸ್ತಿಯಿಂದ ತೊಂದರೆ. ಶುಭಸಂಖ್ಯೆ: 2

ಕುಂಭ: ಭಾವನಾತ್ಮಕ ಯೋಜನೆ. ಸ್ತ್ರೀಯರಿಂದ ಅನುಕೂಲ. ನೆರೆಯವರಿಂದ ಸಹಕಾರ. ಪ್ರಯಾಣದಲ್ಲಿ ಯಶ. ತಂದೆಯಿಂದ ಅದೃಷ್ಟ. ಶುಭಸಂಖ್ಯೆ: 6

ಮೀನ: ಕುಟುಂಬ ಕಲಹ. ಶತ್ರು ಕಾಟ. ಮಾನಸಿಕ ಒತ್ತಡ ಮತ್ತು ತೊಳಲಾಟ. ಅನಾರೋಗ್ಯ. ಕೋರ್ಟ್ ಕೇಸ್​ಗಳಿಂದ ನೆಮ್ಮದಿ ಭಂಗ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net